ಭ್ರಷ್ಟಾಚಾರಕ್ಕೆ ಮತದಾರನೇ ಗೊಬ್ಬರ, ನೀರು

KannadaprabhaNewsNetwork |  
Published : Oct 13, 2026, 03:00 AM IST
ಪೊಟೋ ಅ.12ಎಂಡಿಎಲ್ 1. ಮುಧೋಳದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮಾಹಿತಿ ಹಕ್ಕು ದಿನಾಚರಣೆ, ಕಾನೂನು ಅರಿವು ಮತ್ತು 6ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ಚುನಾವಣೆಯ ಸಂದರ್ಭದಲ್ಲಿ ಹಣ ಪಡೆದು ಮತ ಹಾಕುವ ಪಿಡುಗು ನಿಲ್ಲದ ಹೊರತು ದೇಶದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಬುಡಸಹಿತ ಕಿತ್ತೊಗೆಯಲು ಸಾಧ್ಯವಿಲ್ಲ. ಆಳುವವರ ಭ್ರಷ್ಟಾಚಾರಕ್ಕೆ ಮತದಾರರೇ ಗೊಬ್ಬರ ಮತ್ತು ನೀರಿನಂತಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಚುನಾವಣೆಯ ಸಂದರ್ಭದಲ್ಲಿ ಹಣ ಪಡೆದು ಮತ ಹಾಕುವ ಪಿಡುಗು ನಿಲ್ಲದ ಹೊರತು ದೇಶದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಬುಡಸಹಿತ ಕಿತ್ತೊಗೆಯಲು ಸಾಧ್ಯವಿಲ್ಲ. ಆಳುವವರ ಭ್ರಷ್ಟಾಚಾರಕ್ಕೆ ಮತದಾರರೇ ಗೊಬ್ಬರ ಮತ್ತು ನೀರಿನಂತಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಆಯೋಜಿಸಿದ್ದ ಮಾಹಿತಿ ಹಕ್ಕು ದಿನಾಚರಣೆ, ಕಾನೂನು ಅರಿವು ಮತ್ತು 6ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂವಿಧಾನದಡಿ ಎಷ್ಟೇ ಕಠಿಣ ಕಾನೂನುಗಳಿದ್ದರೂ ಭ್ರಷ್ಟಾಚಾರ ಕಡಿಮೆಯಾಗದಿರಲು ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಹಿತಿ ಹಕ್ಕು ಹೋರಾಟಗಳನ್ನು ಕೇವಲ ತನಿಖೆ ಅಥವಾ ದೋಷ ಪತ್ತೆಗೆ ಸೀಮಿತಗೊಳಿಸದೆ, ಭ್ರಷ್ಟಾಚಾರದ ಮೂಲವನ್ನೇ ಕಿತ್ತೊಗೆಯುವ ನಿಟ್ಟಿನಲ್ಲಿ ಯುವ ಸಮುದಾಯ ಮತ್ತು ನಾಗರಿಕರು ಮುಂದಾಗಬೇಕೆಂದು ಸಲಹೆ ನೀಡಿದರು.ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಮಾತನಾಡಿ, ನಮ್ಮ ಹಿರಿಯರು ಹೋರಾಟದ ಮೂಲಕ ನೀಡಿದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಅಮುಲ್ಯ. ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬ ನಾಗರಿಕನ ಧರ್ಮ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಸಂವಿಧಾನದ ಹಕ್ಕುಗಳನ್ನು ಮೊಟಕುಗೊಳಿಸಿ, ವಿರೋಧ ಪಕ್ಷದ ನಾಯಕರನ್ನು ಜೈಲಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದ್ದ ಕರಾಳ ಇತಿಹಾಸವನ್ನು ಸ್ಮರಿಸಿದರು. ಪ್ರಸ್ತುತ ದಿನಗಳಲ್ಲೂ ಯುವಜನತೆ ಮತ್ತು ಹೋರಾಟಗಾರರ ಧ್ವನಿ ಅಡಗಿಸುವ ಯತ್ನಗಳು ನಡೆಯುತ್ತಿವೆ. ದೆಹಲಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯುವಕರ ಬಂಧನ ಮತ್ತು ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಹಲವರನ್ನು ಮನೆಗಳಲ್ಲೇ ನಿರ್ಬಂಧಿಸುತ್ತಿರುವುದು, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ತಮ್ಮ ನಾಲ್ಕು ದಶಕಗಳ ಶಾಂತಿಯುತ ಹೋರಾಟವನ್ನು ಮೆಲುಕು ಹಾಕಿದ ಅವರು, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಮತ್ತು ಕಾನೂನಾತ್ಮಕ ಹೋರಾಟವೇ ಶಕ್ತಿಶಾಲಿ ಮಾರ್ಗ ಎಂದರು.ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಜಿ.ರಮೇಶ್ ಕುಣಿಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಟಗಾರರ ಸಂಖ್ಯೆ ಕಡಿಮೆಯಾದಂತೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಭ್ಯರ್ಥಿಗಳಲ್ಲಿ ಬಹುಪಾಲು ಮಂದಿ ಸಾರ್ವಜನಿಕ ಸೇವೆಗಿಂತ ಭೂ ಕಬಳಿಕೆಯಲ್ಲಿ ಹೆಚ್ಚು ನಿರತರಾಗಿದ್ದಾರೆ. ಲೋಕಾಯುಕ್ತ ಮಾಜಿ ನ್ಯಾ.ಸಂತೋಷ್ ಹೆಗಡೆ ಅವರಂತಹ ದಿಗ್ಗಜರಿಂದ ಉದ್ಘಾಟನೆಗೊಂಡ ಪ್ರಬಲ ಲೋಕಾಯುಕ್ತ ಸಂಸ್ಥೆ ಇಂದು ನಿಷ್ಕೃಯಗೊಂಡಿರುವುದು ಬೇಸರದ ಸಂಗತಿ ಎಂದರು.ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಹೆಚ್.ಮೀಟಲ್ಕೊಡ, ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಮತ್ತು ಜಿಲ್ಲಾಧ್ಯಕ್ಷ ಹನುಮಂತ್ ಶಿಂಧೆ ಸಾಂದರ್ಭಿಕವಾಗಿ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನಾ ಪಾಟೇಕರ್ ನಿಧನಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸಂತಾಪ
ಬೇಡಿಕೆ ಈಡೇರಿಸದೇ ವಾಪಸ್‌ ಕಳಿಸಿದ ಕೇಂದ್ರ ಸರ್ಕಾರ