ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವು ಕುಸಿಯುತ್ತಿದೆ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪಿಎಸ್‌ಐ ಸುನಿಲ್ ಐರೋಡಗಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಬೂದಿಕೋಟೆಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ಕೆ.ಆರ್.ಪುರಂ ಬೆಂಗಳೂರು ಸಮಾಜಕಾರ್ಯ ವಿಭಾಗದ ವತಿಯಿಂದ ''''ಯುವ ಜನತೆಯ ಭವಿಷ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವ'''' ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಪರಾಧ ಪ್ರಕರಣ ಹೆಚ್ಚಳ
ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಅತಿಯಾಗಿ ಬಳಕೆ ಮಾಡುವುದರಿಂದ ಮೊಬೈಲ್‌ನ ಗೀಳು ಹೆಚ್ಚುತ್ತಿದೆ. ನಕಲಿ ಐಡಿಗಳ ಮೂಲಕ ಸ್ನೇಹವನ್ನು ಬೆಳೆಸಿ ,ನಂಬಿಸಿ ,ಮೋಸ ಮಾಡುತ್ತಾರೆ, ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾರು ಮೋಸ ಹೋಗಬಾರದು, ಹಣವನ್ನು ದ್ವಿಗುಣ ಮಾಡಿಕೋಡುವುದಾಗಿ ಆಸೆಯನ್ನು ತೋರಿಸುವ ಮೂಲಕ ಮೋಸ ಮಾಡುವುದು ಈ ರೀತಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆಸರ್ಕಾರಿ ಶಾಲೆಯ ಮತ್ತು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದು ನಿಮ್ಮ ತಂದೆ ತಾಯಿ ಗಳು ತುಂಬ ಕಷ್ಟ ಪಟ್ಟು ಓದಿಸುತ್ತಿದ್ದು, ನೀವೂ ಸಹ ಅವರ ಕಷ್ಟವನ್ನು ವ್ಯರ್ಥ ಮಾಡದೇ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆಯನ್ನು ನೀಡಿದರು.
ಓದಿನ ಕಡೆ ಗಮನಹರಿಸಿಸಂಗಮ ನಮ್ಮ ಕ್ಲಿನಿಕ್ ಆಪ್ತ ಸಮಾಲೋಚಕ ಆರ್. ನವ್ಯ ಮಾತನಾಡಿ ಯುವ ಜನತೆಯ ಮೇಲೆ ಸಾಮಾಜಿಕ ಜಾಲತಾಣಗಳು ಹೆಚ್ಚು ಹೆಚ್ಚು ಸಮಸ್ಯೆಗಳನ್ನು ಉಂಟು ಮಾಡುತ್ತಿವೆ ಇದನ್ನು ತಪ್ಪಿಸಿ ಓದಿನ ಕಡೆಗೆ ಹೆಚ್ಚು ಗಮನ ಹರಸಬೇಕು. ಸಾಮಾಜಿಕ ಮಾಧ್ಯಮಗಳ ಏರಿಕೆ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮವು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಅದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವ ವಿದ್ಯಾರ್ಥಿಗಳು ನಿದ್ರೆಯ ತೊಂದರೆ, ದಣಿದ ಕಣ್ಣುಗಳು, ಅವರ ದೇಹದ ಕೆಟ್ಟ ನೋಟ, ಖಿನ್ನತೆ, ಆತಂಕ, ಸೈಬರ್ಬುಲ್ಲಿಂಗ್ ಮತ್ತು ಇತರ ಸಮಸ್ಯೆಗಳನ್ನು ಹೊಂದಿರಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಅನೇಕ ಸಾಮಾನ್ಯ ಇಂಟರ್ನೆಟ್ ಬಳಕೆದರಾರು 2 ಮತ್ತು 11 ವರ್ಷದೊಳಗಿನ ಮಕ್ಕಳು ಆಗಿದ್ದಾರೆ ಎಂದರು.ಮೊಬೈಲ್ ದುರ್ಬಳಕೆ ಬೇಡ
ಒಬ್ಬ ವ್ಯಕ್ತಿಯು ತಮ್ಮ ಸಮಯದ ಶೇ.25ರಷ್ಟನ್ನು ಅನ್‌ಲೈನ್‌ನಲ್ಲಿ ಬ್ಲಾಗ್‌ಗಳನ್ನು ಓದಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂವಹಿಸಲು ಕಳೆಯುತ್ತಾರೆ. ಇದಲ್ಲದೇ ವಿದ್ಯಾರ್ಥಿಗಳು ಈ ವೇದಿಕೆಗಳ ಮೇಲೆ ಅನಾರೋಗ್ಯಕರ ಅವಲಂಬನೆಯನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ತಪ್ಪಿಸಬೇಕು ಅವಶ್ಯಕತೆ ಇರುಷ್ಟು ಮಾತ್ರ ಮೊಬೈಲ್ ಬಳಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಮಾಲಿನಿ, ಉಪನ್ಯಾಸಕರಾದ ಮಮತ.ವಿ ನರಸಿಂಹಪ್ಪ ಬಿ.ಎಂ ವಸಂತ್ ಕುಮಾರ್ , ಶ್ಯಾಮ್ ಸುಂದರ್.ಎನ್
ಸಮಾಜಕಾರ್ಯ ವಿಭಾಗದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಮನೋಜ್ ಕುಮಾರ್.ಎಸ್, ಸುಷ್ಮಾ.ಎಸ್, ಜೋಸೆಪ್ ಥಾಮಸ್, ಅಮರೀನಾ ಚಾಕೋ ಇದ್ದರು.