ವಿಜಯಪುರ: ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಮನುಷ್ಯ ಸದಾ ಕಲಿಯುತ್ತಿರಬೇಕು. ಮನುಷ್ಯನಿಗೆ ಹುಟ್ಟು ಮುಖ್ಯವಲ್ಲ, ಅವನು ಬದುಕುವ ರೀತಿ ಮುಖ್ಯ ಎಂದು ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್. ಕೃಪಾಶಂಕರ್ ತಿಳಿಸಿದರು. ಪಟ್ಟಣದಲ್ಲಿ ಪ್ರಗತಿ ಆಂಗ್ಲ ಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸುವಂತೆ ತಿಳಿಸಿದರು. ಪ್ರಾಂಶುಪಾಲ ಡಾ. ಎನ್. ನಾಗರಾಜ್ ಮಾತನಾಡಿ, ಜೇನುನೊಣ ಎಲ್ಲಾ ಹೂವುಗಳಿಂದ ಮಕರಂದ ಹೀರಿದಂತೆ, ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರಿಂದ ಜ್ಞಾನ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯಶಿಕ್ಷಕ ಜೆ.ಎನ್. ಪ್ರಕಾಶ್ ಮಾತನಾಡಿ, ಶಾರದಾ ಪೂಜೆಯ ಮಹತ್ವ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಅಗತ್ಯದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಆನಂದ್, ಎಚ್. ಶಾಂತಮೂರ್ತಿ, ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿಜಯಪುರದ ಪ್ರಗತಿ ಆಂಗ್ಲ ಶಾಲೆಯ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾರದಾ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಕೃಪಾಶಂಕರ್, ಪ್ರಾಂಶುಪಾಲ ಡಾ. ಎನ್. ನಾಗರಾಜ್, ಮುಖ್ಯಶಿಕ್ಷಕ ಜೆ.ಎನ್. ಪ್ರಕಾಶ್ ಇತರರು ಪಾಲ್ಗೊಂಡಿದ್ದರು.