)
ಸಂಡೂರು: ಶೌರ್ಯ, ಧೈರ್ಯ,ಸ್ವಾಭಿಮಾನ ಹಾಗೂ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಸಮಾಜ ವಾಲ್ಮೀಕಿ ನಾಯಕ ಸಮಾಜ ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಅಭಿಪ್ರಾಯಪಟ್ಟರು.
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯಗಳಲ್ಲಿ ಒಂದಾಗಿದೆ. ಶಿವನಿಗೆ ಕಣ್ಣುಕೊಟ್ಟ ಬೇಡರ ಕಣ್ಣಪ್ಪ, ರಾಮನಿಗೆ ಸಿಹಿಯಾದ ಹಣ್ಣು ಕೊಟ್ಟು ಉಪಚರಿಸಿದ ಶಬರಿ, ಉಗ್ರ ನರಸಿಂಹನ ಉಗ್ರರೂಪ ಶಾಂತವಾಗಿಸಿದ ಚುಂಚುಲಕ್ಷ್ಮಿ, ಗುರುಕಾಣಿಕೆಯಾಗಿ ಹೆಬ್ಬೆರಳನ್ನು ನೀಡಿದ ಏಕಲವ್ಯ, ವಿಜಯನಗರದ ಅರಸರ ರಕ್ಷಣೆಗಿದ್ದ ಖಾಸಾ ಪಡೆ, ಪಾಳೆಪಟ್ಟು ಕಟ್ಟಿ ಆಳ್ವಿಕೆ ನಡೆಸಿದವರು ಹಾಗೂ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಹಲಗಲಿ ಬೇಡರು ವಾಲ್ಮೀಕಿ ನಾಯಕ ಸಮಾಜದವರು. ಇಂತಹ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದರು.
ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಉಪನ್ಯಾಸ ನೀಡಿ, ಜಗತ್ತಿಗೆ ಅಕ್ಷರ ಸಂಸ್ಕೃತಿ, ಆಳುವ ಸಂಸ್ಕೃತಿ ಕಟ್ಟಿಕೊಟ್ಟು, ಸುಶಿಕ್ಷಿತ ಸಮಾಜದ ಕನಸು ಕಂಡಿದ್ದು ವಾಲ್ಮೀಕಿ, ಬೇಡ, ನಾಯಕ ಸಮಾಜ. ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ನೂರಾರು ಭಾಷೆಗಳಿಗೆ ಅನುವಾದಗೊಂಡಿದೆ. ಈ ಮಹಾಕಾವ್ಯದಲ್ಲಿ ನಾವು ಮಕ್ಕಳ, ಯುವಕರ ಹಾಗೂ ವೃದ್ಧರ ಬದುಕಿನ ಚಿತ್ರಣ ಕಾಣುತ್ತೇವೆ ಎಂದರು.ಸಂಸದ ಈ.ತುಕಾರಾಮ್ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದವರು ಶಿಕ್ಷಣ ಪಡೆದು, ಸ್ವಾವಲಂಬಿಗಳಾಗಲು ಶ್ರಮಿಸಬೇಕು. ಸುಪ್ರೀಂಕೋರ್ಟ್ ಮೂಲಕ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಜ್ಯೋತಿ, ಕವಿತಾ, ಮಹಾಸಭಾದ ನಗರಘಟಕದ ಅಧ್ಯಕ್ಷ ಪರಶುರಾಮ, ಉಪಾಧ್ಯಕ್ಷ ರಮೇಶ, ನಗರದ ಟ್ರಸ್ಟ್ ಅಧ್ಯಕ್ಷ ಅಡವಿಸ್ವಾಮಿ, ನಾಗರಾಜ, ಮಹಾಸಭಾದ ಗೌರವಾಧ್ಯಕ್ಷ ಡಿ.ಕೃಷ್ಣಪ್ಪ,ಉಪಾಧ್ಯಕ್ಷ ಎನ್.ಚಂದ್ರು, ಎಚ್.ಟಿ. ವೆಂಕಟೇಶ್, ಶ್ರೀನಿವಾಸ ಟಿ, ಮಂಜು ಬಾಳೆಕಾಯಿ, ಕೆ.ಪಂಪಾಪತಿ, ಹನುಮಯ್ಯ ಎನ್.ಪಿ, ಪ್ರಧಾನ ಕಾರ್ಯದರ್ಶಿ ಶಂಕರ್ ವಿ.ಎಸ್, ರ‍್ರಿಸ್ವಾಮಿ, ಆರ್.ರಘುನಾಥ್, ಕಾರ್ಯದರ್ಶಿ ಬಿ.ಶಂಕರ್, ಹುಲಿರಾಜ್ ಕೆ, ಹೊನ್ನೂರಸ್ವಾಮಿಯು, ಓಬಳೇಶ್ ಎಚ್, ನಾಗರಾಜಆರ್, ಖಜಾಂಚಿ ದೇವೇಂದ್ರಪ್ಪ ಎಂ, ಪ್ರಶಾಂತಯು, ಕಾನೂನು ಸಲಹೆಗಾರ ಕೃಷ್ಣಮೂರ್ತಿ ವಿ.ಜಿ, ಕುಮಾರಸ್ವಾಮಿ, ಪರಶುರಾಮ್ ಪಿ, ಜಿಲ್ಲಾ ನಿರ್ದೇಶಕ ಪ್ರಹ್ಲಾದ್ ಡಿ, ಎನ್.ನಿಂಗಪ್ಪ, ಗಂಗಣ್ಣ, ಬಿ.ವಸಂತಕುಮಾರ್, ಎಂ.ಆರ್. ಓಬಳೇಶ್, ಕೆ. ದೇವೇಂದ್ರ, ಕುಮಾರಸ್ವಾಮಿ ಜೆ.ಎಚ್, ಮಲ್ಲಿಕಾರ್ಜುನಎನ್, ಎನ್. ಹುಲುಗಪ್ಪ, ಕೆ.ಅಶ್ವಿನಿ,ವಿನೋದ ಕೆ, ಪಾರ್ವತಿ, ಕೊಟ್ರಮ್ಮ ಎನ್, ಸಮಾಜದ ಹಲವು ಮುಖಂಡರು ಹಾಗೂ ವಿವಿಧ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.