ಕನ್ನಡಪ್ರಭ ವಾರ್ತೆ ಮಣಿಪಾಲ
ಅವರು ಇಲ್ಲಿನ ಸರಳೇಬೆಟ್ಟುವಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಡೆದ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾದ ಕಾಸರಗೋಡು ಚಿನ್ನ ನಿರ್ದೇಶನದ ರಂಗಸಂಸ್ಕೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ರಂಗಸಂಸ್ಕೃತಿ ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನ ಅವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ರಂಗಸಂಸ್ಕೃತಿ ಶಿಬಿರವನ್ನು ಏರ್ಪಡಿಸಿ ರಂಗಭೂಮಿಯ ಬಗ್ಗೆ ಒಲವನ್ನು ಮೂಡಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಬಲ, ಹಾರ್ಮೋನಿಯಂ, ಶಾಸ್ತ್ರೀಯ ಸಂಗೀತ, ಡ್ರಾಯಿಂಗ್, ತರಗತಿಗಳನ್ನು ಸುಮಾರು ಎರಡು ವರ್ಷಗಳಿಂದ ಉಚಿತವಾಗಿ ಏರ್ಪಡಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇದೀಗ ಈ ಸಾಲಿಗೆ ರಂಗಸಂಸ್ಕೃತಿ ಕೂಡ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಪರಿಸರದ ಶಾಲಾ ಕಾಲೇಜುಗಳಲ್ಲಿ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯ ಮಾಡಲಿದೆ ಎಂದು ಹೇಳಿದರು.
ಈ ರಂಗಸಂಸ್ಕೃತಿ ಕಾರ್ಯಾಗಾರದಲ್ಲಿ ಮೂಕಾಭಿನಯ, ಧ್ವನಿ, ಆಶುರಚನೆ, ನಡೆ, ಪ್ರಸಾದನ ಇತ್ಯಾದಿ ಕಲೆಗಳ ಅಭ್ಯಾಸವನ್ನು ನಡೆಸಿಕೊಡಲಾಯಿತು.