ರಂಗಭೂಮಿ ಸಮಾಜ ತಿದ್ದುವ ಕಲಾಪ್ರಕಾರ: ಜೆ.ಚಂದ್ರಶೇಖರ್

KannadaprabhaNewsNetwork |  
Published : Mar 30, 2026, 01:00 AM IST
ಶಿರ್ಷಿಕೆ-28ಕೆ.ಎಂ.ಎಲ್‌.ಆರ್.1-ಮಾಲೂರಿನಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಚಾಲನೆ ನೀಡಿದರು. | Kannada Prabha

ಸಾರಾಂಶ

ರಂಗ ಕಲೆಯ ಉದ್ದೇಶ ಕೇವಲ ಮನರಂಜನೆ ಅಲ್ಲ. ಅದೊಂದು ಸಮಾಜವನ್ನು ತಿದ್ದುವ ಕಲಾಪ್ರಕಾರ. 1961ರಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಾರಂಭ ಆಗಿದ್ದರೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಕೆ ಹಾಗೂ ನಾಟಕ ಎಂಬ ಪ್ರಕಾರಗಳ ಮೂಲಕ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು .

ಮಾಲೂರು: ವಿಶ್ವ ರಂಗಭೂಮಿ ಪರಂಪರೆಗೆ ಅಕ್ಷರ ಬಾರದ ಮೌಖಿಕ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಕವಿ ಡಾ.ನಾ.ಮುನಿರಾಜು ಹೇಳಿದರು. ಅವರು ಇಲ್ಲಿನ ಚೈತನ್ಯ ಕಲಾನಿಕೇತನ ಸಂಸ್ಥೆಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಭರತನಾಟ್ಯ ಶಾಸ್ತ್ರದಿಂದ ಹಿಡಿದು ಪ್ರಾಚೀನ ಮಹಾಕಾವ್ಯಗಳಲ್ಲಿ ರಂಗಭೂಮಿಯ ಕುರಿತು ಉಲ್ಲೇಖಗಳಿವೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಚೈತನ್ಯ ಕಲಾನಿಕೇತನ ಅಧ್ಯಕ್ಷ ಜಯಮಂಗಲ ಚಂದ್ರಶೇಖರ್‌, ರಂಗ ಕಲೆಯ ಉದ್ದೇಶ ಕೇವಲ ಮನರಂಜನೆ ಅಲ್ಲ. ಅದೊಂದು ಸಮಾಜವನ್ನು ತಿದ್ದುವ ಕಲಾಪ್ರಕಾರ. 1961ರಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಾರಂಭ ಆಗಿದ್ದರೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಕೆ ಹಾಗೂ ನಾಟಕ ಎಂಬ ಪ್ರಕಾರಗಳ ಮೂಲಕ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು ಎಂದರು. ಕ.ರಾ.ಅ.ಸಾ.ವೇದಿಕೆ ರಾಜ್ಯಾಧ್ಯಕ್ಷ ಕೆ.ಮುನಿಕೃಷ್ಣಪ್ಪ ಮಾತನಾಡಿದರು. ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ನಾರಿಗಾನಹಳ್ಳಿ ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎಂ.ನಂಜುಂಡಪ್ಪ,ನಿವೃತ್ತ ಉಪನ್ಯಾಸಕ ಎ.ಜಿ.ಕೃಷ್ಣಯ್ಯ, ಬಹುದ್ದೂರ್‌ ಸಾಬ್‌ ,ಪಿ.ಎಂ.ಕೃಷ್ಣಪ್ಪ, ಎಂ.ಪಿ.ರಾಜು, ರಾಧಾ ರುಕ್ಮಣಿ, ಯೋಗಗುರು ವೆಂಕಟೇಶ್‌ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ನಡೆದ ರಂಗಗೀತೆಗಳ ಗಾಯನಗೋಷ್ಠಿಯಲ್ಲಿ ಶಿಕ್ಷಕರಾದ ರಾಜಶೇಖರ್‌,ಮಂಜುನಾಥ್‌,ಶ್ರೀನಿವಾಸ್‌ ಚಿಕ್ಕಮಲ್ಲೆ,ನಾರಾಯಣಸ್ವಾಮಿ ಚಾಕನಹಳ್ಳಿ, ಅಬ್ಬೇನಹಳ್ಳಿ ಶ್ರೀನಿವಾಸ್‌, ಮಹೇಶ್‌ ತಮ್ಮ ಗಾಯನ ಪ್ರತಿಭೆ ಅನಾವರಣಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಣಗಿ ಬಾಳಪ್ಪ, ಸಕ್ಕರಿ ಬಾಳಾಚಾರ್ಯ ರಂಗ ಸೇವೆ ಸ್ಮರಣೀಯ: ಡಾ.ವೀರಣ್ಣ ರಾಜೂರ
ಕಲೆಯಿಂದ ಮನುಷ್ಯನಲ್ಲಿ ಉತ್ಸಾಹ ಹೆಚ್ಚಳ