ಪ್ರಪಂಚ ಭಗವಂತ ನಿರ್ಮಿಸಿದ ಚಿತ್ರಕಲಾ ಶಾಲೆ

KannadaprabhaNewsNetwork |  
Published : Sep 17, 2026, 03:00 AM IST
16ಗ್ವದವದ್ವದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲನಮ್ಮ ಸುತ್ತಮುತ್ತಲಿನ ಗಿಡ-ಮರ, ಗುಡ್ಡ-ಬೆಟ್ಟ, ಜಲಪಾತದಂತ ನಿಸರ್ಗ ವೀಕ್ಷಿಸಿದಾಗ ಈ ಪ್ರಪಂಚ ಭಗವಂತನು ನಿರ್ಮಿಸಿದ ಚಿತ್ರಕಲಾ ಶಾಲೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾದೀಶ ಸಂಜೀವಕುಮಾರ ಹಂಚಾಟೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಮ್ಮ ಸುತ್ತಮುತ್ತಲಿನ ಗಿಡ-ಮರ, ಗುಡ್ಡ-ಬೆಟ್ಟ, ಜಲಪಾತದಂತ ನಿಸರ್ಗ ವೀಕ್ಷಿಸಿದಾಗ ಈ ಪ್ರಪಂಚ ಭಗವಂತನು ನಿರ್ಮಿಸಿದ ಚಿತ್ರಕಲಾ ಶಾಲೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾದೀಶ ಸಂಜೀವಕುಮಾರ ಹಂಚಾಟೆ ಅಭಿಪ್ರಾಯಪಟ್ಟರು.

ನಗರದ ಶಂಕರಿ ರಾಮಲಿಂಗ ದೇವಸ್ಥಾನದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರ ಧನಸಹಾಯದಲ್ಲಿ ಅಹಮದ್ ಕನಸಾವಿ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಶಿಲಾಯುಗ ಕಾಲದ ಇತಿಹಾಸ ನಾವು ಅವರು ಚಿತ್ರಿಸಿದ ಚಿತ್ರಕಲೆಯ ಮೂಲಕವೇ ಅವರ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತೇವೆ. ಅಂದರೇ ಭಾಷೆಗೂ ಮೊದಲು ಒಬ್ಬರನ್ನೊಬ್ಬರನ್ನು ಸಂಪರ್ಕಿಸಲು ಚಿತ್ರಕಲೆಯು ಒಂದು ಸಾಧನವಾಗಿತ್ತು. ಚಿತ್ರಕಲೆ ಮನುಷ್ಯನನ್ನು ಏಕಾಗ್ರಚಿತ್ರಗೊಳಿಸುವುದಲ್ಲದೇ ಮನುಷ್ಯನ ಮನಸ್ಸನ್ನು ಅರಳಿಸುವುದು. ಅದಕ್ಕಾಗಿ ನಾವು ಚಿಕ್ಕ ಮಕ್ಕಳಿರುವಾಗಲೇ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.

ಕರ್ನಾಟಕ ಚಿತ್ರಕಲಾ ಅಕಾಡಮಿ ಸದಸ್ಯ ವೆಂಕಟೇಶ ಬಡಿಗೇರ ಮಾತನಾಡಿ, ಅಹಮದ್ ಕನಸಾವಿ ಅವರು ಒಬ್ಬ ಅಪರೂಪದ ಚಿತ್ರಕಲಾವಿದರು ಎಂದರೇ ತಪ್ಪಾಗದು. ಅವರ ಉಬ್ಬು(ಮೆಟಲ್) ಕೆತ್ತನೆ ಚಿತ್ರ ಪ್ರದರ್ಶನ ಉತ್ತರ ಕರ್ನಾಟಕದಲ್ಲೆ ಮೊಟ್ಟಮೊದಲ ಪ್ರದರ್ಶನವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಪೀಠಾಧೀಶ ಗುರುಮಹಾಂತ ಶ್ರೀಗಳು ಮಾತನಾಡಿ, ಕನಸಾವಿ ಅವರಲ್ಲಿ ಕಲೆಯು ಅವರ ವಂಶಪಾರಂಪರಿಕವಾಗಿ ಬಂದಿದೆ. ಇವರು ಚಿತ್ರಿಸಿದ ಉಬ್ಬು ಕೆತ್ತನೆ ಚಿತ್ರ ಪ್ರದರ್ಶನ ಅವರ ಕಲೆಯ ನೈಪುನ್ಯತೆ ತೋರಿಸುತ್ತದೆ. ಸುಮಾರು 15 ವರ್ಷಗಳಿಂದ ಬೆಂಗಳೂರಿನಲ್ಲಿ ಬೇರೆಯವರ ಅಡಿಯಲ್ಲಿ ಸಾಕಷ್ಟು ಚಿತ್ರಕಲಾ ಪ್ರದರ್ಶನಗಳನ್ನು ನೀಡಿ ದೇಶ ವಿದೇಶಗಳಲ್ಲಿ ಇವರ ಚಿತ್ರಕಲೆ ಪ್ರಸಿದ್ಧಿ ಪಡೆದಿದ್ದರು. ಅವರಿಗೆ ಯಾವುದೇ ಪ್ರಚಾರ ಸಿಗಲಿಲ್ಲ. ಅದಕ್ಕಾಗಿ ಅವರು ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ 3 ದಿನಗಳ ಕಾಲ ಸಾರ್ವಜನಿಕರಿಗೆ ಚಿತ್ರಕಲಾ ಪ್ರದರ್ಶನ ಪ್ರದರ್ಶಿಸಿದ್ದು, ಅತ್ಯಂತ ಶ್ಲಾಘನೀಯ. ಕಲೆ, ಚಿತ್ರಕಲೆ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಮಕ್ಕಳಿಗೆ ಚಿತ್ರಗಳನ್ನು ತೋರಿಸುವ ಮೂಲಕ ಭಾಷಾ ಜ್ಞಾನದ ಅರಿವು ಪ್ರಾರಂಭಿಸುತ್ತೇವೆ. ಇಂತಹ ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸುವಂತ ಕಾರ್ಯವಾಗಬೇಕು ಎಂದರು.

ಮುರ್ತುಜಾ ಬೇಗಂ ಕೊಡಗಲಿ ತಾಯಿಯವರ ಮನದಾಳದ ಅಳಿವು ನಮಗೆ ಅರಿವಾಗಿದ್ದು, ಇನ್ನು ಮುಂದೆ ನಗರದ ಸಾಹಿತಿಗಳು ತಾವು ಬರೆದ ಉತ್ತಮ ಸಾಹಿತ್ಯವಾಗಲಿ ರಚಿಸಿದ ಕವನ ಸಂಕಲನವಾಗಲಿ ಅದರ ಬಿಡುಗಡೆಗೆ ನಮ್ಮ ಶ್ರೀಮಠದಲ್ಲಾಗಲಿ, ದಾಸೋಹ ಭವನದಲ್ಲಾಗಲಿ ಅಥವಾ ಅನುಭವ ಮಂಟಪದಲ್ಲಾಗಲಿ ಉಚಿತವಾಗಿ ಸ್ಥಳಾವಕಾಶವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಂಕರಿ ರಾಮಲಿಂಗ ದೇವಸ್ಥಾನದ ಧರ್ಮದರ್ಶಿಗಳಾದ ಮುನಿಸ್ವಾಮಿ ದೇವಾಂಗಮಠ ವಹಿಸಿದ್ದರು.

ಬಾಲಕೋಟೆ ಜಿಲ್ಲಾ ದುತ್ತರಗಿ ಟ್ರಸ್ಟ್‌ ನ ಸದಸ್ಯ ಇಬ್ಬಾಹಿಂ ಕನಸಾವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟ್ಯಂತರ ಅನುದಾನ: ಆಮೆಗತಿ ಕಾಮಗಾರಿ!
ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸಬೇಕಿದೆ: ಯತ್ನಾಳ