ಸಮಾಜದಲ್ಲಿರುವ ಮೌಢ್ಯತೆ ತೊಲಗಿಸಲು ಶ್ರೀಗಳು ಮುಂದಾಗಬೇಕು

KannadaprabhaNewsNetwork |  
Published : Jun 18, 2026, 03:00 AM IST
ಕಾರ್ಯಕ್ರಮದಲ್ಲಿ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಸ್ವಾಮಿಗಳಾದವರು ಸಮಾಜದಲ್ಲಿಡಗಿರುವ ಮೂಡನಂಬಿಕೆ, ಮೌಢ್ಯ, ಅಜ್ಞಾನ ತೊಲಗಿಸಿ ಸುಜ್ಞಾನದ ಹಾದಿಯಲ್ಲಿ ಭಕ್ತರು ನಡೆಯುವಂತೆ ಶ್ರಮಿಸುವ ಮೂಲಕ ಸಮಾಜದ ಕಲ್ಯಾಣ ಮಾಡಲು ಸ್ವಾಮಿಗಳಾದವರು ಮುಂದಾಗಬೇಕು ಎಂದು ಗದಗ-ಡಂಬಳದ ಡಾ.ತೊಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸ್ವಾಮಿಗಳಾದವರು ಸಮಾಜದಲ್ಲಿಡಗಿರುವ ಮೂಡನಂಬಿಕೆ, ಮೌಢ್ಯ, ಅಜ್ಞಾನ ತೊಲಗಿಸಿ ಸುಜ್ಞಾನದ ಹಾದಿಯಲ್ಲಿ ಭಕ್ತರು ನಡೆಯುವಂತೆ ಶ್ರಮಿಸುವ ಮೂಲಕ ಸಮಾಜದ ಕಲ್ಯಾಣ ಮಾಡಲು ಸ್ವಾಮಿಗಳಾದವರು ಮುಂದಾಗಬೇಕು ಎಂದು ಗದಗ-ಡಂಬಳದ ಡಾ.ತೊಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಕಲ್ಲೂರ ಸಿದ್ದೇಶ್ವರ ದೇವಸ್ಥಾನದಲ್ಲಿ ಶಿರೋಳ ಮತ್ತು ಬೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು ತಿಂಗಳು ಮೌನಲಿಂಗಾನಷ್ಠಾನದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜ ಕಲ್ಯಾಣ ಮಾಡಲು ಆತ್ಮಶಕ್ತಿ ಬೇಕಾಗುತ್ತದೆ. ಇದೆಲ್ಲ ಮೌನ ಅನುಷ್ಠಾನದಿಂದ ಮಾತ್ರ ಸಾಧ್ಯವೆಂದು ನುಡಿದ ಸ್ವಾಮೀಜಿಯವರು ಮೌನ ಅನುಷ್ಠಾನದ ಸಮಯದಲ್ಲಿ ಪಠಿಸುವ ಮಹಾಮಂತ್ರದಿಂದ ಆತ್ಮಬಲ ಹೆಚ್ಚುವದು ಪರಿಣಾಮ ಬ್ರಹ್ಮಬಲವು ಜಗತ್ತಿನ ಅತೀ ಹೆಚ್ಚಿನ ಶ್ರೇಷ್ಠಶಕ್ತಿಯಾಗಿದೆ ಎಂದರು.ಸಮಾಜದಲ್ಲಿ ಗುರುವಿನ ಶಕ್ತಿ ಎಲ್ಲ ಶಕ್ತಿಗಳಿಗೆ ಮೀರಿದ್ದು, ಹರ ಮುನಿದರೇ ಗುರು ಕಾಯುವನು ಎನ್ನುವಂತೆ ಗುರುಗಳಾದವರು ಗುರುಗಳಾದವರು ಸಮಾಜದ ಒಳತಿಗೆ ಶ್ರಮಿಸಬೇಕು. ಏಕೆಂದರೆ ಕಣ್ಣಿಗೆ ಕಾಣದ ದೇವರನ್ನು ಗುರುವಿನ ಮೂಲಕ ನೋಡಲು ಸಾಧ್ಯವಿದ್ದು, ಗುರುವಿನ ಅನುಗ್ರಹ ಇದ್ದರೆ ಎಂತಹ ಕಾರ್ಯಗಳನ್ನು ಮಾಡಬಹುದು. ಶಾಂತಲಿಂಗ ಸ್ವಾಮಿಗಳ ಮೌನಲಿಂಗಾನುಷ್ಠಾನದಿಂದ ಕಲ್ಲೂರಿನ ಸಿದ್ದೇಶ್ವರ ಕ್ಷೇತ್ರಕ್ಕೆ ಮೆರಗು ಬಂದಿದೆ ಎಂದರು.ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಚಿಪ್ಪಲಕಟ್ಟಿಯ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಗದಗದ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿಷ್ಯರಾಗಿರುವ ಶಾಂತಲಿಂಗ ಮಹಾಸ್ವಾಮಿಗಳು ಎಲ್ಲವೂ ಕಲುಷಿತವಾಗಿರುವ ಸಂದರ್ಭದಲ್ಲಿ ಮೌನಲಿಂಗಾನುಷ್ಠಾನ ಮಾಡುವ ಮೂಲಕ ಸಮಾಜದ ಒಳತಿಗೆ ತಮ್ಮನ್ನು ತೊಡಗಿಕೊಂಡಿದ್ದು ತಪಸ್ಸು ಮಾಡುವ ಸ್ವಾಮಿಗಳು ಅಪರೂಪವಾಗಿದ್ದಾರೆ. ಶಾಂತಲಿಂಗಸ್ವಾಮಿಗಳನ್ನು ಪಡೆದ ನಾವೆಲ್ಲ ಪುಣ್ಯವಂತರು ಎಂದರು.ಮೌನಲಿಂಗಾನುಷ್ಠಾನ ಕೈಗೊಂಡಿದ್ದ ಶಾಂತಲಿಂಗಸ್ವಾಮಿಗಳು ನಮಗೆ ಕಾವಿ ದೀಕ್ಷೆ ನೀಡಿರುವ ಗದಗನ ತೋಂಟದಾರ್ಯಶ್ರೀಗಳು ಮಾರ್ಗದರ್ಶನದಲ್ಲಿ ಮೊದಲಿಗೆ ಯಡಿಯೂರ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ 111 ದಿನಗಳ ಕಾಲ ಮೌನಾನುಷ್ಠಾನ ಕೈಗೊಂಡಿದ್ದು, ಇಲ್ಲಿಯವರೆಗ ಪೂಜ್ಯರ ಆಶೀರ್ವಾದದಿಂದ ಸಮಾಜದಲ್ಲಿ ಭಕ್ತರು ಮತ್ತು ಸ್ವಾಮೀಗಳ ಸಂಬಂಧ ನೀರು ಮತ್ತು ಮೀನು ಸಂಬಂಧದಂತೆ ಇರಬೇಕು ಎಂದು ತಿಳಿಸಿದಂತೆ ನಾನು ನಡೆಯುತ್ತಿದ್ದೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಚಂದ್ರಶೇಖರ ಮಟ್ಟಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯ ಪ್ರೊ.ಶಶಿಧರ ತೋಡಕರ ಮಾತನಾಡಿದರು. ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಚಿಕ್ಕಮಠ, ಸಿದ್ದಪ್ಪ ಪೂಜಾರ ಸೇರಿದಂತೆ ಸ್ಥಳೀಯರು ಮುಖಂಡರು ಇದ್ದರು.ಅಡಿವೆಪ್ಪ ಮನವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲೂರ ಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಕಾನೂನು ಸಲಹೆಗಾರ ಎಸ್.ಎ.ಜಾಮದಾರ ಸ್ವಾಗತಿಸಿದರು. ಚಂದ್ರಶೇಖರ ಸೊಬರದ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಯದೇವ ಅಸ್ಪತ್ರೆಗೆ ಸ್ವತಂತ್ರ ಅಧಿಕಾರ
ದೃಢ ಸಂಕಲ್ಪ, ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು ಸಾಧ್ಯ