ಯಾದವ ಸಮಾಜ ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿದೆ

KannadaprabhaNewsNetwork |  
Published : Aug 27, 2024, 01:31 AM IST
26ಕೆಬಿಪಿಟಿ.1.ಬಂಗಾರಪೇಟೆಯಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ನಾರಾಯಣಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಗೊಲ್ಲ ಸಮುದಾಯವರು ಒಂದಾಗಿರದೆ ಚದುರಿ ಹೋಗಿದ್ದು, ಕೆಲ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಎಲ್ಲ ರಂಗದಲ್ಲಿಯೂ ಮುಂದೆ ಬರಲು ಕಷ್ಟವಾಗಿದೆ, ಆದ್ದರಿಂದ ಸಮುದಾಯದವರು ಒಂದಾಗಿ ಬಂದರೆ ಮಾತ್ರ ಸಾಮಾಜಿಕ,ಆರ್ಥಿಕ,ಹಾಗೂ ರಾಜಕೀಯವಾಗಿ ಬಲಿಷ್ಟರಾಗಲು ಸಾಧ್ಯ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನಲ್ಲಿರುವ ಯಾದವ ಸಮುದಾಯವರು ಕೆಲವರ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ,ಇದರಿಂದ ಸಮುದಾಯ ಅಭಿವೃದ್ದಿಗೆ ಮಾರಕವಾಗಿದ್ದು ಕಪಿಮುಷ್ಟಿಯಿಂದ ಹೊರಬಂದು ಒಗ್ಗಟ್ಟು ಪ್ರದರ್ಶಿಸಿ ಎಲ್ಲಾ ರಂಗದಲ್ಲಿಯೂ ಅಭಿವೃದ್ದಿ ಹೊಂದಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಗೊಲ್ಲ (ಯಾದವ) ಸಮುದಾಯ ಕ್ಷೇಮಾಭಿವೃದ್ದಿ ಸಂಘದಿಂದ ಹಾಗೂ ತಾಲೂಕು ಆಡಳಿತದಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಒಂದಾಗಬೇಕು

ಕ್ಷೇತ್ರದಲ್ಲಿ ಗೊಲ್ಲ ಸಮುದಾಯವರು ಒಂದಾಗಿರದೆ ಚದುರಿ ಹೋಗಿದ್ದು, ಕೆಲ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಎಲ್ಲ ರಂಗದಲ್ಲಿಯೂ ಮುಂದೆ ಬರಲು ಕಷ್ಟವಾಗಿದೆ, ಆದ್ದರಿಂದ ಸಮುದಾಯದವರು ಒಂದಾಗಿ ಬಂದರೆ ಮಾತ್ರ ಸಾಮಾಜಿಕ,ಆರ್ಥಿಕ,ಹಾಗೂ ರಾಜಕೀಯವಾಗಿ ಬಲಿಷ್ಟರಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.ಮನುಷ್ಯನ ಪರಿಪೂರ್ಣ ಬದುಕಿಗೆ ಶ್ರೀಕೃಷ್ಣ ಆದರ್ಶವಾಗಿದ್ದು, ಕೃಷ್ಣನನ್ನು ಕೇವಲ ದೇವರೆಂದು ಪೂಜಿಸಬೇಡಿ. ಅವನ ಲೀಲೆಗಳಲ್ಲಿನ ಸಂದೇಶವನ್ನು ಅರಿಯಬೇಕು, ಶ್ರೀಕೃಷ್ಣ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ. ಅವನ ಬದುಕಿನ ಸಂದೇಶಗಳನ್ನು ನಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪೂರ್ಣತೆಯುತ್ತ ಒಯ್ಯವ ಯತ್ನ ಮಾಡಬೇಕು, ಕೃಷ್ಣಾವತಾರದ ಒಂದೊಂದು ಪ್ರಸಂಗವೂ ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರದಂತಿದೆ. ಶ್ರೀಕೃಷ್ಣ ವ್ಯಕ್ತಿತ್ವ ಅದ್ಬುತವಾದುದು. ಅದಕ್ಕಾಗಿಯೇ ಮಾನವನು ಸಾವಿರಾರು ವರ್ಷಗಳಿದ ಕೃಷ್ಣನ ನುಡಿಗಳನ್ನು ಅನುಸರಿಸುತ್ತಾ ಬಂದಿದ್ದಾನೆ.ಅನೇಕ ಸಮಸ್ಯೆಗೆ ಪರಿಹಾರ

ಆತನ ಬಾಲ್ಯ ಲೀಲೆಗಳಿಂದ ಹಿಡಿದು ನಿರ್ವಾಣದ ತನಕದ ಘಟನೆಗಳು ಇಂದಿಗೂ ಸಹ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತವೆ, ದೇವರದೇವ ಮಾನವರೂಪದಲ್ಲಿ ಅವತರಿಸಿ ಸಾಮಾನ್ಯ ಮಾನವರಲ್ಲಿ ಸಮಾನರಾಗಿ ತನ್ನ ಲೀಲೆಯನ್ನು ತೋರುತ್ತಾ ಅಲೌಕಿಕ ಸಾಮರ್ಥ್ಯವನ್ನು ಪ್ರಕಟಿಸಿದನು,ಇಂತಹ ಸಮುದಾಯದವರು ವರ್ಷಕ್ಕೊಮ್ಮೆ ಒಂದಾಗಿ ಸೇರಿ ಕುಶಲೋಪರಿ ಮಾತುಗಳನ್ನು ಆಡಲು ಜಯಂತಿ ಆಚರಣೆಗೆ ಸರ್ಕಾರ ಅವಕಾಶ ನೀಡಿದೆ ಎಂದರು.

ಭವನ ನಿರ್ಮಾಣ ನನೆಗುದಿಗೆ

ಆದರೆ ಇದರಲ್ಲಿಯೂ ಗುಂಪುಗಾರಿಕೆ ನಿರ್ಮಾಣವಾಗಿರುವುದು ಬೇಸರ ತಂದಿದೆ ಎಂದರಲ್ಲದೆ ಗೊಲ್ಲರ ಸಮುದಾಯ ಭವನ ನಿರ್ಮಾಣಕ್ಕೆ ೧೦ಗುಂಟೆ ಜಾಗ ನೀಡಲಾಗಿದೆ, ಆದರೆ ಒಗ್ಗಟ್ಟು ಕೊರತೆಯಿಂದ ಭವನ ನಿರ್ಮಾಣ ಕಾರ‍್ಯ ನನೆಗುದಿಗೆ ಬಿದ್ದಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.ಈ ವೇಳೆ ಗೊಲ್ಲ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶ್ರೀನಿವಾಸ್,ಪುರಸಭೆ ಅಧ್ಯಕ್ಷ ಗೋವಿಂದ,ಉಪಾಧ್ಯಕ್ಷೆ ಚಂದ್ರವೇಣಿಮಂಜುನಾಥ್,ತಹಸೀಲ್ದಾರ್ ವೆಂಕಟೇಶಪ್ಪ,ಇಒ ರವಿಕುಮಾರ್,ಮುಖ್ಯಾಧಿಕಾರಿ ಸತ್ಯನಾರಾಯಣ,ಬಿಇಒ ಸುಕನ್ಯ,ಕಾರಹಳ್ಳಿ ಪಂಃಅಧ್ಯಕ್ಷ ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ವಿವೇಕಾನಂದ, ಬಾಬುಲಾಲ್, ಸಾಧಿಕ್, ಸಮಾಜ ಕಲ್ಯಾಣ ಇಲಾಖೆ ಅಂಜಲಿದೇವಿ, ಕೃಷಿ ಇಲಾಖೆ ಸಹಾಯಕಿ ನಿರ್ದೇಶಕಿ ಪ್ರತಿಭಾ, ಮುಖಂಡ ಪಾರ್ಥಸಾರಥಿ, ಇತರರು ಇದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ