ಜಮೀನಿನಲ್ಲಿ ಮೋಟರ್, ಕೇಬಲ್, ಪೈಪ್ ಕಳ್ಳತನ

KannadaprabhaNewsNetwork |  
Published : Jul 11, 2026, 01:00 AM IST
ಕುಸಲಾಪುರ ಗ್ರಾಮದ ರೈತರ ಜಮೀನೊಂದರಲ್ಲಿ ಬೋರ್‌ವೆಲ್ ನೀರೆತ್ತಲು ಅಳವಡಿಸಿದ ಕೇಬಲ್ ಕತ್ತರಿಸಿ ಕಳ್ಳತನ ಮಾಡಿರುವುದು. | Kannada Prabha

ಸಾರಾಂಶ

ಮೋಟರ್, ಕೇಬಲ್, ಪೈಪ್ ಕಳ್ಳತನ ಘಟನೆಗಳಿಂದ ರೈತ ವಲಯದಲ್ಲಿ ಭಯ ಹುಟ್ಟಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಶಿರಹಟ್ಟಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಇದೀಗ ರೈತರ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಮೋಟರ್‌, ವಿದ್ಯುತ್ ಕೇಬಲ್‌ ಹಾಗೂ ನೀರಾವರಿ ಪೈಪ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಕುಸಲಾಪುರ ಗ್ರಾಮದ ರೈತರಾದ ಪ್ರವೀಣ ಜೈನ್, ಷಣ್ಮುಖಪ್ಪ ಕಮ್ಮಾರ, ಹಾಲಪ್ಪ ಸುಗ್ನಳ್ಳಿ, ನಿಂಗಪ್ಪ ಬಂಡಾರಿ ಸೇರಿದಂತೆ ಕಡಕೋಳ, ಮಾಚೇನಹಳ್ಳಿ ಗ್ರಾಮಗಳ ಅನೇಕ ರೈತರ ಜಮೀನುಗಳಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿವೆ. ಕಳ್ಳತನ ಮಾಡುವವರಿಗೆ ಯಾರ ಭಯವೂ ಇಲ್ಲದಾಗಿದೆ. ಕುರಿಗಾಹಿಗಳ ಕುರಿ ಕಳ್ಳತನ ಕೂಡ ನಡೆಯುತ್ತಿದೆ.

ಈ ಘಟನೆಗಳಿಂದ ರೈತ ವಲಯದಲ್ಲಿ ಭಯ ಹುಟ್ಟಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಕೃಷಿಸಾಲ ಮನ್ನಾ ಮಾಡಲು ಆಗ್ರಹ

ನರಗುಂದ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಆದ್ದರಿಂದ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಪ್ರಾರಂಭದಲ್ಲಿ ಸ್ವಲ್ಪ ಮಳೆ ಆಗಿದ್ದರಿಂದ ರೈತರು ಬಿತ್ತನೆ ಮಾಡಿದ್ದರು ನಂತರ ದಿನಗಳಲ್ಲಿ ಮಳೆ ಆಗದೇ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಆದ್ದರಿಂದ ಸರ್ಕಾರ ರೈತರ ಕೃಷಿಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಸರ್ಕಾರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿ ಕೃಷಿಗೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.ಈ ವೇಳೆ ಹನುಮಂತ ರಾಮದುರ್ಗ, ಬಿ.ಎಸ್. ಪಾಟೀಲ, ಶೇಖಪ್ಪ ಹಾದಿಮನಿ, ಹನುಮಂತ ಕೋರಿ, ರೆಹಮಾನಸಾಬ ಅಲ್ಲಿಬಾಯಿ, ಪ್ರಕಾಶ ಚೌಡನ್ನವರ, ದುರ್ಗಪ್ಪ ಮಾದರ, ಪ್ರಕಾಶ ತೋಡಕರ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ