ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠವಾದದು: ಶ್ರೀಶೈಲ ಜಗದ್ಗುರು

KannadaprabhaNewsNetwork |  
Published : Oct 30, 2025, 03:00 AM IST
ಪೊಟೋ ಅ.29ಎಂಡಿಎಲ್ 1ಎ, 1ಬಿ, 1ಸಿ, 1ಡಿ. ಮುಧೋಳ ಬಿಪ್ಸ್ ಸ್ಕೂಲ್ ನೂತನ ಕಟ್ಟಡವನ್ನು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಮನುಷ್ಯ, ಉತ್ತಮ ಸಂಸ್ಕಾರ ಪಡೆದುಕೊಳ್ಳಬೇಕಾದರೆ ಜ್ಞಾನ (ವಿದ್ಯೆ) ಬಹುಮುಖ್ಯವಾದದು. ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠವಾದದು, ನಾವು ಗಳಿಸಿದ ಹಣ (ಆಸ್ತಿ)ವನ್ನು ಯಾರು ಬೇಕಾದರೂ ಕದಿಯಬಹುದು. ಆದರೆ ಜ್ಞಾನ ಸಂಪತ್ತನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹೀಗಾಗಿ ಜ್ಞಾನ ಸಂಪತ್ತು ಎಲ್ಲದಕ್ಕಿಂತಲೂ ಬಹು ದೊಡ್ಡದು. ಜ್ಞಾನ ಸಂಪತ್ತು ಗಳಿಸುವುದರೊಂದಿಗೆ ಸಂಸ್ಕಾರ ಪಡೆದುಕೊಳ್ಳಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮನುಷ್ಯ, ಉತ್ತಮ ಸಂಸ್ಕಾರ ಪಡೆದುಕೊಳ್ಳಬೇಕಾದರೆ ಜ್ಞಾನ (ವಿದ್ಯೆ) ಬಹುಮುಖ್ಯವಾದದು. ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠವಾದದು, ನಾವು ಗಳಿಸಿದ ಹಣ (ಆಸ್ತಿ)ವನ್ನು ಯಾರು ಬೇಕಾದರೂ ಕದಿಯಬಹುದು. ಆದರೆ ಜ್ಞಾನ ಸಂಪತ್ತನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹೀಗಾಗಿ ಜ್ಞಾನ ಸಂಪತ್ತು ಎಲ್ಲದಕ್ಕಿಂತಲೂ ಬಹು ದೊಡ್ಡದು. ಜ್ಞಾನ ಸಂಪತ್ತು ಗಳಿಸುವುದರೊಂದಿಗೆ ಸಂಸ್ಕಾರ ಪಡೆದುಕೊಳ್ಳಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಬವಿವಿ ಸಂಘದ ಮುಧೋಳ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ (ಬಿಪ್ಸ್) ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, 119 ವರ್ಷಗಳ ಹಿಂದೆ ಬೀಳೂರು ಗುರುಬಸವ ಅಜ್ಜನವರು ಸಂಸ್ಕೃತ ಪಾಠ ಶಾಲೆಯಿಂದ ಸ್ಥಾಪಿಸಿದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಈ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಡಾ.ವೀರಣ್ಣ ಚರಂತಿಮಠ ಅವರ ಪ್ರಾಮಾಣಿಕ ಪ್ರಯತ್ನದಿಂದ ಈ ಸಂಘ ಇಷ್ಟೊಂದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಘಾಧವಾದ ಜ್ಞಾನ ಗಳಿಸುವುದರ ಜೊತೆಗೆ ಸಂಸ್ಕಾರ ಪಡೆದುಕೊಳ್ಳುವುದು ತೀರಾ ಅವಶ್ಯಕವಿದೆ. ಈ ನಿಟ್ಟಿನಲ್ಲಿ ಬ.ವಿ.ವಿ ಸಂಘವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರಯುತ ವಿದ್ಯೆಯನ್ನು ನೀಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.ಬ.ವಿ.ವಿ ಸಂಘದ ಕಾರ್ಯಧ್ಯಕ್ಷ

ಬ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಹೈಸ್ಕೂಲ್ ಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಎಸ್. ಶೆಟ್ಟರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಬಾಗಲಕೋಟೆ ಬಿಪ್ಸ್ ಸ್ಕೂಲ್ ಪ್ರಾಚಾರ್ಯ ಸುರೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಪ್ಸ್ ಸಂಸ್ಥೆಗಳು ಬೆಳೆದು ಬಂದ ರೀತಿ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಕುರಿತು ವಿವರಿಸಿದರು. ಮುಧೋಳ ಬಿಪ್ಸ್ ಸ್ಕೂಲ್ ಪ್ರಾಚಾರ್ಯ ಶಶಿಧರ ಕುಲಕರ್ಣಿ ಸ್ವಾಗತಿಸಿದರು. ಮುಧೋಳ ಬಿಪ್ಸ್ ಸ್ಕೂಲ್ ಉಪ-ಪ್ರಾಚಾರ್ಯ ಸಂಗಪ್ಪ ಬಿಜ್ಜರಿಗೆ ವಂದಿಸಿದರು. ಡಾ.ರಮ್ಯಾ ನಾಯಕ ಮತ್ತು ಸಂದ್ಯಾ ಸರ್ವದೆ ನಿರೂಪಿಸಿದರು. ಬಾಗಲಕೋಟೆ ಬ.ವಿ.ವಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ವಿದ್ಯಾರ್ಥಿಗಳ ಪಾಲಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇತರರು ಇದ್ದರು.ಬ.ವಿ.ವಿ ಸಂಘದ ಆಶ್ರಯದಲ್ಲಿ ಬಾಗಲಕೋಟೆ, ಮುಧೋಳ, ರಾಮದುರ್ಗ, ಗುಳೇದಗುಡ್ಡ ಮತ್ತು ಲೋಕಾಪುರದಲ್ಲಿರುವ ಬಿಪ್ಸ್ ಸ್ಕೂಲ್ ಗಳಲ್ಲಿ ಒಟ್ಟು ₹8400ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ, ಮುಂಬರುವ ವರ್ಷದಲ್ಲಿ ₹10 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಬಿಪ್ಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಮೂಲ ಸೌಲಭ್ಯ ಮತ್ತು ಸೌಕರ್ಯದ ಜೊತೆ ಕೌಶಲ್ಯ ಅಭಿವೃದ್ಧಿಗೆ ಪ್ರಥಮ ಆಧ್ಯತೆ ನೀಡಲಾಗುವುದು.

-ಡಾ.ವೀರಣ್ಣ ಚರಂತಿಮಠ ಬವಿವಿ ಸಂಘದ ಅಧ್ಯಕ್ಷರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು