ಕೆರೆ ಕಟ್ಟಿಸಿದ ಇಮಾಂರ ಕಾರ್‍ಯ ಸ್ಮರಣೀಯ

KannadaprabhaNewsNetwork |  
Published : Dec 28, 2025, 03:15 AM IST
ಜಗಳೂರು ಜೆ.ಎಂ.ಇಮಾಂ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಮಾಂ ಮೆಮೋರಿಯಲ್ ಶಾಲೆಯ ಜೆ.ಎಂ.ಇಮಾಂ ಸ್ಮಾರಕ ಪ್ರಶಸ್ತಿ ಸ್ವೀಕಾರ ಸಮಾರಂಭವನ್ನು ಸಿರಿಗೆರೆ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗಳೂರುಬರದ ನಾಡಾಗಿದ್ದ ಜಗಳೂರು ಭಾಗದಲ್ಲಿ ಇಮಾಂಸಾಹೇಬರು ತುಪ್ಪದಹಳ್ಳಿ, ಸಂಗೇನಹಳ್ಳಿ, ಗಡಿಮಾಕುಂಟೆ ಕೆರೆಗಳನ್ನು ಕಟ್ಟಿಸಿ ನೀರು ಹರಿಸಿದರು. ಅವರ ಸೇವೆ ಅವಿಸ್ಮರಣೀಯ. ಅವರ ವ್ಯಕ್ತಿತ್ವವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಅವರು ತೋರಿದ ಹಾದಿಯಲ್ಲಿಯೇ ೫೭ ಕೆರೆ ತುಂಬಿಸುವ ಕಾರ್ಯ ಸಾಗಲು ನಮಗೆ ಸ್ಫೂರ್ತಿಯಾಯಿತು ಎಂದು ಸಿರಿಗೆರೆ ದಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.

ಸಿರಿಗೆರೆ ಶ್ರೀ ಅಭಿಮತ । ಜೆ.ಎಂ.ಇಮಾಂ ಸ್ಮಾರಕ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕಾರ ಸಮಾರಂಭಕನ್ನಡಪ್ರಭವಾರ್ತೆ ಜಗಳೂರು

ಬರದ ನಾಡಾಗಿದ್ದ ಜಗಳೂರು ಭಾಗದಲ್ಲಿ ಇಮಾಂಸಾಹೇಬರು ತುಪ್ಪದಹಳ್ಳಿ, ಸಂಗೇನಹಳ್ಳಿ, ಗಡಿಮಾಕುಂಟೆ ಕೆರೆಗಳನ್ನು ಕಟ್ಟಿಸಿ ನೀರು ಹರಿಸಿದರು. ಅವರ ಸೇವೆ ಅವಿಸ್ಮರಣೀಯ. ಅವರ ವ್ಯಕ್ತಿತ್ವವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಅವರು ತೋರಿದ ಹಾದಿಯಲ್ಲಿಯೇ ೫೭ ಕೆರೆ ತುಂಬಿಸುವ ಕಾರ್ಯ ಸಾಗಲು ನಮಗೆ ಸ್ಫೂರ್ತಿಯಾಯಿತು ಎಂದು ಸಿರಿಗೆರೆ ದಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.

ಪಟ್ಟಣದ ಜೆ.ಎಂ.ಇಮಾಂ ಶಾಲೆಯಲ್ಲಿ ಶುಕ್ರವಾರ ಇಮಾಂ ಮೆಮೋರಿಯಲ್ ಶಾಲೆಯ ‘ಬೆಳ್ಳಿಹಬ್ಬ’ದ ವೇದಿಕೆಯಲ್ಲಿ ೭ನೇ ವರ್ಷದ ಜೆ.ಎಂ.ಇಮಾಂ ಸ್ಮಾರಕ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕಾರ ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು.

ಇಮಾಂ ಸಾಹೇಬರಿಗೂ ಸಿರಿಗೆರೆ ಮಠಕ್ಕೂ ಅವಿನಾಭಾವ ಸಂಬಂಧವಿತ್ತು. ನಮ್ಮ ಮಠದ ಇತಿಹಾಸದಲ್ಲಿ ಜಾತ್ಯತೀತ ಮೊಟ್ಟ ಮೊದಲ ಸಹಾಯಕರು ಇಮಾಮ್ ಸಾಹೇಬರಾಗಿದ್ದರು. ಅವರು ‘ಮೈಸೂರು ಆಗ ಈಗ’ ಕೃತಿ ಬರೆದಿದ್ದು. ಇನ್ನೂ ಅನೇಕ ಹಸ್ತ ಪ್ರತಿಗಳ ಸಂಗ್ರಹ ನಮ್ಮ ಬಳಿ ಇವೆ. ಕಾರ್ಯದ ಒತ್ತಡದಿಂದ ಪುಸ್ತಕ ಹೊರತರಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಸಾಹಿತಿ ದಾದಾಪೀರ್ ನವಿಲೇಹಾಳ್ ಮತ್ತು ಜೆ.ಕೆ.ಮಹಮದ್ ಹುಸೇನ್ ನಮ್ಮನ್ನು ಕಾಡಿಯಾದರೂ ಪುಸ್ತಕವನ್ನು ಹೊರತರಲು ಬೆನ್ನು ಹತ್ತಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ ಅವರು ಜೆ.ಮಹಮದ್ ಇಮಾಂ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜೆ.ಮಹಮ್ಮದ್ ಇಮಾಂ ಸಾಹೇಬರು ಸ್ವತಂತ್ರ ಭಾರತದ ಪೂರ್ವೋತ್ತರಗಳನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. ೩೫ ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಜನರ ಪ್ರೀತಿ ವಿಶ್ವಾಸಗಳಿಂದ ಇಮ್ಮಣ್ಣ ಎಂದೇ ಖ್ಯಾತಿಯಾಗಿದ್ದ ಜೆ.ಮಹಮದ್ ಇಮಾಂ, ಬಸವಾದಿ ಶರಣರ ಪ್ರಜಾಸತ್ತಾತ್ಮಕ ಮೌಲ್ಯಗಳ ಪ್ರತಿಪಾದಕರಾಗಿ ನುಡಿದಂತೆ ನಡೆದ ಮಹಾನ್ ಮಾನವತಾವಾದಿ ಎಂದರು.

ವೇದಿಕೆ ಮೇಲೆ ಎಸ್ಎಸ್ಎಲ್ಸಿ ಮಕ್ಕಳನ್ನು ಕರೆಸಿ ಕೂರಿಸಿದ ತರಳಬಾಳು ಶ್ರೀಗಳು ಇಮಾಂ ವ್ಯಕ್ತಿತ್ವದ ಕುರಿತು ಬೋಧಿಸಿದರು. ಕಂಪನಿಯೊಂದರ ಸಿಇಒ ಮತ್ತು ಭದ್ರತಾರಕ್ಷಕ ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಲಿಂಡನ್ ಜಾನ್ಸನ್ ಅವರ ಕಾಲ್ಪನಿಕ ಮತ್ತು ವಾಸ್ತವ ಕಥೆಗಳೊಂದಿಗೆ ರಾಜಕಾರಣ ಮತ್ತು ಕರ್ತವ್ಯನಿಷ್ಠೆಯನ್ನು ಶಿಕ್ಷಕ ವಿದ್ಯಾರ್ಥಿಯ ಮಧ್ಯೆಗಿನ ಘಟನೆಯೊಂದಿಗೆ ಓದು ಭವಿಷ್ಯ ಜೀವನಕ್ಕೆ ಆಧಾರವಾಗಲು ಶ್ರೀಗಳು ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಎಲ್ಲರ ಗಮನ ಸೆಳೆಯಿತು.

ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ.ರಾಜೇಶ್, ಗೌರವಾಧ್ಯಕ್ಷ ಹಾಜಿ ಜೆ.ಕೆ.ಹುಸೇನ್ ಮಿಯ್ಯಾ ಸಾಬ್, ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯ ಸಿಂಡಕೇಟ್ ಸದಸ್ಯೆ ಇಮಾಂ ಸಾಹೇಬರ ಮೊಮ್ಮಗಳು ಚಮಾನ್ ಬೀ. ಫರ್ಜಾನ, ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಖಲೀಲ್ ಸಾಹೇಬ್, ಮುಖ್ಯ ಶಿಕ್ಷಕ ಜೆ.ಎಆರ್. ಶಂಕರ್, ಜೆ.ಕೆ. ಮಹಮದ್ ಹುಸೇನ್, ಹಲೀಮಾಬೀ, ಸಾಹಿತಿಗಳಾದ ಎನ್.ಟಿ.ಯರ್ರಿಸ್ವಾಮಿ, ಪ್ರಾಂಶುಪಾಲ ದಾದಾಪೀರ್ ನವಿಲೆಹಾಳ್, ಯಾದವರೆಡ್ಡಿ ಇತರರು ಇದ್ದರು. ೨೬ಜೆಎಲ್ಆರ್ಚಿತ್ರ೧ಎ:

ಜಗಳೂರು ಜೆ.ಎಂ.ಇಮಾಂ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಮಾಂ ಮೆಮೋರಿಯಲ್ ಶಾಲೆಯ ಜೆ.ಎಂ.ಇಮಾಂ ಸ್ಮಾರಕ ಪ್ರಶಸ್ತಿ ಸ್ವೀಕಾರ ಸಮಾರಂಭವನ್ನು ಸಿರಿಗೆರೆ ಶ್ರೀಗಳು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ