ಅನ್ಯ ಧರ್ಮಕ್ಕೆ ಸೇರಿದ ಸ್ವಾಮೀಜಿ ಬೇಡ ಎಂದ ಗ್ರಾಮಸ್ಥರು

KannadaprabhaNewsNetwork |  
Published : Aug 03, 2025, 11:45 PM IST
3ಜಿಪಿಟಿ4ನಿಜಲಿಂಗಸ್ವಾಮೀಜಿ ಗುಂಡ್ಲುಪೇಟೆ ಪೊಲೀಸ್‌ ಠಾಣಾ ಆವರಣದಲ್ಲಿ. | Kannada Prabha

ಸಾರಾಂಶ

ಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿ ಇವನಾರವ, ಇವನಾರವ ಇವನಾರವ ಎಂದೇನಿಸಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೇನಿಸಯ್ಯ ಎಂದು ಸಾರಿದ್ದರು. ಆದರೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ನೇಮಕಗೊಂಡ ನಿಜಲಿಂಗ ಸ್ವಾಮೀಜಿ ಅನ್ಯ ಧರ್ಮಕ್ಕೆ ಸೇರಿದವರು, ಮಠಕ್ಕೆ ಬೇಡ ಎಂದು ವಾಪಸ್‌ ಕಳುಹಿಸಿದ ಅಪರೂಪದ ವಿಚಿತ್ರ ಘಟನೆ ಭಾನುವಾರ ನಡೆದಿದೆ.ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠ ಕಳೆದ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿತ್ತು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿ ಇವನಾರವ, ಇವನಾರವ ಇವನಾರವ ಎಂದೇನಿಸಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೇನಿಸಯ್ಯ ಎಂದು ಸಾರಿದ್ದರು. ಆದರೆ ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ನೇಮಕಗೊಂಡ ನಿಜಲಿಂಗ ಸ್ವಾಮೀಜಿ ಅನ್ಯ ಧರ್ಮಕ್ಕೆ ಸೇರಿದವರು, ಮಠಕ್ಕೆ ಬೇಡ ಎಂದು ವಾಪಸ್‌ ಕಳುಹಿಸಿದ ಅಪರೂಪದ ವಿಚಿತ್ರ ಘಟನೆ ಭಾನುವಾರ ನಡೆದಿದೆ.ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಗುರುಮಲ್ಲೇಶ್ವರ ದಾಸೋಹ ಮಠ ಕಳೆದ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿತ್ತು.

ಹೊಸ ಮಠಕ್ಕೆ ಒಬ್ಬರು ಸ್ವಾಮೀಜಿಯನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದ ಮೇರೆಗೆ ಮಹಿಳಾ ಸ್ವಾಮೀಜಿ ಅವರನ್ನು ನೇಮಕಗೊಂಡಿದ್ದರು. ಇದಾದ ಬಳಿಕ ಕಳೆದ ಒಂದು ತಿಂಗಳ ಹಿಂದೆ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ನಿಜಲಿಂಗ ಸ್ವಾಮೀಜಿಯನ್ನು ಬಸವ ಕಲ್ಯಾಣ ಮಠದಿಂದ ನೇಮಕಗೊಂಡ ಬಳಿಕ ಕಳೆದೊಂದು ತಿಂಗಳಿನಿಂದ ಮಠದಲ್ಲಿ ಕೆಲಸ, ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಚೌಡಹಳ್ಳಿ ದಾಸೋಹ ಮಠಕ್ಕೆ ನೇಮಕಗೊಂಡಿದ್ದ ನಿಜಲಿಂಗ ಸ್ವಾಮೀಜಿ ಮೂಲತ ಅನ್ಯ ಧರ್ಮಕ್ಕೆ ಸೇರಿದರಾಗಿದ್ದರೂ ವಿಶ್ವಗುರು ಬಸವಣ್ಣನ ತತ್ವ, ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಬಸವ ಧರ್ಮ ಪೀಠಾಧೀಶೆ ಡಾ.ಮಾತೆ ಗಂಗಾ ದೇವಿ ಅವರ ಮೂಲಕ ಪ್ರತಿಜ್ಞೆ ಪಡೆದಿದ್ದಾರೆ.

ಜಂಗಮ ದೀಕ್ಷೆ ಪಡೆದ ಯಾದಗಿರಿ ಜಿಲ್ಲೆ ಶಹಾಪುರದ ಮಹಮ್ಮದ್‌ ನಿಸಾರ್‌ ಹೆಸರನ್ನು ಡಾ.ಗಂಗಾ ದೇವಿ ಅವರೇ ನಿಜಲಿಂಗ ಸ್ವಾಮೀಜಿ ಎಂದು ನಾಮಕರಣ ಮಾಡಿರುವ ದಾಖಲಾತಿಗಳಿವೆ. ನಿಜಲಿಂಗ ಸ್ವಾಮೀಜಿ ಅವರ ಮೊಬೈಲ್‌ನ್ನು ಗ್ರಾಮದ ಯುವಕರು ತಪಾಸಣೆ ಮಾಡಿದಾಗ ಮೊಬೈಲ್‌ನಲ್ಲಿದ್ದ ಸ್ವಾಮೀಜಿ ಅವರ ಆಧಾರ್‌ ಕಾರ್ಡ್‌ನಲ್ಲಿ ಮಹಮ್ಮದ್‌ ನಿಸಾರ್‌ ಅಹಮದ್‌ ಎಂದಿರುವುದನ್ನು ಕಂಡು ಹೌಹಾರಿದ್ದಾರೆ.

ಬಳಿಕ ಯುವಕರು ಗ್ರಾಮಸ್ಥರಿಗೆ ಅನ್ಯ ಧರ್ಮದ ಯುವಕ ಜಂಗಮ ದೀಕ್ಷೆ ಪಡೆದಿದ್ದರೂ ನಮ್ಮ ಗ್ರಾಮದ ಮಠಕ್ಕೆ ಬೇಡ ಎಂದು ಹೇಳಿದ ವಿಚಾರ ಗುಂಡ್ಲುಪೇಟೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಪೊಲೀಸರು ನಿಜಲಿಂಗ ಸ್ವಾಮೀಜಿ ಜೊತೆ ವಿಚಾರಣೆ ನಡೆಸಿದರು. ಆದರೆ ಗ್ರಾಮಸ್ಥರ ವಿರೋಧ ಇದೆಯಲ್ಲ ಎಂದಾಗ ಬಂದ ದಾರಿಗೆ ಸುಂಕ ವಿಲ್ಲದಂತೆ ಜಂಗಮ ದೀಕ್ಷೆ ಪಡೆದ ನಿಜಲಿಂಗ ಸ್ವಾಮೀಜಿ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.ಜಿಪಿಟಿ5

ನಿಜಲಿಂಗಸ್ವಾಮೀಜಿ ಗುಂಡ್ಲುಪೇಟೆ ಪೊಲೀಸ್‌ ಠಾಣಾ ಆವರಣದಲ್ಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ