ಕನ್ನಡಪ್ರಭ ವಾರ್ತೆ ಕಾಗವಾಡ
ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಶ್ರೀ ವರ್ಧಮಾನ ಶಿಕ್ಷಣ ಸಂಸ್ಥೆಯ ನ್ಯೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಹುತೇಕರು ಸೋಮಾರಿಗಳಾಗುತ್ತಿದ್ದು, ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೇ ವಿದ್ಯಾರ್ಥಿಗಳು ಪರೀಕ್ಷೆ ಬಂದಾಗ ಓದಿದರಾಯಿತು ಎನ್ನುವ ಮನೋಭಾವ ಬಿಟ್ಟು ಶಿಕ್ಷಕರು ಮಾಡಿದ ಪಾಠವನ್ನು ಮನಗಂಡು ಅಂದೇ ಅದನ್ನು ಓದಬೇಕು. ಜೊತೆಗೆ ವಿದ್ಯಾರ್ಥಿಗಳು ಓದಿನ ಜತೆ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ಭಾಗವಹಿಸಬೇಕು. ಅಂದಾಗ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ, ವಿದ್ಯಾರ್ಥಿಗಳು ಇಂದು ಓದುವ, ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಅಸ್ಕಿ ಮಾತನಾಡಿ, ಶ್ರದ್ಧೆ, ಭಕ್ತಿ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಯಾರು ಬೇಕಾದರೂ ಪ್ರತಿಯೊಂದು ರಂಗದಲ್ಲಿಯೂ ಸಾಧನೆಯನ್ನು ಮಾಡಬಹುದು. ಸಾಧಕರಿಗೆ ಸಹನೆ ಅತ್ಯವಶ್ಯಕವಾಗಿರಲೇಬೇಕು ಎಂದರು.ಈ ವೇಳೆ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹಾಗೂ ಅರುಣಕುಮಾರ ಯಲಗುದ್ರಿ ಸೇರಿದಂತೆ ಮತ್ತಿತರನ್ನು ಸಂಸ್ಥೆಯ ಪರವಾಗಿ ಅಧ್ಯಕ್ಷ ಶ್ರೀಕಾಂತ ಅಸ್ಕಿ, ಉಪಾಧ್ಯಕ್ಷ ರಾಜೇಂದ್ರ ಪಾಟೀಲರು ಸನ್ಮಾನಿಸಿದರು. ಈ ವೇಳೆ ಶಿಕ್ಷಣ ಪ್ರೇಮಿಗಳಾದ ಎ.ಸಿ.ಪಾಟೀಲ, ಆರ್.ಬಿ.ಪಾಟೀಲ, ಯಂಕಣ್ಣ ಬಳೋಜ, ಬಸವರಾಜ ಗುಮಟಿ, ಪಿ.ಎಂ.ಎಲಿಗೌಡ, ಪ್ರಾಚಾರ್ಯ ಧರೆಪ್ಪ ತೆರದಾಳ ಇದ್ದರು.ಇತ್ತೀಚಿನ ದಿನಗಳಲ್ಲಿ ಬಹುತೇಕರು ಸೋಮಾರಿಗಳಾಗುತ್ತಿದ್ದು, ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೇ ವಿದ್ಯಾರ್ಥಿಗಳು ಪರೀಕ್ಷೆ ಬಂದಾಗ ಓದಿದರಾಯಿತು ಎನ್ನುವ ಮನೋಭಾವ ಬಿಟ್ಟು ಶಿಕ್ಷಕರು ಮಾಡಿದ ಪಾಠವನ್ನು ಮನಗಂಡು ಅಂದೇ ಅದನ್ನು ಓದಬೇಕು. ಜೊತೆಗೆ ವಿದ್ಯಾರ್ಥಿಗಳು ಓದಿನ ಜತೆ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ಭಾಗವಹಿಸಬೇಕು. ಅಂದಾಗ ಆರೋಗ್ಯ ಕಾಪಾಡಿಕೊಳ್ಳಬಹುದು.
-ಅರುಣಕುಮಾರ ಯಲಗುದ್ರಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್ ಇಂಜನಿಯರ್ ಪ್ರಶಸ್ತಿ ಪುರಸ್ಕೃತರು.ನಮ್ಮಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿ, ಕ್ರೀಡಾ ಮನಸ್ಸು ಮುಖ್ಯ. ನೀವು ಕಾಲೇಜು ಅವಧಿಯಲ್ಲಿ ಮಾಡುವ ಸಾಧನೆಗಳು ನಿಮ್ಮ ಜೀವಿತಾವಧಿಯವರೆಗೂ ನೆನಪಿನಲ್ಲಿರುತ್ತದೆ. ವಿದ್ಯಾರ್ಥಿಗಳು ಇಂದು ಓದುವ, ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು.
-ಅಪ್ಪಾಸಾಹೇಬ ಅಲಿಬಾದಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತರು.