ರಂಗಭೂಮಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಲೆ: ಮಾಲತೇಶ ಬಡಿಗೇರ

KannadaprabhaNewsNetwork |  
Published : Oct 13, 2025, 02:01 AM IST
10ಕೆಆರ್ ಎಂಎನ್ 18.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯಲ್ಲಿರುವ ತಾನಿನಾ ರಂಗದಂಗಳದಲ್ಲಿ ನಡೆದ ತಿಂಗಳಾ ಕಲಾ ಬೆಳಕು ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕ ಮಾಲತೇಶ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಂಗಕಲೆ ಎಲ್ಲಾ ಪ್ರಕಾರಗಳ ಕಲೆಗಳ ತಾಯಿ ಬೇರಾಗಿದೆ. ರಂಗಭೂಮಿ ಕಲಾವಿದರು ಎಲ್ಲಾ ಪ್ರಕಾರಗಳ ನಟನೆಗಳಲ್ಲಿಯೂ ನೈಪುಣ್ಯತೆ ಪಡೆದ ಕಲಾವಿದರಾಗಿ ಕಲೆ ಮತ್ತು ಸಾಹಿತ್ಯಕ್ಕೆ ಜೀವಕಳೆ ತಂದುಕೊಟ್ಟಿದ್ದಾರೆ. ಚಿತ್ರಕಲಾ ಶಿಕ್ಷಕನಾಗಬೇಕೆಂಬುದು ನನ್ನ ತಂದೆತಾಯಿ ಆಸೆಯಾಗಿತ್ತು.

ಕನ್ನಡಪ್ರಭ ವಾರ್ತೆ ರಾಮನಗರ

ರಂಗಭೂಮಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಲೆಯಾಗಿದೆ. ಇದಕ್ಕೆ ಯಾವುದೇ ಜಾತಿ, ಮತ, ಧರ್ಮಗಳ ತಾರತಮ್ಯ ಇಲ್ಲ ಎಂದು ರಂಗಭೂಮಿ ನಿರ್ದೇಶಕ ಮಾಲತೇಶ ಬಡಿಗೇರ ಹೇಳಿದರು.

ತಾಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯಲ್ಲಿರುವ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯತೆಯನ್ನು ಸಾರುವ ರಂಗಭೂಮಿಯ ಒಡನಾಟ ಆತ್ಮಾವಲೋಕಕ್ಕೆ ದಾರಿಯಾಗಿದೆ. ಸಮಾಜವನ್ನು ಬೆಸೆಯುವ ಜತೆಗೆ ಮಾನವೀಯ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಮಾರ್ಗವನ್ನು ತೋರಿಸುತ್ತದೆ ಎಂದರು.

ರಂಗಕಲೆ ಎಲ್ಲಾ ಪ್ರಕಾರಗಳ ಕಲೆಗಳ ತಾಯಿ ಬೇರಾಗಿದೆ. ರಂಗಭೂಮಿ ಕಲಾವಿದರು ಎಲ್ಲಾ ಪ್ರಕಾರಗಳ ನಟನೆಗಳಲ್ಲಿಯೂ ನೈಪುಣ್ಯತೆ ಪಡೆದ ಕಲಾವಿದರಾಗಿ ಕಲೆ ಮತ್ತು ಸಾಹಿತ್ಯಕ್ಕೆ ಜೀವಕಳೆ ತಂದುಕೊಟ್ಟಿದ್ದಾರೆ. ಚಿತ್ರಕಲಾ ಶಿಕ್ಷಕನಾಗಬೇಕೆಂಬುದು ನನ್ನ ತಂದೆತಾಯಿ ಆಸೆಯಾಗಿತ್ತು. ಆದರೆ ನಾನು ನಾಟಕ ಸಿನಿಮಾಗಳಿಂದ ಪ್ರಭಾವಿತನಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ಕಳೆದ 30 ವರ್ಷಗಳಿಂದ ಸಾವಿರಾರು ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಮಹಿಳೆಯರಿಗೆ ವೈವಿದ್ಯಮಯ ನಾಟಕಗಳನ್ನು ಕಲಿಸಿದ್ದೇನೆ ಎಂದು ಹೇಳಿದರು.

ಶಾಂತಾಲ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ, ಹಿರಿಯ ರಂಗಭೂಮಿ ನಿರ್ದೇಶಕರಾದ ಮಾಲತೇಶ ಬಿಡಿಗೇರ ಅವರು ರಂಗಭೂಮಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ ಎಂದು ಹೇಳಿದರು.

ತಿಂಗಳ ಕಲಾ ಬೆಳಕು ಕಾರ್ಯಕ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆಗೈದಿರುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಹೊಸ ಪ್ರತಿಭೆಗಳಿಗೆ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವೇದ , ಡಾ.ಸಿ. ರಾಜಶೇಖರ , ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಪ್ರೊ. ನಾರಾಯಣ ಘಟ್ಟ ರಂಗಭೂಮಿ ನಟಿ ಛಾಯಾ ಭಾರ್ಗವಿ, ಐಶ್ವರ್ಯ ಕಲಾನಿಕೇತನ ಅಧ್ಯಕ್ಷ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು