ಕನ್ನಡಪ್ರಭ ವಾರ್ತೆ ಕಾರವಾರ
ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ೧೨ ಪುರುಷರು ಮತ್ತು ೨೨ ಮಹಿಳೆಯರು, ಕಾರವಾರದಲ್ಲಿ ೧೬ ಪುರುಷರು, ೩೬ ಮಹಿಳೆಯರು, ಕುಮಟಾದಲ್ಲಿ ೯ ಪುರುಷರು, ೨೨ ಮಹಿಳೆಯರು, ಭಟ್ಕಳದಲ್ಲಿ ೧೪ ಪುರುಷರು ಮತ್ತು ೧೪ ಮಹಿಳೆಯರು, ಶಿರಸಿಯಲ್ಲಿ ೧೮ ಪುರುಷರು ಮತ್ತು ೧೭ ಮಹಿಳೆಯರು, ಯಲ್ಲಾಪುರದಲ್ಲಿ ೮ ಪುರುಷರು ಮತ್ತು ೨೫ ಮಹಿಳೆಯರು ಒಟ್ಟು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಿಂದ ೨೧೩ ಶತಾಯುಷಿಗಳು ಇದ್ದಾರೆ.
ಕಳೆದ ೨೦೨೩ರಲ್ಲಿ ನಡೆದ ವಿಧಾನಸಭಾ ಚುನಾಚಣೆಯಲ್ಲಿ ಉತ್ತರ ಕನ್ನಡದ ಆರು ಕ್ಷೇತ್ರದಲ್ಲಿ ೬೦ ಪುರುಷರು, ೧೨೭ ಮಹಿಳೆಯರು ಸೇರಿ ಒಟ್ಟು ೧೮೭ ಜನರು ಶತಾಯುಷಿಗಳಿದ್ದರು. ಈ ಬಾರಿ ಲೋಕಸಭಾ ಚುನಾವಣೆ ವೇಳೆ ಆರು ಕ್ಷೇತ್ರದಲ್ಲಿ ೨೧೩ ಶತಾಯುಷಿಗಳಿದ್ದು, ೨೬ ಜನ ಶತಾಯುಷಿಗಳು ಹೆಚ್ಚಾದಂತಾಗಿದೆ.ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ೩ ಪುರುಷರು ಮತ್ತು ೧೨ ಮಹಿಳೆಯರು, ಕಿತ್ತೂರು ಕ್ಷೇತ್ರದಲ್ಲಿ ೬ ಪುರುಷರು ಮತ್ತು ೨೦ ಮಹಿಳಾ ಶತಾಯುಷಿಗಳು ಸೇರಿ ಒಟ್ಟು ೪೧ ಶತಾಯುಷಿ ಮತದಾರರಿದ್ದಾರೆ. ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೮ ವಿಧಾನಸಭಾ ಕ್ಷೇತ್ರಗಲಿವೆ. ಭಟ್ಕಳದಲ್ಲಿ ಮಹಿಳಾ, ಪುರುಷರು ತಲಾ ೧೪ ಇದ್ದರೆ, ಶಿರಸಿಯಲ್ಲಿ ಪುರುಷರು ೧೮, ಮಹಿಳೆಯು ೧೭ ಜನರಿದ್ದಾರೆ. ಉಳಿದಂತೆ ಆರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಶತಾಯುಷಿಗಳೇ ಅಧಿಕವಾಗಿದ್ದಾರೆ.
೧೬,೩೮,೪೫೦ ಮತದಾರರು