ಉಳ್ಳವರು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Dec 06, 2025, 01:45 AM IST
ಫೋಟೋ 05ಟಿಟಿಎಚ್ 01: ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನಿಂದ ಜೆಸಿ ಆಸ್ಪತ್ರೆಗೆ ನೀಡಲಾದ 25 ಲಕ್ಷ ರೂ ವೆಚ್ಚದ ಎರಡು ಡಯಾಲಿಸಿಸ್ ಯಂತ್ರಗಳನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಸಿದರು. | Kannada Prabha

ಸಾರಾಂಶ

100 ಹಾಸಿಗೆಯ ಇಲ್ಲಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆಗಬೇಕಾದ ಕಾಮಗಾರಿಗಳು ಇದ್ದು, ಕೇವಲ ಸರ್ಕಾರಿ ಅನುದಾನದಿಂದಲೇ ಇದರ ನಿರ್ವಹಣೆ ಅಸಾಧ್ಯವಾಗಿದೆ. ಈ ಆಸ್ಪತ್ರೆಗೆ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನಿಂದ ದೊಡ್ಡ ಪ್ರಮಾಣದ ಕೊಡುಗೆ ಹರಿದು ಬಂದಿದ್ದು, ಇದರಿಂದ ಬಡರೋಗಿಗಳ ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

100 ಹಾಸಿಗೆಯ ಇಲ್ಲಿನ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆಗಬೇಕಾದ ಕಾಮಗಾರಿಗಳು ಇದ್ದು, ಕೇವಲ ಸರ್ಕಾರಿ ಅನುದಾನದಿಂದಲೇ ಇದರ ನಿರ್ವಹಣೆ ಅಸಾಧ್ಯವಾಗಿದೆ. ಈ ಆಸ್ಪತ್ರೆಗೆ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನಿಂದ ದೊಡ್ಡ ಪ್ರಮಾಣದ ಕೊಡುಗೆ ಹರಿದು ಬಂದಿದ್ದು, ಇದರಿಂದ ಬಡರೋಗಿಗಳ ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಜೆಸಿ ಆಸ್ಪತ್ರೆ ಆವರಣದಲ್ಲಿ ಜೋಡಿಸಲಾದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನಿಂದ ನೀಡಲಾದ 25 ಲಕ್ಷ ರು. ವೆಚ್ಚದ ಎರಡು ಡಯಾಲಿಸಿಸ್ ಯಂತ್ರಗಳನ್ನು ಶುಕ್ರವಾರ ಉದ್ಘಾಟನೆ ನೆರವೇರಿಸಿ, ಈ ಮೊದಲು ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರಗಳು, ಕಣ್ಣಿನ ಚಿಕಿತ್ಸೆಗೆ ಅಗತ್ಯವಿದ್ದ ಲೇಸರ್ ಯಂತ್ರ ಮತ್ತು ಶವಾಗಾರಕ್ಕೆ ಅಗತ್ಯವಿದ್ದ ಶೀಥಲೀಕರಣ ಯಂತ್ರಗಳನ್ನು ನೀಡಿರುವ ಜಿ.ಶಂಕರ್‌ ಅವರಂತೆ ಉಳ್ಳವರು ತಮ್ಮ ಕೊಡುಗೆಯನ್ನು ನೀಡಲು ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

ಈ ಆಸ್ಪತ್ರೆಯಲ್ಲಿ ತಿಂಗಳಿಗೆ 600 ಡಯಾಲಿಸಿಸ್ ಚಿಕಿತ್ಸೆ ನಡೆಯುತ್ತಿದ್ದು, ಹೊಸದಾಗಿ ಎರಡು ಯಂತ್ರಗಳು ಬಂದಿರುವುದರಿಂದಾಗಿ ಇನ್ನೂ 200 ಜನರಿಗೆ ಈ ಸೌಲಭ್ಯ ದೊರೆಯಲಿದೆ. ಡಯಾಲಿಸಿಸ್ ಚಿಕಿತ್ಸೆಗಾಗಿ ಸಾವಿರಾರು ರು. ವೆಚ್ಚ ಮಾಡಿ ಶಿವಮೊಗ್ಗ ಮಣಿಪಾಲ ಆಸ್ಪತ್ರೆಗಳಿಗೆ ಹೋಗಬೇಕಿದ್ದ ರೋಗಿಗಳಿಗೆ ಕೊಡುಗೈ ದಾನಿಗಳ ನೆರವಿನಿಂದಾಗಿ ಬಡರೋಗಿಗಳಿಗೆ ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ದೊರೆಯುವಂತಾಗಿದೆ ಎಂದರು.

ಆರೋಗ್ಯ ಇಲಾಖೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲವನ್ನು ಮುಚ್ಚಬೇಕೆಂಬ ಆದೇಶ ಅತ್ಯಂತ ಅವೈಜ್ಞಾನಿಕವಾಗಿದೆ. ಐಎಎಸ್ ಅಧಿಕಾರಿಗಳ ಈ ಪ್ರಸ್ತಾವನೆ ಜನವಿರೋದಿಯಾಗಿದ್ದು, ಆಸ್ಪತ್ರೆಗಳನ್ನು ಮುಚ್ಚುವುದಕ್ಕಿಂತ ಈ ಅಧಿಕಾರಿಗಳ ವೇತನವನ್ನು ಕಡಿತಗೊಳಿಸುವುದೇ ಸೂಕ್ತ ಎಂದು ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಜನೌಷಧ ಕೇಂದ್ರಗಳನ್ನು ತೆರವುಗೊಳಿಸಿರುವುದು ಬಡವರಿಗಾದ ಅನ್ಯಾಯವಾಗಿದೆ. ಇತ್ತೀಚೆಗೆ ಆಸ್ಪತ್ರೆಗೆ ಒದಗಿಸಲಾಗಿರುವ ಹಾಸಿಗೆ ಒಬ್ಬರಿಗೂ ಮಲಗುವುದಕ್ಕೆ ಸಾಧ್ಯವಿಲ್ಲ. ಇದರ ಉದ್ದೇಶವೇ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು. ತಾಲೂಕು ಮೊಗವೀರ ಮಹಾಜನ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಶೀನಣ್ಣ, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಜೆಸಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ. ಅರವಿಂದ್, ಆರೋಗ್ಯ ರಕ್ಷ ಸಮಿತಿ ಸದಸ್ಯರು, ಡಯಾಲಿಸಿಸ್ ಕೇಂದ್ರದ ನಿರ್ವವಣೆ ಹೊಣೆಗಾರಿಕೆಯ ನೆಫ್ರೋ ಸಂಸ್ಥೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬ್ಸಿಡಿಗಳನ್ನು ಬಳಸಿಕೊಂಡು ಹೈನುಗಾರಿಕೆ ಮಾಡಿ
ಹೊಸ್ತಿಲು ಹುಣ್ಣಿಮೆ: ಶ್ರೀ ರೇಣುಕಾಂಬೆಗೆ ವಿಶೇಷ ಪೂಜೆ