ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಕನ್ನಡ ಭವನದಲ್ಲಿ ಕಸಾಪದಿಂದ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ -ಕಾಲೇಜುಗಳಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 125 ಕ್ಕೆ 125 ಮತ್ತು ದ್ವಿತೀಯ ಪಿಯುಸಿಯಲ್ಲಿ 100ಕ್ಕೆ 100 ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿದವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆ ಹೊರ ಹೊಮ್ಮಿಸುವ ಕೆಲಸ ಶಿಕ್ಷರಿಂದಾಗಬೇಕು. ಅಕ್ಷರ ಕಲಿತವರು ಹೆತ್ತವರಿಗೆ -ಗುರು -ಹಿರಿಯರಿಗೆ ಗೌರವ ತೋರುವ ಜೊತೆಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಮನೋಭಾವ ಬೆಳಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ. ಕಾಲ ಕಾಲಕ್ಕೆ ಹೊಸ ಹೊಸ ವಿಚಾರಗಳನ್ನು ಗ್ರಹಿಸಿ ಸರಿಯಾದ ರೀತಿ ಪರೀಕ್ಷೆಗಳಿಗೆ ಉತ್ತರಿಸಿ ಅಧಿಕ ಅಂಕಗಳಿಸಬೇಕು. ಗ್ರಾಮೀಣ ಮಕ್ಕಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ತಮ್ಮ ಬುದ್ದಿವಂತಿಕೆಯನ್ನು ತೋರಿ ಉತ್ತಮ ಫಲಿತಾಂಶ ಪಡೆಯುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದು ಕೊಂಡು ಹುನ್ನತ ಹುದ್ದೆಗಳನ್ನು ಅಲಕಂರಿಸಿ ಕನ್ನಡ ಭಾಷೆಯಾಗಿರುವುದರಿಂದ ಜ್ಞಾನ ಸಂಪಾದನೆಗೆ ಇತರೆ ಭಾಷೆಗಳನ್ನು ಕಲಿಯಬೇಕು ಎಂದರು. ಮೊದಲು ಮಾತೃಭೆಷೆಗೆ ಸ್ಥಾನ ನಂತರ ಬದುಕು ಕಟಟ್ಕೊಳ್ಳಲು ಬಹು ಭಾಷೆಯಗಳನ್ನು ಕಲಿಯುವುದು ಅನಿವಾರ್ಯ. ಕನ್ನಡವನ್ನು ಉಳಿಸಿ ಬೆಳಸುವ ಹೊಣೆಗಾರಿಕೆ ಶಿಕ್ಷಣ ಕ್ಷೇತ್ರದ ಜವಾಬ್ದಾರಿ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯಗೆ 110 ವರ್ಷಗಳ ಇತಿಹಾಸವಿದೆ. ಕನ್ನಡಿಗರಿಗೆ ಶಾಸಕ ಕೆ.ಎನ್.ರಾಜಣ್ಣನವರಂತಹ ಕೊಡುಗೈ ದಾನಿಗಳಿರಬೇಕು ಎಂದರು. ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಅಂಕಮೂಲ ಗೌರವ ಮೆಚ್ಚುವಂಥದ್ದು ,ಆದರೆ ಜ್ಞಾನ ಮೂಲದ ಶಿಕ್ಷಣ ಸಮಾಜಮುಖಿಯಾಗಿ ಸುಧಾರಣೆ ತರುತ್ತದೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ ಮಾತನಾಡಿ, ಕನ್ನಡವನ್ನು ಸುಲಭವೆಂದು ಅಲಕ್ಷಿಸಬಾರದು. ಗೌರವಿಸಿ ಅಧ್ಯಯನ ಮಾಡಿದರೆ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದರು.