ಮೈಸೂರು: ದೇಸಿ ಬೀಜ ಸಂಸ್ಕೃತಿಯ ಮಹತ್ವವನ್ನು ಎಳೆಯ ಮಕ್ಕಳಿಗೆ ತಿಳಿಸಿ ಹೇಳಲು ಚಿತ್ರಕಲಾ ಸ್ಪರ್ಧೆ ಸಹಕಾರಿಯಾಗಿದೆ. ಪೋಷಕರಿಗೂ ನಮ್ಮ ಬೀಜ ಸಂಸ್ಕೃತಿಯ ಪರಿಚಯವಾಗುತ್ತದೆ. ತಲೆಮಾರುಗಳಿಂದ ರೈತರು ಸಾಗಿಸಿ ತಂದ ಬೀಜ ವೈವಿಧ್ಯವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದು ಚಿಂತಕ ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.ದೇಸಿ ಬೀಜೋತ್ಸವ ಅಂಗವಾಗಿ ನಂಜರಾಜ ಬಹದ್ದೂರು ಛತ್ರದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಭವಿಷ್ಯಕ್ಕಾಗಿ ದೇಸಿ ಬೀಜಗಳು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ದೇಸಿ ಬೀಜಗಳು ಆಯಾ ಪ್ರದೇಶದ ಆಹಾರ ಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಆಹಾರ ಭದ್ರತೆ ಒದಗಿಸುತ್ತವೆ. ಇಂಥ ಬೀಜಗಳನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯ ಎಂದರು.ಪ್ರತಿ ಮಕ್ಕಳ ಚಿತ್ರವೂ ಕಲಾಕೃತಿ. ಅದಕ್ಕೆ ಬಹುಮಾನದ ಚೌಕಟ್ಟು ಹಾಕಿ, ಮಕ್ಕಳ ಸೃಜನಶೀಲತೆಯನ್ನು ಕುಗ್ಗಿಸಬಾರದು ಎಂದು ಚಿತ್ರ ಕಲಾವಿದ ಶಿವಕುಮಾರ್ ಅಭಿಪ್ರಾಯಪಟ್ಟರು.ಚಿತ್ರಕಲಾ ಸ್ಪರ್ಧೆಗೆ ಬಂದ ಚಿತ್ರಗಳ ಮೌಲ್ಯಮಾಪನ ಮಾಡಿದ ಅವರು ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳಿಗೆ ದೇಸಿ ಬೀಜಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿತ್ತು. ಅದು ಸಾರ್ಥಕವಾಗಿದೆ. ಮಕ್ಕಳು ಬೀಜ ಲೋಕದ ಒಳಹೊಕ್ಕು ಬಂದಿದ್ದಾರೆ ಎಂದರು.ಭತ್ತ ಸಂರಕ್ಷಕ ಶ್ರೀನಿವಾಸ ಮೂರ್ತಿ ಮಾತನಾಡಿ, ಬೀಜಗಳು ಕುತೂಹಲಮತ್ತು ಸೃಜನಶೀಲತೆಯನ್ನು ಅರಳಿಸುವ ನಿಸರ್ಗದ ಕಲಾಕೃತಿ. ಬೀಜ ಸಂಸ್ಕೃತಿ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಈ ಮೂಲಕ ದೇಸಿ ಬೀಜಗಳ ಮಹತ್ವ ಪೋಷಕರಿಗೂ ತಲುಪಿನಂತಾಗಿದೆ ಎಂದರು.5 ರಿಂದ 7ವರ್ಷ ವಿಭಾಗದಲ್ಲಿ ಮನ್ವಿತ ಪ್ರಥಮ, ಯುಕ್ತಾಶೈವ ದ್ವಿತೀಯ ಮತ್ತು ಎಂ.ಪಿ. ರಿತವ್ ತೃತೀಯ ಬಹುಮಾನಗಳಿಸಿದರು.8ರಿಂದ 12 ವರ್ಷ ವಿಭಾಗದಲ್ಲಿ ತೀರ್ಥ್ ಸೋನಿ ಪ್ರಥಮ,ಪುನರ್ ದತ್ತ ದ್ವಿತೀಯ ಮತ್ತು ಆರ್ಯ ತೃತೀಯ ಬಹುಮಾನ ಗಳಿಸಿದರು.ಪ್ರಾನ್ಸ ದೇಶದಿಂದ ಬಂದಿರುವ ಪಾಲ್ ಲಿನ್ನೆ, ಜೆನ್ನಿಲೆ ಮತ್ತು ಮಾರ್ಕ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿ.ಎನ್. ಕೇಶವಮೂರ್ತಿ ಮತ್ತು ಕೆ.ಎಸ್. ಮಂಜು ನಿರ್ವಹಿಸಿದರು.---ಬಾಕ್ಸ್ ಸುದ್ದಿರೈತ ಅಭಿವೃದ್ದಿಪಡಿಸಿದ್ದ ಭತ್ತದ ತಳಿಗಳ ಬಿಡುಗಡೆಕನ್ನಡಪ್ರಭ ವಾರ್ತೆ ಮೈಸೂರು
ದಾವಣಗೆರೆ ಜಿಲ್ಲೆಯ ಹರಿಹರದ ಕುಂಬಳೂರಿನಆಂಜನೇಯ 200 ಕ್ಕೂ ಹೆಚ್ಚಿನ ದೇಸಿ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ; ಭತ್ತದ ಬೀಜ ಬ್ಯಾಂಕ್ ಆರಂಭಿಸಿದ್ದಾರೆ.ಇವರು ಅಭಿವೃದ್ಧಿಪಡಿಸಿದ ''''''''''''''''''''''''''''''''ಸಿಂಧೂರ ಮಧುಸಾಲೆ'''''''''''''''''''''''''''''''' ''''''''''''''''''''''''''''''''ಅಂದನೂರು ಸಣ್ಣ'''''''''''''''''''''''''''''''', ''''''''''''''''''''''''''''''''ಕುಂಬಳ ಸಾಲೆ'''''''''''''''''''''''''''''''' ಗಿರಿ ಸಾಲೆ'''''''''''''''''''''''''''''''' ಮತ್ತು '''''''''''''''''''''''''''''''' ಮಧು ಸಾಲೆ '''''''''''''''''''''''''''''''' ಎಂಬ ಭತ್ತದ ತಳಿಗಳಿಗೆ ದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ''''''''''''''''''''''''''''''''ರೈತರ ತಳಿ'''''''''''''''''''''''''''''''' ಎಂದು ನೊಂದಣಿ ಮಾಡಿ ಹಕ್ಕು ನೀಡಿದೆ. ದೇಸಿ ಬೀಜೋತ್ಸವದಲ್ಲಿ ಈ ತಳಿಗಳನ್ನು ಬಿಡುಗಡೆ ಮಾಡಲಾಯಿತು.ಕೆಂಪು ಅಕ್ಕಿಯ ಸಿಂಧೂರ ಮಧುಸಾಲೆ ಮತ್ತು ನಿತ್ಯದ ಬಳಕೆಗೆ ಸೂಕ್ತವಾದ ಅಂದನೂರು ಸಣ್ಣ ವಿಷೇಷವಾದ ಫೈನ್ ರೈಸ್ ತಳಿಗಳು. ದಿನನಿತ್ಯದ ಬಳಕೆಗೆ ಈ ತಳಿಗಳು ಹೇಳಿ ಮಾಡಿಸಿದಂತಿವೆ. ಗ್ರಾಹಕರ ವಲಯದಲ್ಲೂ ಇದಕ್ಕೆ ವಿಷೇಶ ಬೇಡಿಕೆ ಇದೆ. ಆಂಜನೇಯರವರು ಈ ತಳಿಗಳನ್ನು ಆಸಕ್ತರಿಗೆ ಬೆಳೆಸಿ ನೋಡಲು ನೀಡುತ್ತಿದ್ದಾರೆ. ಈ ಬೀಜಗಳನ್ನು ಪಡೆಯಲು ಆಸಕ್ತರು ಮೊ. 70900 09944 ಸಂಪರ್ಕಿಸಬಹುದು.