ಕನ್ನಡಪ್ರಭ ವಾರ್ತೆ ಮೈಸೂರು
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್. ಅನಿತಾ ಮಾತನಾಡಿ, ಸಿಂಧು ಬಯಲಿನ ನಾಗರಿಕತೆಯಲ್ಲಿ ಟೆರಾಕೋಟ ಆಭರಣ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆ ಇದೆ. ಇಂದು ಟೆರಾಕೋಟ ಆಭರಣಕ್ಕೆ ಅಪಾರ ಬೇಡಿಕೆ ಇದೆ. ಈ ತರಬೇತಿ ಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದರೆ, ಸ್ವಉದ್ಯೋಗ ನಡೆಸಲು ಬ್ಯಾಂಕ್ ಸಾಲ ಪಡೆಯಲು ಸಾಧ್ಯ. ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾದಾಗ ಸಬಲೆಯಾಗುತ್ತಾಳೆ. ಆ ಅವಕಾಶವನ್ನು ಈ ಕಾರ್ಯಕ್ರಮದ ಮೂಲಕ ಕಾಲೇಜಿನಲ್ಲಿ ಸೃಷ್ಟಿಸಲಾಗುತ್ತಿದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಬಿ.ಎಸ್. ರತ್ನಾ ಮಾತನಾಡಿ, ಅರ್ಥಶಾಸ್ತ್ರದ ಮಹತ್ವ ಉತ್ಪನ್ನದ ಮೌಲ್ಯ ಸೃಷ್ಟಿಸುವುದು. ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇರುವ ಟೆರಾಕೋಟ ಆಭರಣ ತಯಾರಿಸುವ, ಕಲೆಯನ್ನು ಕಲಿಯುವ ಮೂಲಕ ನಮ್ಮ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಬೇಕು ಎಂದರು.ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾತನಾಡಿ, ಪ್ರಕೃತಿಯೊಂದಿಗೆ ನಂಟನ್ನು ಗಟ್ಟಿಗೊಳಿಸಲು ಮರು ಸೃಷ್ಟಿಸಲು ಮಣ್ಣಿನೊಂದಿಗೆ ನಾವು ಬೆರೆಯಬೇಕು. ಎಲ್ಲ ಜೀವರಾಶಿಗಳಿಗೂ ಆಧಾರ ಆಶ್ರಯ ನೀಡುವುದು ಮಣ್ಣು. ಮಣ್ಣಿನಿಂದ ಸಹಜ ಸರಳ ಆಭರಣಗಳನ್ನು ಸೃಷ್ಟಿಸಿ ಅದರ ಮೂಲಕ ಆದಾಯ ಗಳಿಸುವ ಅವಕಾಶವನ್ನು ಈ ಕಾರ್ಯಕ್ರಮ ಸೃಷ್ಟಿಸುತ್ತಿದೆ ಎಂದರು.
ಕಾಲೇಜಿನ ಉದ್ಯೋಗ ಕೋಶದ ಸಂಚಾಲಕಿ ಸೌರಭ, ಐಐಸಿ ಸಂಚಾಲಕಿ ಪ್ರೊ.ಎನ್. ರತ್ನಾ, ಐಕ್ಯೂಎಸಿ ಸಂಚಾಲಕ ಪ್ರೊ.ಎ.ಆನಂದ್ ಮೊದಲಾದವರು ಇದ್ದರು. ಸ್ವರರಂಜಿನಿ ಪ್ರಾರ್ಥಿಸಿದರು.ಹುಡ್ಕೋ ಬಡಾವಣೆಗೆ ದೀಪಾಲಂಕಾರ ಕಲ್ಪಿಸಲು ಆಗ್ರಹಮೈಸೂರು: ಹನುಮಂತನಗರ, ಹುಡ್ಕೋ ಪ್ರದೇಶಕ್ಕೂ ದೀಪಾಲಂಕಾರ ಮಾಡುವಂತೆ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮಾಜಿ ವಕ್ತಾರ ಮಿರ್ಜಾ ಜಮಷಿದ್ ಬೇಗ್ ಅಶ್ರಫಿ ಒತ್ತಾಯಿಸಿದ್ದಾರೆ. ಬನ್ನಿಮಂಟಪ ಹಿಂಭಾಗದ ಪ್ರದೇಶವಾದ ಹನುಮಂತನಗರ, ಹುಡ್ಕೋ ಪ್ರದೇಶ, ಕೆಎಸ್ಸಾರ್ಟಿಸಿ ಬ್ಲಾಕ್, ಸಿ- ಲೇಔಟ್, ಹಲೀಂ ನಗರ ಮುಖ್ಯರಸ್ತೆ ಮತ್ತು ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ಈ ಭಾಗದಲ್ಲಿ ಸಾವಿರಾರು ಮಂದಿ ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ದೀಪಾಲಂಕಾರ ಕಲ್ಪಿಸಲು ಪ್ರತಿ ವರ್ಷ ಕಡೆಗಣಿಸಲಾಗುತ್ತಿದೆ. ಈ ಬಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್ ಸೇಠ್‌ಮತ್ತು ದೀಪಾಲಂಕಾರ ಉಪ ಸಮಿತಿ ಪದಾಧಿಕಾರಿಗಳ ಕೂಡ ಈ ಬಗ್ಗೆ ಗಮನ ಹರಿಸಬೇಕು. ಈ ಬಾರಿ ಟೆಂಡರ್ ಕರೆಯುವ ಮುನ್ನ ದೀಪಾಲಂಕಾರ ಪ್ರದೇಶದ ಪಟ್ಟಿಯಲ್ಲಿ ಈ ಬಡಾವಣೆಗಳನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.