ಜನಮನಗೆದ್ದ ಕರಾವಳಿಯ ಯಕ್ಷಗಾನ ಕಲೆ

KannadaprabhaNewsNetwork | Published : Jul 16, 2024 12:34 AM

ಸಾರಾಂಶ

ಕನ್ನಡ ಪ್ರಭ ವಾರ್ತೆ ಮುಧೋಳ: ನಡೂರು ಮಂದಾರ್ತಿಯ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರ ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಗರದ ಕವಿ ಚಕ್ರವರ್ತಿ ರನ್ನ ಗ್ರಂಥಾಲಯದ ಸಭಾ ಭವನದಲ್ಲಿ ಭಾನುವಾರ ಹೊಟೆಲ್‌ ಮಾಲಿಕರ ಸಂಘ, ಬಾರ್ ಮಾಲಿಕರ ಸಂಘ ಹಾಗೂ ಬೇಕರಿ ಮಾಲಿಕರ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ಪ್ರದರ್ಶನಕ್ಕೆ ಹೊಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಬಾಬು ದೇವಾಡಿಗ ಚಾಲನೆ ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ:ನಡೂರು ಮಂದಾರ್ತಿಯ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರ ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಗರದ ಕವಿ ಚಕ್ರವರ್ತಿ ರನ್ನ ಗ್ರಂಥಾಲಯದ ಸಭಾ ಭವನದಲ್ಲಿ ಭಾನುವಾರ ಹೊಟೆಲ್‌ ಮಾಲಿಕರ ಸಂಘ, ಬಾರ್ ಮಾಲಿಕರ ಸಂಘ ಹಾಗೂ ಬೇಕರಿ ಮಾಲಿಕರ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ಪ್ರದರ್ಶನಕ್ಕೆ ಹೊಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಬಾಬು ದೇವಾಡಿಗ ಚಾಲನೆ ನೀಡಿದರು.

ಉತ್ತರ ಕರ್ನಾಟಕದ ಪಾರಿಜಾತ ಮತ್ತು ದೊಡ್ಡಾಟದಂತೆ ಯಕ್ಷಗಾನ ಕಲಾವಿದರು ಸಂಭಾಷಣೆ, ಸಂಗೀತ ಮತ್ತು ವಿಶೇಷ ಉಡುಗೆ ಮೂಲಕ ಪ್ರೇಕ್ಷಕರ ಮನ ಗೆದ್ದರು. ಭಾಗವತರಾಗಿ ಸದಾಶಿವ ಅಮೀನ್‌ ಕೊಕ್ಕರ್ಣಿ, ಗಣೇಶ ಆಚಾರ್ಯ ಬಿಲ್ಲಾಡಿ, ಸ್ತ್ರೀ ಪಾತ್ರದಲ್ಲಿ ದಿನಕರ ಕುಂದರ ನಡೂರ, ನಾಗರಾಜ ದೇವಲ್ಕುಂದ ರಾಕೇಶ ಶೆಟ್ಟಿ, ಮೇಗರವಳ್ಳಿ, ಹಾಸ್ಯ ಪಾತ್ರದಲ್ಲಿ ಸತೀಶಕುಮಾರ ಹಾಲಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.

ಯಕ್ಷಗಾನದ ವಿಶೇಷ ಪಾತ್ರದಲ್ಲಿ ಲೋಹಿತ್‌ ಕೊಮೆ, ಹಿರಿಯ ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರರಾವ್, ಚಂಡಕೀರ್ತಿ ವಿಶ್ವನಾಥ ಹೆನ್ನಾಬೈಲ, ನಾಗಾರ್ಜುನ ಹರೀಶ ಜಪ್ತಿ, ಸತ್ಯ ಸೇನಾ ರಮೇಶ ವಂಡಾರ್, ಮೇದಾವಿ ರಾಘವೇಂದ್ರ ಉಳ್ಳೂರ, ನಾಗಾಂಬಿಕೆ ದಿನಕರ ಕುಂದರ ನಡೂರ, ನೈದಿಲೆ ನಾಗರಾಜ ದೇವಾಲು ಕುಂದ, ನಾಗಿಣಿ ರಾಕೇಶ ಶೆಟ್ಟಿ ಮೇಗರವಳ್ಳಿ, ಸತೀಶಕುಮಾರ ಹಾಲಾಡಿ ಹಾಸ್ಯ ನೋಡುಗರನ್ನು ಮನರಂಜಿಸಿತು. ಇನ್ನು, ಲೋಹಿತ್‌ ಕೊಮೆ ಮದ್ದಳೆ ಮತ್ತು ಕುಮಾರ್‌ ಅಮೀನ್‌ ಕೊಕ್ಕರ್ಣಿ ಚಂಡೆಯನ್ನು ಅದ್ಬುತವಾಗಿ ನುಡಿಸುವ ಮೂಲಕ ಗಮನ ಸೆಳೆದರು.ಪ್ರಸಿದ್ಧ ಯಕ್ಷಗಾನ ಕಲಾವಿದ ವೀರಭದ್ರ ನಂದೀಶ, ಮೊಗವೀರ ಜನ್ನಾಡಿ ವೀರಭದ್ರ ಪಾತ್ರದಾರಿಯಾಗಿ ಅಭಿನಿಯಸಿದ್ದು, ವೀರಭದ್ರ ಪಾತ್ರ ಸನ್ನಿವೇಶ ಕಂಡು ಪ್ರೇಕ್ಷಕರು ಮೂಕ ವಿಸ್ಮಿತರಾದರು. ಅತ್ಯಾಕರ್ಷಕವಾಗಿ ಯಕ್ಷಗಾನ ಪೌರಾಣಿಕ ಕಥಾ ಭಾಗವನ್ನು ಪ್ರದರ್ಶಿಸುವ ಮೂಲಕ ಕಲಾವಿದರು ಯಕ್ಷಗಾನ ಅಭಿಮಾನಿಗಳಿಗೆ ಮುದ ನೀಡಿದರು.ಹೊಟೆಲ್‌ ಮತ್ತು ಬೇಕರಿ ಮಾಲಿಕರು, ವೃತ್ತಿ ಬಾಂಧವರು ಪ್ರತಿವರ್ಷವೂ ನಗರದಲ್ಲಿ ಯಕ್ಷಗಾನ ಹಮ್ಮಿಕೊಳ್ಳುತ್ತಾರೆ. ಈ ವೇಳೆ ಬಾಬು ದೇವಾಡಿಗ, ಉದಯ ಶೆಟ್ಟಿ, ರಾಘು ಗಾಣಿಗ, ಬಾಸ್ಕರ್‌ ದೇವಾಡಿಗ, ಪ್ರವೀಣ ಶೆಟ್ಟಿ, ಸೀತಾರಾಮ ಶೆಟ್ಟಿ, ಗುರುರಾಜ ಶಾಸ್ತ್ರೀ, ಸುರೇಂದ್ರ ಮೊಗವೀರ, ಲಕ್ಷ್ಮಣ ದೇವಾಡಿಗ, ವೆಂಕಟೇಶ ಗಾಣಿಗ, ಪತ್ರಕರ್ತರಾದ ಬಿ.ಆರ್‌.ಶೆಟ್ಟಿ, ಅಶೋಕ ಕುಲಕರ್ಣಿ, ವಿಶ್ವನಾಥ ಮುನವಳ್ಳಿ, ಬಿ.ಎಚ್.ಬೀಳಗಿ ಹೊಟೇಲ್, ಬಾರ್‌, ಬೇಕರಿ ಮಾಲಿಕರ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹೊಟೆಲ್‌ ಮಾಲಿಕರ ಸಂಘದಿಂದ ಯಕ್ಷಗಾನ ಭಾಗವತರಾದ ಸದಾಶಿವ ಅಮೀನ ಕೊಕ್ಕರ್ಣಿ ಅವರನ್ನು ಸನ್ಮಾನಿಸಲಾಯಿತು.---------

Share this article