ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ನಡೆದ ಅಡ್ಡ ಪಲ್ಲಕ್ಕಿ ಉತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ, ಶಿವದೀಕ್ಷಾ ಕಾರ್ಯಕ್ರಮ ಹಾಗೂ ವಧು-ವರರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು, ವೀರಶೈವ ಲಿಂಗಾಯತ ಪರಂಪರೆಯ ಇತಿಹಾಸವನ್ನು ಕೇವಲ ಪುರಾಣಗಳ ದೃಷ್ಟಿಯಿಂದ ಮಾತ್ರ ನೋಡದೇ, ಐತಿಹಾಸಿಕ ದಾಖಲೆಗಳು, ಪುರಾತತ್ವದ ಆಧಾರಗಳು ಹಾಗೂ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ದೇಶದ ಇತಿಹಾಸ ಮತ್ತು ಪರಂಪರೆಯ ಕುರಿತು ಯುವಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು ವೀರಶೈವ ಲಿಂಗಾಯತ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ಅದರ ಇತಿಹಾಸ, ಪುರಾತತ್ವ, ತತ್ವಶಾಸ್ತ್ರ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮೂಲಕ ಧರ್ಮದ ವೈಶಿಷ್ಟ್ಯ ಮತ್ತು ಶ್ರೀಮಂತಿಕೆಯನ್ನು ಅರಿತುಕೊಳ್ಳಬೇಕು ಎಂದು ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ನಡೆದ ಅಡ್ಡ ಪಲ್ಲಕ್ಕಿ ಉತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ, ಶಿವದೀಕ್ಷಾ ಕಾರ್ಯಕ್ರಮ ಹಾಗೂ ವಧು-ವರರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು, ವೀರಶೈವ ಲಿಂಗಾಯತ ಪರಂಪರೆಯ ಇತಿಹಾಸವನ್ನು ಕೇವಲ ಪುರಾಣಗಳ ದೃಷ್ಟಿಯಿಂದ ಮಾತ್ರ ನೋಡದೇ, ಐತಿಹಾಸಿಕ ದಾಖಲೆಗಳು, ಪುರಾತತ್ವದ ಆಧಾರಗಳು ಹಾಗೂ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ದೇಶದ ಇತಿಹಾಸ ಮತ್ತು ಪರಂಪರೆಯ ಕುರಿತು ಯುವಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.ಹರಪ್ಪ-ಮೊಹೆಂಜೊದಾರೋ ನಾಗರಿಕತೆಯ ಕುರಿತ ಪುರಾತತ್ವ ಅಧ್ಯಯನಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, ಅಲ್ಲಿ ದೊರೆತಿರುವ ಕೆಲವು ಪುರಾತತ್ವ ವಸ್ತುಗಳು ಹಾಗೂ ಧಾರ್ಮಿಕ ಸಂಕೇತಗಳ ಕುರಿತು ವೀರಶೈವ ಪರಂಪರೆಯೊಂದಿಗೆ ಸಂಬಂಧಿಸಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಈ ಪರಂಪರೆಯ ಪ್ರಾಚೀನತೆಯ ಕುರಿತು ಇನ್ನಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು. ತೆಂಕಲಗೋಡು ಬೃಹನ್ಮಠ, ಯಸಳೂರಿನ ಚನ್ಬಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲಿಯ ತನಕ ಸೂರ್ಯ-ಚಂದ್ರರು ಇರುತ್ತಾರೋ, ಎಲ್ಲಿಯ ತನಕ ಭೂಮಿ ಇರುತ್ತದೆಯೋ, ಅಲ್ಲಿಯ ತನಕ ವೀರಶೈವ ಧರ್ಮ ಹಾಗೂ ಪಂಚಪೀಠ ಪರಂಪರೆಗಳು ಇರುತ್ತವೆ ಎಂದರು.
ಶಾಸನ ಎಚ್ ಕೆ ಸುರೇಶ್ ಮಾತನಾಡಿ, ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ತಾಲೂಕಿನ ಜನರಲ್ಲಿ ಭಕ್ತಿ, ನಂಬಿಕೆ ಮತ್ತು ಉತ್ತಮ ಚಿಂತನೆಗಳನ್ನು ಬೆಳೆಸಲಿ. ಸಿದ್ದಲಿಂಗ ಪೂಜೆಯ ಸಂದರ್ಭದಲ್ಲಿ ಮಳೆರಾಯನ ಕೃಪೆ ಮತ್ತಷ್ಟು ದೊರೆತು ತಾಲೂಕಿನ ಕೆರೆ-ಕಟ್ಟೆಗಳು ತುಂಬಿ, ರೈತರ ಜಮೀನುಗಳಿಗೆ ನೀರು ದೊರೆತು ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವಂತಾಗಲಿ ಎಂದು ಹೇಳಿದರು. ಉದ್ಯಮಿ ಗ್ರಾನೈಟ್ ರಾಜಶೇಖರ್ ಮಾತನಾಡಿ, ಈ ವರ್ಷದಲ್ಲಿ ಕಾಣದಂತಹ ಮಳೆ ಇಂದು ಸುರಿದಿರುವುದು ಸಂತಸದ ಸಂಗತಿ. ಗುರುಗಳ ಆಗಮನ ಹಾಗೂ ಆಶೀರ್ವಾದದಿಂದ ತಾಲೂಕಿನ ಜನತೆ ಮತ್ತು ರೈತರಿಗೆ ಒಳಿತಾಗಲಿ. ಮಕ್ಕಳಿಗೆ ಸಂಸ್ಕಾರ ನೀಡುವ ವಿಚಾರದಲ್ಲಿ ನಾವೆಲ್ಲರೂ ಎಡವುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ನಮ್ಮ ಜೀವನಶೈಲಿಯನ್ನು ತಿದ್ದಿಕೊಂಡು ಮಕ್ಕಳಿಗೆ ಉತ್ತಮ ಮೌಲ್ಯಗಳು ಹಾಗೂ ಸಂಸ್ಕಾರ ನೀಡುವತ್ತ ಗಮನಹರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ವೀಣಾ ಕಾಶಪ್ಪನವರ್, ಮಾಜಿ ಶಾಸಕ ಕೆ ಎಸ್ ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ, ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ಉದ್ಯಮಿ ಮಸಾಲೆ ಮಂಜುನಾಥ, ಪುರಸಭಾ ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್, ಸ್ವಾಮಿ, ಗೆಂಡೆಹಳ್ಳಿ ಚೇತನ್ ಕುಮಾರ್, ವಿಂಪು ಸಂತೋಷ್, ಅದ್ಧೂರಿ ಚೇತನ್ ಕುಮಾರ್, ನಟರಾಜು, ಸುನಿಲ್ ಪಡುವಳಲು, ಸೇರಿದಂತೆ ಪುರೋಹಿತರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.