ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ರಂಗಸೌರಭ ವತಿಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ಅಂತರ್ ಕಾಲೇಜು ರಂಗ ಸ್ಪರ್ಧೆ ‘ಸೌರಭ - 2026’ ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ವಿ.ಕಾರಂತರ ಕಾಲದಿಂದಲೂ ಎಲ್ಲ ಕಾಲೇಜಿನಲ್ಲಿ ನಾಟಕ ವಿಭಾಗ ತೆರೆಯಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಇನ್ನಾದರೂ ಇದು ಸಾಕಾರಗೊಳ್ಳಬೇಕು. ಕ್ರೀಡೆಯಂತೆಯೆ ರಂಗಭೂಮಿ ಪಾಠ ಇರಬೇಕು. ಈ ಬಗ್ಗೆ ಶಿಕ್ಷಣ ಸಚಿವರನ್ನು ಒತ್ತಾಯಿಸಬೇಕಿದೆ. ಜತೆಗೆ ನಾಟಕ ವಿಮರ್ಷೆ ಮಾಡುವ ಲೇಖಕರಿಗೆ ಪತ್ರಿಕೆಗಳು ಪ್ರಾಶಸ್ತ್ಯ ನೀಡಿ ಬೆಳೆಸಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ರಂಗಭೂಮಿಯಿಂದ ದೂರವಾಗಿದ್ದಾರೆ. ಮೊಬೈಲಿನಲ್ಲಿ ಮುಳುಗಿದರೆ ಕಲ್ಪನಾ ಶಕ್ತಿ ಬೆಳೆಯುವುದಿಲ್ಲ. ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಯುವ ಸಮುದಾಯ ರಂಗಭೂಮಿಗೆ ಬಂದರೆ ಪರಸ್ಪರ ಆತ್ಮೀಯತೆ, ಒಬ್ಬರನ್ನೊಬ್ಬರು ಪ್ರೀತಿಸುವ ಗುಣ, ಶಾಂತಸ್ವಭಾವ ಬೆಳೆಯುತ್ತದೆ. ಅನಗತ್ಯ ಉದ್ವೇಗ, ಕೋಪ ಕಡಿಮೆಯಾಗುತ್ತದೆ. ವ್ಯಕ್ತಿತ್ವ ಬೆಳೆಯುತ್ತದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಕನ್ನಡ ರಂಗಭೂಮಿಗೆ ಇಂದು ಅಗತ್ಯವಾದುದು ಪ್ರಚಾರ. ಬುಕ್ ಮೈ ಶೋ ಅಂತಹ ಪ್ಲಾಟ್ಫಾರ್ಮ್ ನಲ್ಲಿ 60-80 ಟಿಕೆಟ್ ಮಾರಾಟವಾದರೆ ದೊಡ್ಡದು ಎಂದು ಬೀಗುವ ಪರಿಸ್ಥಿತಿಯಲ್ಲಿದ್ದೇವೆ. ಹೀಗಾಗಿ ಕಾಲೇಜು ರಂಗಭೂಮಿಯ ಜವಾಬ್ದಾರಿ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದ್ದು, ಮಾದಕ ವ್ಯಸನ, ಧರ್ಮ ಸಂಘರ್ಷ, ದೂರ್ತ ರಾಜಕಾರಣದ ಬಗ್ಗೆ ಯುವಕರನ್ನು ಜಾಗೃತಗೊಳಿಸಬೇಕಿದೆ ಎಂದರು.
‘ಕನ್ನಡಪ್ರಭ’ ಪ್ರಶಸ್ತಿ
ನಟನೆ ಚಿಕ್ಕವರಿಂದ ದೊಡ್ಡವರವರೆಗೆ ಸಹಜವಾಗಿ ಬರುವ ಪ್ರಕ್ರಿಯೆ. ಇದನ್ನು ಸೃಜನಶೀಲವಾಗಿ ಬೆಳೆಸಿಕೊಳ್ಳಲು ರಂಗಸೌರಭ ರೀತಿಯ ವೇದಿಕೆ ಬೇಕಾಗುತ್ತದೆ. ರಂಗಸೌರಭ ಅತ್ಯುತ್ತಮವಾಗಿ ಆರನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದಿಂದ ವಿಚಾರ. ‘ಕನ್ನಡಪ್ರಭ’ದಲ್ಲಿ ಹಿಂದೆ ಕಾಲೇಜು ರಂಗ ಎಂಬ ವಿಶೇಷ ಪುಟವಿತ್ತು. ಕಾಲೇಜು ವಿದ್ಯಾರ್ಥಿಗಳ ಸೃಜನಾತ್ಮಕ ಕಾರ್ಯಗಳಿಗೆ ವೇದಿಕೆಯಾಗಿತ್ತು. ಅದರಿಂದ ಸಾಕಷ್ಟು ಲೇಖಕರು ರೂಪುಗೊಂಡಿದ್ದರು. ಜತೆಗೆ ಪುರವಣಿಯಲ್ಲಿ ರಂಗ ಚಟುವಟಿಕೆ, ನಾಟಕ ವಿಮರ್ಷೆ ಪ್ರಕಟ ಗಮನಹರಿಸಲಿದ್ದೇವೆ ಎಂದರು.