ಕುದೂರು: ಪ್ರತಿಯೊಂದು ವಸ್ತುವಿನಲ್ಲೂ ಭಗವಂತನನ್ನು ನೋಡುವ ಸಂಸ್ಕೃತಿ ನಮ್ಮದಾಗಿದೆ. ನಮ್ಮಗಳ ಇಂತಹ ಮನಸ್ಥಿತಿಯನ್ನು ರೂಢಿಸಿಕೊಂಡ ಭಾರತೀಯ ಪರಂಪರೆಗೆ ಇಡೀ ಜಗತ್ತು ಬೆರಗಾಗಿ ನೋಡುತ್ತಿದೆ ಎಂದು ಶಿವಗಂಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್‍ಯ ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್‍ಯವಾಹಕ ನಾ.ತಿಪ್ಪೇಸ್ವಾಮಿ, ಭಾರತೀಯರು ಎಂದಿಗೂ ಇನ್ನೊಂದು ದೇಶದ ಮೇಲೆ ತನ್ನಿಂತಾನೆ ಧಾಳಿ ಮಾಡಿದ ಉದಾಹರಣೆಗಳಿಲ್ಲ. ನಮ್ಮಗಳ ಮೇಲೆ ಸಾಕಷ್ಟು ಆಕ್ರಮಣಗಳಾಗಿದ್ದರೂ ಸಂಸ್ಕೃತಿಯಿಂದ ಗೆದ್ದ ದೇಶವೇನಾದರೂ ಇದ್ದರೆ ಅದು ನಮ್ಮ ಭಾರತ ಮಾತ್ರ ಎಂದರು.
ಪಾಶ್ಚಿಮಾತ್ಯ ಅನುಕರಣೆಗಳಿಂದ ಭಾರತೀಯ ಮೌಲ್ಯಗಳು ಕುಸಿಯುತ್ತಿದ. ನಮ್ಮ ಮನೆಗಳಿಗೆ ನಮ್ಮ ಅನುಮತಿಯಿಲ್ಲದೆ ಡೇಗಳು ಬಂದು ಸೇರಿವೆ. ಅಂದರೆ ಮದರ್ಸ್ ಡೇ , ಫಾದರ್ಸ್ ಡೇ , ವ್ಯಾಲೆಂಟೈನ್ಸ್ ಡೇ. ನಿತ್ಯವೂ ತಂದೆ ತಾಯಿಗಳನ್ನು ಪೂಜಿಸುವ ನಾಡಿನ ನಮಗೆ ಒಂದು ದಿನ ತಾಯಿ ಮತ್ತು ತಂದೆಯನ್ನು ನೆನೆಯುವ ಹಬ್ಬಗಳು ಬೇಕೆ? ವ್ಯಕ್ತಿಯನ್ನು ದುರ್ಬಲಗೊಳಿಸುವ ಯಾವುದೇ ಆಚರಣೆಗಳನ್ನು ನಾನು ದಿಕ್ಕರಿಸುವ ಗುಣವನ್ನು ರೂಢಿಸಿಕೊಳ್ಳನೇಕು ಎಂದು ಹೇಳಿದರು.ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಮಾತನಾಡಿ, ಒಗ್ಗಟ್ಟಿನಲ್ಲಷ್ಟೇ ನಮ್ಮ ಬಲ ಚನ್ನಾಗಿ ಪ್ರದರ್ಶಿಸಬಹುದು. ಜೇನು ಹುಳು ಒಂದೇ ಒಂದು ಬಂದಾಗ ನಮಗೆ ಏನೂ ಗಾಬರಿಯಾಗುವುದಿಲ್ಲ. ಏಕೆಂದರೆ ಅದೊಂದು ಹುಳು ಎಂದು ಭಾವಿಸಿರುತ್ತೇವೆ. ಆದರೆ ಅದೇ ಜೇನುಹುಳು ಹಿಂಡುಹಿಂಡಾಗಿ ಬಂದಾಗ ಇದೇ ಜನ ಎದ್ದೆವೋ ಬಿದ್ದೆವೋ ಎಂದು ಓಡಿ ಅವುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಸಂಘಟನೆಗೆ ಇರುವ ಶಕ್ತಿ ಅಂತಹದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವರ್ತಕರು ಹಾಗೂ ಜನರು ಧ್ವಜ ಹಿಡಿದು ಗ್ರಾಮದ ಮುಖ್ಯಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಭಾರತಮಾತೆ ಮತ್ತು ಶ್ರೀರಾಮದೇವರ ಮೂರ್ತಿಗಳನ್ನು ಬೆಳ್ಳಿರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
20ಕೆಆರ್ ಎಂಎನ್ 3,4.ಜೆಪಿಜಿ
4.ಕುದೂರು ಗ್ರಾಮದಲ್ಲಿ ಹಿಂದೂ ಸಮಾಜೋತ್ಸವದ ಮೆರವಣಿಗೆ.