- ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಆತ್ಮದೀಪಾನಂದ ಜೀ ಮಹಾರಾಜ್ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಹರಿಹರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹರಿಹರ, ಮಲೆಬೆನ್ನೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಸಂಘ ದಾವಣಗೆರೆ, ನವಜೀವನ ಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಶನಿವಾರ ನಗರದ ಗುರು ಭವನದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಜವಾಹರ ಲಾಲ್ ಜಯಂತಿ, ಗಾಂಧಿ ಸ್ಮೃತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯುವಜನತೆಯ ಕುರಿತು 150 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಸಮಾಜವನ್ನು ಎಚ್ಚರಿಸಿದ್ದಾರೆ. ಯುವ ಜನತೆ ಎಲ್ಲ ಕಾಲದಲ್ಲಿಯೂ ಹೀಗೆ ವರ್ತಿಸುತ್ತಾರೆ. ಅವರ ವರ್ತನೆಗಳನ್ನು ಗುರುತಿಸಿ ಬುದ್ದಿ ಹೇಳುವ ಬದಲು, ಅವರಲ್ಲಿ ಬದಲಾವಣೆ ಆಗುವಂಥ ಗುಣಗಳನ್ನು ಬೆಳೆಸಲು ನಾವು ಮುಂದಾಗಬೇಕು. ಆಗ ಅವರು ಬದಲಾಗುತ್ತಾರೆ. ಪಶ್ಚಿಮ ದಿಕ್ಕಿನಲ್ಲಿ ಕುಳಿತು ನಾನು ಈ ದಿಕ್ಕಿನಿಂದ ದೂರ ಆಗಬೇಕೆಂದು ಯೋಚಿಸಿದರೆ ಸಾಲದು. ಪಶ್ಚಿಮದಿಂದ ಪೂರ್ವಕ್ಕೆ ನಡೆದು ಸಾಗಿದಲ್ಲಿ ಮಾತ್ರ ಬದಲಾಗಲು ಸಾಧ್ಯವೆಂದು ಶ್ರೀಗಳು ಜಾಗೃತಿ ಮೂಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಆರ್ಥಿಕ ಸ್ವಾವಲಂಬನೆಗೆ ಧಗ್ರಾ ಯೋಜನೆ ಬಹುಮಹತ್ವದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಸುಜ್ಞಾನ ನಿಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಬಾಬಣ್ಣ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ, ಸನಾತನ ಸಿಂಧೂ ಸಂಸ್ಥೆಯ ಡಾ. ಆರ್.ಆರ್. ಖಮೀತ್ಕರ್, ಜಿಲ್ಲಾ ಜನಜಾಗೃತಿ ಸಮಿತಿಯ ಎ.ಪದ್ಮರಾಜ್, ಜಿ.ಮಂಜುನಾಥ್, ಪಿಎಲ್‌ಡಿ ಬ್ಯಾಂಕಿನ ಜಿ.ಬಿ ಹಾಲೇಶ್ ಗೌಡ್ರ, ಜಿ.ಎಸ್. ರವಿಶಂಕರ್, ರಾಜಶೇಖರ ಕೊಂಡಜ್ಜಿ, ಜಿಗಳಿ ಪ್ರಕಾಶ್, ರೂಪಾ ಪಾಟೀಲ್, ಎಕ್ಕೆಗೊಂದಿ ರುದ್ರಗೌಡ, ರಾಮಾಂಜನೆಯ ಉಪಸ್ಥಿತರಿದ್ದರು.
-3ಎಚ್.ಆರ್.ಆರ್2: