ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ
ಪ್ರಸ್ತುತ ಸಮಾಜದಲ್ಲಿ ಬಾಲಕಿಯರು ಆಸೆ ಆಮಿಷಗಳಿಗೆ ಒಳಗಾಗಿ ತನ್ನ ಜವಾಬ್ದಾರಿಯನ್ನು ಮರೆತಿದ್ದಾರೆ ಪ್ರೀತಿ - ಪ್ರೇಮ - ಪ್ರಣಯ ಎಂಬ ಅಂಧಕಾರದಲ್ಲಿ ಮುಳುಗಿ ನಶಿಸಿ ಹೋಗುವುದರ ಮೂಲಕ ತಮ್ಮ ಜೀವನದ ಪ್ರಾರಂಭದಲ್ಲೇ ಅಂತ್ಯ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.ಬಾಲ್ಯವಿವಾಹ ತಡೆಗಟ್ಟಿ
ಸಿಡಿಪಿಒ ಮುನಿರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಕೆಲವೊಮ್ಮೆ ಕುಟುಂಬದ ಬಡತನದಿಂದಾಗಿ, ಅಥವಾ ಯಾವುದೋ ಆಸೆ ಆಮೀಷಗಳಿಗೆ ಒಳಗಾಗಿ ಹದಿಹರೆಯದ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತಿರುವುದು ಅತ್ಯಂತ ದೂರದೃಷ್ಟಕರ, ಇಂತ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರ ಸೂಚಿಸಿರುವ ೧೧೨ ಮತ್ತು ೧೦೯೮ ಸಹಾಯವಾಣಿ ಸಂಖ್ಯೆಗೆ ಕರೆಮಾಡಬೇಕು ಎಂದರು.ಈ ಸಂದರ್ಭದಲ್ಲಿ ಪೋಕಸ್ ಸಂಸ್ಥೆ ಅಧ್ಯಕ್ಷ ಅ.ನಾ.ಹರೀಶ್, ಪ್ರಾಶುಪಾಲರಾದ ಸುಬ್ರಮಣಿ, ಉಪ ಪ್ರಾಂಶುಪಾಲ ನಾಗರಾಜ್, ಎಸ್.ಎನ್ ಯುವಸೇನೆ ಅಧ್ಯಕ್ಷ ನವೀನ್‌ಗೌಡ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರಾದ ರವಿಂದ್ರ, ಕಾರ್ಯದರ್ಶಿ ಅಮರಾವತಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಸರಸ್ವತಿ ಇದ್ದರು.