ಕೆಲಸ ಕೊಡಿಸುವುದಾಗಿ ಲಕ್ಷಾಂತರ ರುಪಾಯಿ ವಂಚಿಸಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಯಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡಿರುವ ಕುಸುಮ, ರತ್ನಮ್ಮ ಹಾಗೂ ಜ್ಯೋತಿ ಎಂಬುವವರು ಅ.೧೨ ರಂದು ರಾತ್ರಿ ೭.೩೦ರಿಂದ ೮ ಗಂಟೆಯ ನಡುವೆ ತಾವು ಒಬ್ಬರೇ ಇದ್ದಾಗ ಮನೆ ಬಳಿ ಬಂದು ಗಲಾಟೆ ನಡೆಸಲು ಪ್ರಯತ್ನಿಸಿದ್ದು, ಇದರಿಂದ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದರು. ತಕ್ಷಣ ಪೊಲೀಸರಿಗೆ ಕರೆ ಮಾಡಿದಾಗ ಅವರು ಸ್ಥಳಕ್ಕೆ ಆಗಮಿಸಿದ್ದು, ಅಷ್ಟರಲ್ಲಿ ಮೂವರು ಅಲ್ಲಿಂದ ತೆರಳಿದರು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ತಮ್ಮ ವಿರುದ್ಧ ಕೆಲ ಮಹಿಳೆಯರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಮ್ಮ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಗಲಾಟೆ ನಡೆಸಿದ್ದಾರೆ ಎಂದು ಮಹಿಳಾ ಧ್ವನಿ ಸಂಘದ ರಾಜ್ಯಾಧ್ಯಕ್ಷೆ ಅನ್ನಪೂರ್ಣ ಗೌಡ ಪ್ರತ್ಯಾರೋಪ ಮಾಡಿದರು.ಕೆಲಸ ಕೊಡಿಸುವುದಾಗಿ ಲಕ್ಷಾಂತರ ರುಪಾಯಿ ವಂಚಿಸಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಯಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡಿರುವ ಕುಸುಮ, ರತ್ನಮ್ಮ ಹಾಗೂ ಜ್ಯೋತಿ ಎಂಬುವವರು ಅ.೧೨ ರಂದು ರಾತ್ರಿ ೭.೩೦ರಿಂದ ೮ ಗಂಟೆಯ ನಡುವೆ ತಾವು ಒಬ್ಬರೇ ಇದ್ದಾಗ ಮನೆ ಬಳಿ ಬಂದು ಗಲಾಟೆ ನಡೆಸಲು ಪ್ರಯತ್ನಿಸಿದ್ದು, ಇದರಿಂದ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದರು. ತಕ್ಷಣ ಪೊಲೀಸರಿಗೆ ಕರೆ ಮಾಡಿದಾಗ ಅವರು ಸ್ಥಳಕ್ಕೆ ಆಗಮಿಸಿದ್ದು, ಅಷ್ಟರಲ್ಲಿ ಮೂವರು ಅಲ್ಲಿಂದ ತೆರಳಿದರು ಎಂದು ತಿಳಿಸಿದರು. ಯಶೋಧಮ್ಮ ಎಂಬುವವರು ತಮ್ಮ ವಿರುದ್ಧ ೨.೮೦ ಲಕ್ಷ ಪಡೆದು ಉದ್ಯೋಗ ಕೊಡಿಸಿಲ್ಲ ಎಂದು ಆರೋಪಿಸಿರುವುದು ಸುಳ್ಳು. ಬೆಂಗಳೂರಿನ ಜಯಣ್ಣ ಎಂಬುವವರಿಂದ ಯಶೋಧಮ್ಮ ಮತ್ತು ಅವರ ಮಗಳು ₹ ೧೦ ಲಕ್ಷ ಪಡೆದಿದ್ದು, ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಾಕ್ಷಿಯಾಗಿ ಸಹಿ ಮಾಡಿರುವುದಾಗಿ ಅನ್ನಪೂರ್ಣ ಗೌಡ ತಿಳಿಸಿದರು. ಈ ಹಿಂದೆ ತಮ್ಮೊಂದಿಗೆ ಕೆಲಕಾಲ ಇದ್ದ ಇವರು, ರಾಜಕೀಯ ಮುಖಂಡರೊಂದಿಗೆ ನಡೆದ ಸಂಭಾಷಣೆಗಳನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡು, ಅವುಗಳನ್ನು ಇತರರಿಗೆ ಕಳುಹಿಸಿ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡಿದರು. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಧ್ವನಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀ, ರಾಧ, ನಾಗಮ್ಮ, ಸುಜಾತ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.