ರಂಗಭೂಮಿಯ ದೈತ್ಯ ಪ್ರತಿಭೆ ಸಿಜಿಕೆ ರಂಗಪರಂಪರೆ ಸಂಕೇತ

KannadaprabhaNewsNetwork |  
Published : Jan 29, 2024, 01:32 AM IST
 ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವಕ್ಕೆ  | Kannada Prabha

ಸಾರಾಂಶ

ರಂಗಭೂಮಿಯ ದೈತ್ಯ ಪ್ರತಿಭೆ ಸಿಜಿಕೆ ರಂಗಪರಂಪರೆ ಸಂಕೇತ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ಎಂ.ರಾಮಚಂದ್ರ ಅಭಿಮತ । ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವ, ರಂಗ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಚಾಮರಾಜನಗರರಂಗಭೂಮಿಯ ದೈತ್ಯ ಪ್ರತಿಭೆ ಸಿಜಿಕೆ ರಂಗಪರಂಪರೆ ಸಂಕೇತ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರಂಗವಾಹಿನಿ, ಕರ್ನಾಟಕ ರಂಗ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಜಿಲ್ಲಾ ಸರ್ಕಾರಿ ನೌಕರರ ಕಲಾವಿದರ ಸಂಘ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವ - ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಿ ಜಿ ಕೆ ಕರ್ನಾಟಕ ರಂಗಭೂಮಿಯ ದ್ಯತ್ಯ ಪ್ರತಿಭೆ. ರಂಗಭೂಮಿ ಕಲಾವಿದರಿಗೆ ಸಿಜಿಕೆ ಹೆಸರು ಎಲ್ಲರ ಮನದಲ್ಲೂ ಕೂಡ ಇದೆ. ರಂಗಭೂಮಿಯನ್ನು ಇಡೀ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಸಿಜಿಕೆ ಬೀದಿನಾಟಕಗಳ ಮುಖಾಂತರ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರು. ಸಿಜಿಕೆ ಎಂದರೆ ರಂಗ ಪರಂಪರೆ ಸಂಕೇತ. ಬಿಹಾರದಲ್ಲಿ ದಲಿತರ ಮೇಲಿನ ದಬ್ಬಾಳಿಕೆಯನ್ನು ಬಿಂಬಿಸುವ ಬೆಲ್ಚಿ ಹೆಸರಿನ ನಾಟಕವೊಂದನ್ನು ಬರೆದಿದ್ದರು. ಅದು ಬಹಳ ಪ್ರಸಿದ್ದಿಯಾಯಿತು. ಡಾ.ಬಿ.ಆರ್.ಅಂಬೇಡ್ಕರರ ನಾಟಕ, ಸೂರಪುರದ ರಾಜ ವೆಂಕಟಪ್ಪನಾಯಕ, ಮಹಾಚೈತ್ರ , ಒಡಲಾಳ ನಾಟಕ ಇಡೀ ರಾಜ್ಯದಲ್ಲಿ ಜನಪ್ರಿಯ ನಾಟಕವಾಗಿತ್ತು. ಇದಕ್ಕೆ ಭಾರಿ ಮನ್ನಣೆ ಕೂಡ ಬಂದಿದೆ. ರಂಗಭೂಮಿ ಕಲಾವಿದರು ಸಿಜಿಕೆ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಸಿಜಿಕೆ ಎಂದರೆ ಸಿ.ಜಿ.ಕೃಷ್ಣ ಸ್ವಾಮಿ ಅವರು ಅರ್ಥ ಶಾಸ್ತ್ರ ಉಪನ್ಯಾಸಕರಾಗಿದ್ದರು. ಸಿಜಿಕೆ ಎಂದರೆ ನಾಟಕ. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಚಳವಳಿಯಾದಾಗ ಅವರು ರಂಗಭೂಮಿಗೆ ಬಂದವರು ಸಿಜೆಕೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಮ್ಮ ಸ್ವಶಕ್ತಿಯಿಂದ ಮೇಲೆ ಬಂದು ರಂಗಭೂಮಿ ಯನ್ನೂ ಬೆಳೆಸಿ, ಆನೇಕ ರಂಗ ಕಲಾವಿದರಿಗೆ ದಾರಿದೀಪವಾಗಿದ್ದರು ಎಂದರು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಜಿಕೆ ರಂಗಭೂಮಿಯನ್ನೆ ಉಸಿರಾಗಿ ಜೀವಿಸಿದವರು. ಒಡಲಾಳ ನಾಟಕದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಉಮಾಶ್ರೀ ಅವರನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ರಂಗಭೂಮಿ ಸಂಘಟಕರು, ನಿರ್ದೇಶಕರನ್ನು , ರಂಗನಟರನ್ನು ಕೊಡುಗೆಯಾಗಿ ಕೊಟ್ಟಂತಹ ಕೀರ್ತಿ ಸಿ ಜಿ ಕೆ ಅವರಿಗೆ ಸಲ್ಲುತ್ತದೆ ಎಂದರು. ಇದೇ ವೇಳೆ ಮೈಸೂರಿನ ಪ್ರಸಿದ್ಧ ಬೆನ್ನು ಉರಿ ಮೂಳೆ ರೋಗ ತಜ್ಞ ಹಾಗೂ ಲೇಖಕ ಡಾ.ಎನ್.ಎಸ್ ಮೋಹನ್‌ರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಘಟಂ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಗಾನಗಂಧರ್ವ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಲಾವೇದಿಕೆ ಗೌರವ ಅಧ್ಯಕ್ಷ ಸುರೇಶ್ ಗೌಡ, ಹರದನಹಳ್ಳಿ ನಟರಾಜು ಇತರರು ಹಾಜರಿದ್ದರು. ರಾಜ್ಯಮಟ್ಟದ ಸಿಜಿಕೆ ನಾಟಕೋತ್ಸವ ಅಂಗವಾಗಿ ಮೊದಲ ದಿನದ ನಾಟಕ ವನ್ನು ಬಳ್ಳಾರಿ ಜಿಲ್ಲೆಯ ಧಾತ್ರಿ ರಂಗ ಸಂಸ್ಥೆ ಅಭಿನಯಿಸಿದ ಶ್ರೀ ಕೃಷ್ಣ ಸಂಧಾನ ಎಂಬ ನಗೆ ನಾಟಕ ಜನ-ಮನ ಸೂರೆಗೊಂಡಿತು. ಜನರು ನಕ್ಕುನಲಿದಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ