ಹೊಸಬರ ಸಿನಿಮಾಗೆ ಥಿಯೇಟರ್ ಮಾಫಿಯಾ ಕಾಟ: ಝೈದ್‌

KannadaprabhaNewsNetwork |  
Published : Jan 06, 2026, 02:30 AM IST
 ನರಸಿಂಹರಾಜಪುರ ಕುವೆಂಪು ಕ್ರೀಡಾಂಗಣದಲ್ಲಿ ನಡೆದ ಡಾ.ವಿಷ್ಣು ದಾದ ಕಪ್ ಸೀಸನ್ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ  ಪ್ರಶಾಂತ ಶೆಟ್ಟಿ ಉದ್ಘಾಟಿಸಿದರು | Kannada Prabha

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಮಾಫಿಯಾ ಕಾಟವಿದೆ. ಇಂತಹ ಥಿಯೇಟರ್ ಮಾಫಿಯಾ ವಿರುದ್ಧ ಫಿಲಂ ಛೇಂಬರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್‌ ಸಿನಿಮಾ ನಾಯಕ ನಟ ಝೈದ್ ಖಾನ್ ಒತ್ತಾಯಿಸಿದ್ದಾರೆ.

- ಫೈರಸಿಗಿಂತ ಅಪಾಯಕಾರಿ ಮಾಫಿಯಾ ವಿರುದ್ಧ ಫಿಲಂ ಛೇಂಬರ್‌ ಕ್ರಮ ಜರುಗಿಸಲಿ: ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಮಾಫಿಯಾ ಕಾಟವಿದೆ. ಇಂತಹ ಥಿಯೇಟರ್ ಮಾಫಿಯಾ ವಿರುದ್ಧ ಫಿಲಂ ಛೇಂಬರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್‌ ಸಿನಿಮಾ ನಾಯಕ ನಟ ಝೈದ್ ಖಾನ್ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೈರಸಿ ಮಾಫಿಯಾಗಿಂದಲೂ ಥಿಯೇಟರ್ ಮಾಫಿಯಾ ಕನ್ನಡ ಸಿನಿಮಾಗಳು ಅದರಲ್ಲೂ ಹೊಸಬರ ಸಿನಿಮಾಗಳಿಗೆ ಕಾಟ ನೀಡುತ್ತಿದೆ. ಥಿಯೇಟರ್‌ ಮಾಫಿಯಾದಿಂದ ಏನು ಸಂಕಷ್ಟ ಅನುಭವಿಸಿದ್ದೇನೆ ಅಂತ ನನಗೇ ಗೊತ್ತು. ನನಗೊಂದು ಬ್ಯಾಕ್ ಗ್ರೌಂಡ್‌ ಇತ್ತು, ನೆಟ್‌ವರ್ಕ್ ಇತ್ತು. ನನ್ನ ಮೊದಲ ಚಿತ್ರಕ್ಕೆ ನೂರು ಸ್ಕ್ರೀನ್ ನೀಡಿದ್ದರು. ಅದಾಗಿ 3-4 ದಿನದಲ್ಲೇ ಅದು 50 ಸ್ಕ್ರೀನ್‌ಗೆ ಇಳಿದಿತ್ತು ಎಂದರು.

ಕನ್ನಡ ಸಿನಿಮಾಗಳಿಗೆ ಕನಿಷ್ಠ ಇಂತಿಷ್ಟು ಸ್ಕ್ರೀನ್ ಅಂತಾ ಕಡ್ಡಾಯವಾಗಿ ಕೊಡಬೇಕು. ಫಿಲಂ ಛೇಂಬರ್ ನೋಟಿಸ್ ನೀಡಬೇಕು. ಇಷ್ಟೊಂದು ದುಡ್ಡು, ಪವರ್ ಇಟ್ಟುಕೊಂಡಿರುವ ನನಗೇ ಯಾಮಾರಿಸಿದ್ದಾರೆಂದರೆ ಏನೂ ಬ್ಯಾಕ್‌ ಗ್ರೌಂಡ್ ಇಲ್ಲದ, ಸಿನಿಮಾ, ಚಿತ್ರರಂಗವನ್ನೇ ನಂಬಿ ಬರುವ ಹೊಸಬರ ಕಥೆ ಏನಾಗಬೇಡ ಎಂದು ಝೈದ್‌ ಪ್ರಶ್ನಿಸಿದರು.

ಟೆಕ್ನಾಲಜಿ ನೆಕ್ಸ್ಟ್‌ ಲೆವೆಲ್‌ಗೆ ಬಂದಿದೆ. ಇದರಿಂದಾಗಿ ಪೈರಸಿ ತಡೆಯುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫಿಲಂ ಛೇಂಬರ್ ಫೈರಸಿ ತಡೆಯಲು ಏನೆಲ್ಲಾ ಹೊಸ ತಾಂತ್ರಿಕ ವಿಧಾನ ಏನಿವೆಯೋ ಅವುಗಳನ್ನೆಲ್ಲಾ ಮಾಡಬೇಕು. ಅದೇ ರೀತಿ ಥಿಯೇಟರ್ ಮಾಫಿಯಾದ ಕಾಟವನ್ನೂ ತಪ್ಪಿಸಬೇಕು ಎಂದು ಮನವಿ ಮಾಡಿದರು.

- - -

(ಬಾಕ್ಸ್‌)

* 23ರಂದು ರಾಜ್ಯಾದ್ಯಂತ ಕಲ್ಟ್‌ ತೆರೆಗೆ: ಝೈದ್ ದಾವಣಗೆರೆ: ಉತ್ತಮ ಮನರಂಜನೆ, ಅದ್ಭುತ ಸಂದೇಶ ಹೊಂದಿರುವ ಕಲ್ಟ್ ಸಿನಿಮಾ ಜ.23ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ನಟ ಝೈದ್ ಖಾನ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಅಂಶಗಳನ್ನೂ ಕಲ್ಟ್ ಸಿನಿಮಾ ಹೊಂದಿದೆ. ಪ್ರತಿಯೊಬ್ಬ ಪ್ರೇಕ್ಷಕರೂ ಚಿತ್ರ ಮಂದಿರದಲ್ಲೇ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು. ವಿಜಯ ನಗರದಿಂದ ಸಿನಿಮಾದ ಪ್ರಚಾರ ಆರಂಭಿಸಿದ್ದು, ರಾಜ್ಯಾದ್ಯಂತ ಕಲ್ಟ್ ಸಿನಿಮಾ ಪ್ರಚಾರ ಕೈಗೊಂಡಿದ್ದೇವೆ ಎಂದರು.

ಚಿತ್ರದ ನಿರ್ದೇಶಕ ಟಿ.ಎಂ. ಅನಿಲಕುಮಾರ ಮಾತನಾಡಿ, ಕಲ್ಟ್ ಸಿನಿಮಾದ ಶೂಟಿಂಗ್ ಹೆಚ್ಚಾಗಿ ಹೊಸಪೇಟೆ ಭಾಗದಲ್ಲೇ ಆಗಿದೆ. ಕಲ್ಟ್ ಎನ್ನುವುದು ಸಂಸ್ಕೃತಿ, ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಾಯಕ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಕಾರಣ ಕಲ್ಟ್ ಶೀರ್ಷಿಕೆ ಇಡಲಾಗಿದೆ. ನಾಯಕಿಯರಾಗಿ ಮಲೈಕಾ ವಸುಪಾಲ್, ರಚಿತಾ ರಾಮ್‌ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಚಿತ್ರದ ನಾಯಕಿ, ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ಮಾತನಾಡಿ, ನನ್ನೂರು ದಾವಣಗೆರೆಯಲ್ಲೇ ಕಲ್ಟ್ ಸಿನಿಮಾದ ಪ್ರಮೋಷನ್ ನಡೆಸುತ್ತಿರುವುದು ಖುಷಿಯ ವಿಚಾರವಾಗಿದೆ. ಕಲ್ಟ್ ಸಿನಿಮಾ ಎಲ್ಲರಿಗೂ ಇಷ್ಟವಾಗುವ ನಿರೀಕ್ಷೆ ಇದೆ. ಕಲ್ಟ್ ಎಲ್ಲರ ಮನ ಗೆದ್ದು, ಯಶಸ್ವಿ ಆಗುತ್ತದೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.

ಕೆಜಿಪಿ ಜ್ಯುವೆಲರ್ಸ್, ಕೆಜಿಪಿ ಸಮೂಹ ಸಂಸ್ಥೆಗಳ ಮಾಲೀಕ, ಕೆಜೆಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್, ಸಂದೇಶ್ ರಾಯ್ಕರ್, ಸಂಕೇತ್ ಶೇಟ್‌, ಪೃಥ್ವಿ, ರಾಘವೇಂದ್ರ, ರಾಜೇಶ, ರಿಜ್ವಾನ್ ಇತರರು ಇದ್ದರು.

- - -

(ಫೋಟೋ):

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ