ಯಾವ ಜಾತಿ ಎಷ್ಟು ಜನ?
70 ಲಕ್ಷ: ಮುಸ್ಲಿಮರು
65 ಲಕ್ಷ: ಲಿಂಗಾಯತರು60 ಲಕ್ಷ: ಒಕ್ಕಲಿಗರು45 ಲಕ್ಷ: ಕುರುಬರು
15 ಲಕ್ಷ: ಈಡಿಗ, ವಿಶ್ವಕರ್ಮ, ಬೆಸ್ತ (ತಲಾ)14 ಲಕ್ಷ: ಬ್ರಾಹ್ಮಣ
ಮುಂದೇನು?
--ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ವರ, ಕೋಲಾಹಲ ಸೃಷ್ಟಿಸಲಿದೆ ಎನ್ನಲಾಗಿರುವ ಜಾತಿವಾರು ಜನಸಂಖ್ಯೆಯ ವಿವರಗಳನ್ನೊಳಗೊಂಡ ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.
ರಾಜ್ಯದಲ್ಲಿರುವ 5.98 ಕೋಟಿ ಜನಸಂಖ್ಯೆಯ ಪೈಕಿ 3.96 ಕೋಟಿ ಜನರು ಅಹಿಂದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1.87 ಕೋಟಿ ಜನ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರಾಗಿದ್ದಾರೆ. ಪರಿಶಿಷ್ಟ ಜಾತಿಯ 1.08 ಕೋಟಿ ಜನ, ಪರಿಶಿಷ್ಟ ಪಂಗಡದ 40.45 ಲಕ್ಷ ಜನ ಇದ್ದರೆ, ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಜನರಿದ್ದಾರೆ.816 ಒಬಿಸಿ ಜಾತಿ:ಒಟ್ಟು 816 ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ ಎಂದು ತಿಳಿದು ಬಂದಿದೆ.
ಆಯೋಗದ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ ಆಗಮಿಸಿದ ಹೆಗ್ಡೆಯವರು, 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳ ದತ್ತಾಂಶ ಇರುವ ಎರಡು ಪೆಟ್ಟಿಗೆಗಳ ವರದಿಯನ್ನು ವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಹಸ್ತಾಂತರಿಸಿದರು. ವರದಿಯನ್ನು ಸರ್ಕಾರ ಮುಂದಿನ ಸಚಿವ ಸಂಪುಟದಲ್ಲೇ ಮಂಡಿಸುವ ಸಾಧ್ಯತೆ ಇದೆ.ಉಪ ಸಮಿತಿಯಿಂದ ಅಧ್ಯಯನ:
ಆದರೆ, ಲೋಕಸಭೆ ಚುನಾವಣೆ ಹತ್ತಿರ ಇದ್ದು, ವರದಿ ಬಹಿರಂಗಪಡಿಸುವುದರಿಂದ ಎದುರಾಗಬಹುದಾದ ಸಂಭವನೀಯ ವಿರೋಧಗಳು, ರಾಜಕೀಯ ಸ್ಥಿತ್ಯಂತರದಿಂದ ಪಾರಾಗಲು ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿಯನ್ನು ರಚಿಸಲಾಗುತ್ತದೆ. ಉಪ ಸಮಿತಿಯು ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಸರ್ಕಾರ ಮಟ್ಟದಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ವರದಿ ಸಲ್ಲಿಸಲಿದೆ. ಮತ್ತೊಂದೆಡೆ ವರದಿಯ ಅಂಶಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡುವ ಉದ್ದೇಶವೂ ಇದೆ. ವರದಿಯನ್ನು ಒಟ್ಟು 13 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ, ಜಾತಿವಾರು ಜನಸಂಖ್ಯೆ, ಜಾತಿ ವರ್ಗಗಳ ಲಕ್ಷಣಗಳು, ವಿಧಾನಸಭಾವಾರು ಜಾತಿಗಳ ಅಂಕಿ-ಅಂಶಗಳು, ತಾಲೂಕುವಾರು ಜಾತಿಯ ಕುಟುಂಬಗಳು, ಜನಸಂಖ್ಯೆಯ ವರದಿ, ಶಿಕ್ಷಣ ಮಾಹಿತಿ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ದ್ವಿತೀಯ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರ ಅವಧಿಯಲ್ಲಿ ರಾಜ್ಯದಲ್ಲಿ ಮನೆ ಮನೆಗೆ ತೆರಳಿ 54 ಪ್ರಶ್ನಾವಳಿಗಳನ್ನು ಕೇಳಿ ಉತ್ತರ ಪಡೆಯಲಾಗಿತ್ತು ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.