ಪರೋಪಕಾರದ ಮೌಲ್ಯ ಮುಖ್ಯ

KannadaprabhaNewsNetwork |  
Published : Dec 31, 2024, 01:00 AM IST
ಐಷಾರಾಮಿಗಿಂತ ಪರೋಪಕಾರದ ಮೌಲ್ಯ ಮುಖ್ಯ : ಪ್ರಕಾಶ ದೇಸಾಯಿ.  | Kannada Prabha

ಸಾರಾಂಶ

ಕೇವಲ ಉದ್ಯೋಗ, ಹಣ ಗಳಿಕೆ, ಐಷಾರಾಮಿ ಬದುಕು ಮಾತ್ರ ಜೀವನವಲ್ಲ. ಮಾನವನಾದ ಮೇಲೆ ಪರೋಪಕಾರದ ಮೌಲ್ಯ ಅಳವಡಿಸಿಕೊಳ್ಳುವುದು ಬಹು ಮುಖ್ಯ. ಅದರಲ್ಲೂ ಆರೋಗ್ಯ ಚಿಕಿತ್ಸೆಯಲ್ಲಿ ದುರ್ಬಲರ ಸಹಾಯಕ್ಕೆ ಸಬಲರು ಮುಂದಾಗಬೇಕಾದುದು ಮಾನವೀಯ ಕಾರ್ಯ ಎಂದು ಉದ್ಯಮಿ ಪ್ರಕಾಶ ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೇವಲ ಉದ್ಯೋಗ, ಹಣ ಗಳಿಕೆ, ಐಷಾರಾಮಿ ಬದುಕು ಮಾತ್ರ ಜೀವನವಲ್ಲ. ಮಾನವನಾದ ಮೇಲೆ ಪರೋಪಕಾರದ ಮೌಲ್ಯ ಅಳವಡಿಸಿಕೊಳ್ಳುವುದು ಬಹು ಮುಖ್ಯ. ಅದರಲ್ಲೂ ಆರೋಗ್ಯ ಚಿಕಿತ್ಸೆಯಲ್ಲಿ ದುರ್ಬಲರ ಸಹಾಯಕ್ಕೆ ಸಬಲರು ಮುಂದಾಗಬೇಕಾದುದು ಮಾನವೀಯ ಕಾರ್ಯ ಎಂದು ಉದ್ಯಮಿ ಪ್ರಕಾಶ ದೇಸಾಯಿ ಹೇಳಿದರು.

ಬನಹಟ್ಟಿಯಲ್ಲಿ ನೇತ್ರ ಸಮಸ್ಯೆ ಹೊಂದಿರುವ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ೪೦೦ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಒದಗಿಸಿ ಮಾತನಾಡಿದ ಅವರು, ಪ್ರತಿ ವರ್ಷ ನೂರಾರು ಬಡ ಕುಟುಂಬಗಳಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ನೆಮ್ಮದಿ ಕಂಡಿದ್ದೇನೆ. ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆಗಾಗಿ ಬಳಲುತ್ತಿರುವ ಕುಟುಂಬಗಳಿಗೆ ನೆರವಾಗುವುದು ಸಬಲರ ಆದ್ಯ ಕರ್ತವ್ಯವಾಗಿದೆ. ಆರೋಗ್ಯಕರ ಸಮಾಜವನ್ನಾಗಿಸಲು ಎಲ್ಲರೂ ಪಣ ತೊಡಬೇಕು ಎಂದು ಮನವಿ ನೀಡಿದರು.ಚಂದ್ರಕಾಂತ ಕಾಸರ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಸಮಾಜದ ಎರಡು ಆಧಾರ ಸ್ತಂಭಗಳು, ಸಮಾಜಮುಖಿ ಕಾರ್ಯ ಮಾಡಿದರೆ ಸಮಾಜ ಮತ್ತು ಸರ್ಕಾರ ಅವರನ್ನು ಗುರ್ತಿಸಿ ಗೌರವಿಸುತ್ತವೆ ಎಂಬುವುದಕ್ಕೆ ಮಹಾವೀರ ಸ್ವೀಟ್‌ನ ಉದ್ಯಮಿ ಪ್ರಕಾಶ ದೇಸಾಯಿ ಅವರೇ ನಿದರ್ಶನ ಎಂದರು.ಶ್ರೀಶೈಲ ಕೊಳಕಿ ಮಾತನಾಡಿ, ಕಳೆದ ೧೦ ವರ್ಷಗಳಿಂದ ಉಚಿತ ನೇತ್ರ ಚಿಕಿತ್ಸೆಗೆ ವೈದ್ಯರೊಂದಿಗೆ ಸಂಪರ್ಕಿಸಿ ಸಾವಿರಾರು ಜನರಿಗೆ ಸೇವೆ ಒದಗಿಸಿದ್ದಾರೆ. ಮಾನವೀಯ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯ ಮಾಡಬೇಕು ಎಂದು ತಿಳಿಸಿದರು. ಸರಸ್ವತಿ ದೇಸಾಯಿ, ಭೂಪಾಲ ಕಾನಗೊಂಡ, ಮಹಾವೀರ ಕೊಟ್ಟಲಗಿ, ಅಮೃತಾ ದೇಸಾಯಿ, ಮಹಾವೀರ ಭಿಲವಡಿ, ವೆಂಕಟೇಶ ಭಿಲವಡಿ, ಎ.ಆರ್.ಗಡ್ಡೇಕರ ಸೇರಿದಂತೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್