ಮರಿಯಮ್ಮನಹಳ್ಳಿ: ಮೊಬೈಲ್ ಜಗತ್ತನ್ನು ಮೀರಿಸುವಂತಹ ಕಲಾ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕ ಡಾ. ಮಲ್ಲಯ್ಯ ಹೇಳಿದರು.
ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ, ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೋರಿಸಲಾಗಿದೆ. ಕಾವೇಶು ನಾಟಕಂ ರಮ್ಯಂ ಎನ್ನುವಂತೆ ರಂಗಭೂಮಿ ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ. ಬಿ. ಅಂಬಣ್ಣ ಕಾರ್ಯಕ್ರಮ ಉದ್ಘಾಟಿಸಿದರು.ಮರಿಯಮ್ಮನಳ್ಳಿಯ ಉದ್ದಮಿ ಎಂ. ಕೀರ್ತಿರಾಜ್ ಜೈನ್, ಹೊಸಪೇಟೆಯ ನಿವೃತ್ತ ಶಿಕ್ಷಕ ಕೆ. ಕರಿಬಸಪ್ಪ ಭಾಗವಹಿಸಿದ್ದರು. ಲಲಿತಕಲಾ ರಂಗದ ಸಂಸ್ಥಾಪಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗತಜ್ಞ ಮ.ಬ. ಸೋಮಣ್ಣ ಅಧ್ಯಕ್ಷತೆವಹಿಸಿದ್ದರು.2022-23ನೇ ಸಾಲಿನ ಪದ್ಮರಾಜ್ ಜೈನ್, ನೇಮಿರಾಜ್ ಜೈನ್ ಸ್ಮರಣಾರ್ಥ ನಗದು ಪುರಸ್ಕಾರದೊಂದಿಗೆ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು. ರಾತ್ರಿ 9 ಗಂಟೆಗೆ ಮ.ಬ. ಸೋಮಣ್ಣ ಅವರು ರಚಿಸಿರುವ ಬರ್ಗಲ್ಲು ನಾಟಕವನ್ನು ಮ.ಬ. ಸೋಮಣ್ಣ ನಿರ್ದೇಶನ ಹಾಗೂ ಹ್ಯಾಟಿ ಮಂಜುನಾಥ ಸಹ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
ಎಚ್. ರಸೂಲ್ ಸಾಹೇಬ್ ಬೆಳಕು, ಕೆ. ಮಲ್ಲನಗೌಡ ಧ್ವನಿ, ಕಟ್ಟೆ ಉಮೇಶ್, ಮಾಳ್ಗಿ ಮಂಜುನಾಥ ರಂಗಸಜ್ಜಿಕೆ, ಬಿ.ಎಂ.ಎಸ್. ಮೃತ್ಯುಂಜಯ ರಂಗಪರಿಕರ, ಸಿ.ಕೆ. ನಾಗರಾಜ ಪ್ರಚಾರ ಕಾರ್ಯನಿರ್ವಹಿಸಿದರು.
ಮರಿಯಮ್ಮನಹಳ್ಳಿಯ ದುರ್ಗದಾಸ್ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾನಿಧಿ ಪ್ರಶಸ್ತಿಯನ್ನು ಗೊಲ್ಲರಹಳ್ಳಿಯ ಬಯಲಾಟದ ಕಲಾವಿದ ಎ. ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
(18ಎಂಎಂಎಚ್2,3,4)ಮರಿಯಮ್ಮನಹಳ್ಳಿಯ ದುರ್ಗದಾಸ್ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಲಲಿತಕಲಾ ರಂಗದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮ.ಬ. ಸೋಮಣ್ಣ ಅವರು ರಚಿಸಿ, ನಿರ್ದೇಶಿಸಿದ ಬರ್ಗಲ್ಲು ನಾಟಕ ಪ್ರದರ್ಶನಗೊಂಡಿತು.