ಭಾರತ ದೇಶದಲ್ಲಿ 1. 75 ಲಕ್ಷ ರೋಟರಿ ಕ್ಲಬ್ ಗಳಿವೆ: ಸತೀಶ್ ಮಾದವನ್

KannadaprabhaNewsNetwork |  
Published : Aug 01, 2025, 11:45 PM IST
ನರಸಿಂಹರಾಜಪುರ ರೋಟರಿ ಕ್ಲಬ್‌ ಹಾಗೂ ಇನ್ನರ್ ವೀಲ್ ಕ್ಲಬ್ ನ ಪದವಿ ಸ್ವೀಕಾರ ಸಮಾರಂಭದಲ್ಲಿ ವಿಕಲಚೇತನ  ವಿದ್ಯಾರ್ಥಿಯೊಬ್ಬನಿಗೆ ವೀಲ್ ಚೇರ್ ವಿತರಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಭಾರತ ದೇಶದಲ್ಲಿ 1.75 ಲಕ್ಷ ಸಾವಿರ ರೋಟರಿ ಕ್ಲಬ್ ಗಳಿದ್ದು ಇದರಲ್ಲಿ 6 ಲಕ್ಷ ರೋಟರಿ ಸದಸ್ಯರು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ರೋಟರಿ ಕ್ಲಬ್‌ 3191 ರೋಟರಿ ಜಿಲ್ಲೆಯ ಐಪಿಡಿಜಿ ಸತೀಶ್ ಮಾದವನ್ ತಿಳಿಸಿದರು.

- ರೋಟರಿ ಕ್ಲಬ್ , ಇನ್ನರ್ ವೀಲ್ ಸಂಸ್ಥೆಯ ಪದವಿ ಸ್ವೀಕಾರ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭಾರತ ದೇಶದಲ್ಲಿ 1.75 ಲಕ್ಷ ಸಾವಿರ ರೋಟರಿ ಕ್ಲಬ್ ಗಳಿದ್ದು ಇದರಲ್ಲಿ 6 ಲಕ್ಷ ರೋಟರಿ ಸದಸ್ಯರು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ರೋಟರಿ ಕ್ಲಬ್‌ 3191 ರೋಟರಿ ಜಿಲ್ಲೆಯ ಐಪಿಡಿಜಿ ಸತೀಶ್ ಮಾದವನ್ ತಿಳಿಸಿದರು.ಗುರುವಾರ ರಾತ್ರಿ ಸಹರಾ ಕನ್ವನ್ಸನ್ ಹಾಲ್ ನಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಪದವಿಸ್ವೀಕಾರ ಸಮಾರಂಭದಲ್ಲಿ ರೋಟರಿ ಕ್ಲಬ್ ನೂತನ ಅಧ್ಯಕ್ಷ ಕಣಿವೆ ವಿನಯ ಹಾಗೂ ಕಾರ್ಯದರ್ಶಿ ಎಸ್.ಎನ್.ಲೋಕೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ರೋಟರಿ ಸದಸ್ಯರ ಸಂಖ್ಯೆ ಕುಸಿಯುತ್ತಿದೆ.10 ಸಾವಿರ ರೋಟರಿ ಸದಸ್ಯರು ರೋಟರಿ ಕ್ಲಬ್ ಬಿಟ್ಟಿದ್ದಾರೆ. 150 ರೋಟರಿ ಕ್ಲಬ್ ಮುಚ್ಚಿದೆ. ಸದಸ್ಯತ್ವ ಆಂದೋಲನ ಚುರುಕಾಗಿ ನಡೆಯಬೇಕಾಗಿದೆ. ಪ್ರಸ್ತುತ ವಿಶ್ವದಲ್ಲಿ, ದೇಶದಲ್ಲಿ ಕುಟುಂಬಗಳಲ್ಲೂ ಶಾಂತಿ ಕೊರತೆ ಎದುರಾಗಿದೆ. ಸರ್ಕಾರ ಮಾಡದ ಅನೇಕ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ವಲಯ 6ರ ಅಸಿಸ್ಟಂಟ್ ಗವರ್ನರ್ ಜಿ. ರಾಜಗೋಪಾಲ ಜೋಷಿ ಮಾತನಾಡಿ, ಸಮಾಜಕ್ಕಾಗಿ ಬದುಕುವವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ.1905ರಲ್ಲಿ ರೋಟರಿ ಕ್ಲಬ್ 4 ಜನರಿಂದ ಪ್ರಾರಂಭವಾಗಿ ಈಗ ವಿಶ್ವದ ಎಲ್ಲಾ ಕಡೆ ವಿಸ್ತರಿಸಿದೆ. ಸೇವೆಯೇ ರೋಟರಿ ಗುರಿ. ರೋಟರಿ ಸದಸ್ಯರು ಸೇವೆ ಮೂಲಕ ರೋಟರಿ ಕ್ಲಬ್ ನ ಗೌರವ ಹೆಚ್ಚಿಸಬೇಕು ಎಂದು ಕರೆ ನೀಡಿದರು.ಅತಿಥಿಯಾಗಿದ್ದ ರೋಟರಿ ಕ್ಲಬ್ ನ ಜೋನಲ್ ಲೆಪ್ಟಿನೆಂಟ್ ನಟರಾಜ ಗೋಗಟೆ ಮಾತನಾಡಿದರು. ಇನ್ನರ್ ವೀಲ್ ಕ್ಲಬ್ ನ ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಸೆಲ್ಯೂಷನ್ಸ್ ನ ನಿರ್ದೇಶಕಿ ಡಾ.ಮಧುರಾಣಿ ಗೌಡ ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಭವ್ಯ ಸಂತೋಷ್ ಹಾಗೂ ನೂತನ ಕಾರ್ಯದರ್ಶಿ ನೀತಾ ಪ್ರದೀಪ್ ಅವರಿಗೆ ಅಧಿಕಾರಿ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿನ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು. ವಿಕಲ ಚೇತನ ವಿದ್ಯಾರ್ಥಿಗೆ ವೀಲ್ ಛೇರ್ ವಿತರಿಸಲಾಯಿತು. ಪಿಯುಸಿಯಲ್ಲಿ ರಾಜ್ಯದಲ್ಲಿ 11 ನೇ ರ್‍ಯಾಂಕ್ ಪಡೆದ ಪಾವನಿ ಸಿ. ಜೈನ್, ನೀಟ್ ಪರೀಕ್ಷೆಯಲ್ಲಿ 25 ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿ ಸುಜನ್, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಕೌಶಿಕ್ ಅವರನ್ನು ಅಭಿನಂದಿಸಲಾಯಿತು. ಸಮಾಜ ಸೇವಕಿ ಜುಬೇದಾಗೆ ನಿತ್ಯ ಸೇವಕಿ ಎಂಬ ಬಿರುದು ನೀಡಿ ಗೌರವಿಸಲಾಯಿತು. ನಿವೃತ್ತ ಯೋಧ ಹಾಗೂ ದಕ್ಷ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೀಷ್, 21 ವರ್ಷ ರೋಟರಿ ಕ್ಲಬ್ ಖಜಾಂಚಿಯಾಗಿ ಸೇವೆ ಸಲ್ಲಿಸಿದ ಎಸ್.ಎಸ್.ಶಾಂತಕುಮಾರ್ ರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ನಿರ್ಗಮಿತ ಅಧ್ಯಕ್ಷ ಜಿ.ಆರ್.ದಿವಾಕರ ವಹಿಸಿದ್ದರು. ನೂತನ ಅಧ್ಯಕ್ಷ ಕಣಿವೆ ವಿನಯ, ಕಾರ್ಯದರ್ಶಿ ಎಸ್.ಎನ್.ಲೋಕೇಶ್, ನಿರ್ಗಮಿತ ಕಾರ್ಯದರ್ಶಿ ಮಧು ವೆಂಕಟೇಶ್, ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಭವ್ಯ ಸಂತೋಷ್, ನೂತನ ಕಾರ್ಯದರ್ಶಿ ನೀತಾ ಪ್ರದೀಪ್, ನಿರ್ಗಮಿತ ಅಧ್ಯಕ್ಷೆ ಬಿಂದು ವಿಜಯ್, ನಿರ್ಗಮಿತ ಕಾರ್ಯದರ್ಶಿ ರಾಧಿಕಾ ಅರ್ಜುನ್ಎ ಸ್.ಎಸ್.ಶಾಂತಕುಮಾರ್, ಬಿ.ಟಿ.ವಿಜಯಕುಮಾರ್‌, ರಮ್ಯ , ಎಸ್.ಎನ್.ಲೋಕೇಶ್ ಇದ್ದರು. ,

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ