ಸುಜ್ಞಾನದ ಮಾರ್ಗ ತೋರಿಸುವನೇ ನಿಜವಾದ ಗುರು

KannadaprabhaNewsNetwork |  
Published : Jul 23, 2024, 12:31 AM IST
ಮಠದ ಭಕ್ತರು ಯಚ್ಚರ ಶ್ರೀಗಳಿಗೆ ಸನ್ಮಾನ ಮಾಡುತ್ತಿದ್ದಾರೆ | Kannada Prabha

ಸಾರಾಂಶ

ಗುರು ಭಕ್ತರ ಸಂಕಟ ನಿವಾರಿಸುವವನಾಗಬೇಕು. ವಿನಃ ಕೇವಲ ಭಕ್ತರ ಜೇಬು ನೋಡುವಂತವರಾಗಬಾರದು

ನರಗುಂದ: ಜಗತ್ತಿನಲ್ಲಿ ದೇವರಿಗೆ ಸಮಾನವಾದ ಸ್ಥಾನಮಾನ ಗುರುವಿಗೆ ನೀಡಿದ್ದೇವೆ ಎಂದು ಶ್ರೀ ಯಚ್ಚರಸ್ವಾಮಿಗಳ ಗವಿಮಠದ ಯಚ್ಚರ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ದೇವರಿಗೆ ಸಮಾನವಾದ ಸ್ಥಾನಮಾನವನ್ನು ಗುರುವಿಗೆ ನೀಡಿದ್ದೇವೆ. ಗುರು ಭಕ್ತರ ಸಂಕಟ ನಿವಾರಿಸುವವನಾಗಬೇಕು. ವಿನಃ ಕೇವಲ ಭಕ್ತರ ಜೇಬು ನೋಡುವಂತವರಾಗಬಾರದು. ಗುರು ಎಂದರೆ ಅಂಧಕಾರ ಕಳೆದು ಸುಜ್ಞಾನದ ಮಾರ್ಗ ತೋರಿಸುವನೇ ನಿಜವಾದ ಗುರು ಎಂದರು.

ಪ್ರವಚನಕಾರ ಗಣೇಶ ಹೊರಪೇಟೆ ಮಾತನಾಡಿ, ಗುರುವಾದವರು ಎಲ್ಲರನ್ನೂ ಸಮಾನವಾಗಿ ನೋಡುವನಾಗಿರಬೇಕು. ಆತ ಯಾರಲ್ಲಿಯೂ ಬೇಧ ಉಳ್ಳವನಾಗಿರಬಾರದು ಎಂದರು.

ಈ ಸಂದರ್ಭದಲ್ಲಿ ಲಕ್ಕುಂಡಿ ಗಣ್ಯಉದ್ಯಮಿ ಗೋವಿಂದಪ್ಪ ಬಡಿಗೇರ, ವಿದ್ಯಾಶ್ರೀ ಬಡಿಗೇರ, ರಥಶಿಲ್ಪಿ ನಾಗಲಿಂಗಪ್ಪ ಬಡಿಗೇರ, ದೇವಮ್ಮ ಬಡಿಗೇರ, ಬಸವರಾಜ ಮುದಕವಿ , ಡಾ.ವಿಜಯಕುಮಾರ ಗೋಗೇರಿ, ಶಿವಾನಂದ ಪಸಲಾದಿ, ಶಿವಾನಂದ ಮುಷ್ಟಿಗೇರಿ, ಮಲ್ಲಯ್ಯ ಚಿಕ್ಕುರಮಠ, ಪಾಂಡುರಂಗ ಪತ್ತಾರ, ಬಸವರಾಜ ಬಳ್ಳೊಳ್ಳಿ, ದೇವರಾಜ ಜಂಗವಾಡ, ಯೋಗೇಶ ಚಾಗಣ್ಣವರ, ಜಂಬಣ್ಣ ದಿಂಡಿ, ರವಿ ದೊಡಮನಿ, ಶಿವಾನಂದ ಕೊಂತಿಕಲ್, ಕಾಳಪ್ಪ ಕುಪ್ಪಸ್ತ, ಮುದಿವೀರಪ್ಪ ಕರ್ಕಿಕಟ್ಟಿ, ಶಂಕರಾಚಾರ್ಯರ ಪತ್ತಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎಚ್ .ವೈ.ಬ್ಯಾಡಗಿ ಸ್ವಾಗತಿಸಿದರು, ಸುನೀಲ ಕಳಸದ ನಿರೂಪಿಸಿದರು, ಪ್ರಭಾಕರ್ ಉಳ್ಳಾಗಡ್ಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ