ಕನ್ನಡಪ್ರಭ ವಾರ್ತೆ ತುಮಕೂರುಜಾಗತಿಕ ಮಟ್ಟದಲ್ಲಿ ಭಾರತದ ವೈದ್ಯರಿಗೆ ಹೆಚ್ಚು ಬೇಡಿಕೆ ಇದೆ. ದೇಶದಲ್ಲಿನ ಅಮೂಲ್ಯವಾದ ಮಾನವ ಸಂಪನ್ಮೂಲ ಸದ್ಬಳಕೆಯಾಗಬೇಕಾದರೆ ವೃತ್ತಿ ನೈಪುಣ್ಯತೆ ಬೇಕು. ಜೊತೆಗೆ ವೈದ್ಯಕಿಯ ಕ್ಷೇತ್ರದ ಪಾವಿತ್ರ್ಯಯತೆಯನ್ನು ಕಾಪಾಡಿಕೊಳ್ಳುವಂತೆ ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ಗೃಹ ಸಚಿವ ಸವ್ಯಸಾಚಿ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.ನಗರದ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಶುಕ್ರವಾರ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಯಲದ ವ್ಯಾಪ್ತಿಯ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ 2025-26 ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ವೈಟ್‌ಕೋಟ್ ಧಾರಣೆ ಮತ್ತು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.20 ಲಕ್ಷ ಜನ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಕಾರ್ಯೇಗಳನ್ನು ಮಾಡುತ್ತಿದ್ದಾರೆ. ಈಗಿನ ತಂತ್ರಜ್ಞಾನಗಳು ಕೂಡ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸವಾಲಾಗಿದೆ. ಪ್ರತಿಯೊಂದು ವಿಷಯದ ಬಗ್ಗೆ ಪ್ರತಿಯೊಬ್ಬರಿಗೂ ಜ್ಞಾನ ಹೊಂದಿರುವುದು ತುಂಬಾ ಮುಖ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ವಿಷಯ ಆಚ್ಚುಕಟ್ಟಾಗಿ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಎಂದು ಡಾ.ಜಿ. ಪರಮೇಶ್ವರ್ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನಾವು ನೀಡಲು ಬದ್ಧರಾಗಿದ್ದೇವೆ. ಸಿದ್ಧಾರ್ಥ ಸಂಸ್ಥೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳೆ ಸಂಸ್ಥೆಯ ರಾಯಭಾರಿಗಳಾಗಿದ್ದಾರೆ. ದೇಶ ಸ್ವತಂತ್ರ ಪಡೆದಾಗ ಶೇ. 3ರಷ್ಟು ಇದ್ದ ಮಾನವ ಸಂಪನ್ಮೂಲವೂ ಪ್ರಸ್ತುತ ದಿನದಲ್ಲಿ ಭಾರಿ ಹೆಚ್ಚಳ ಕಂಡಿದೆ. ಇದರಲ್ಲಿ ಪ್ರಮುಖವಾಗಿ ಭಾರತವು ಹೆಚ್ಚು ಪ್ರಮಾಣದಲ್ಲಿ ವೈದ್ಯರನ್ನು ಪ್ರಪಂಚಕ್ಕೆ ನೀಡುತ್ತಿದೆ ಎಂದು ನುಡಿದರು.ಪದ್ಮಶ್ರೀ ಪ್ರಶಸ್ತಿ ವಿಜೇತ ಪ್ರಸಿದ್ದ ಮನೋಶಾಸ್ತ್ರಜ್ಞ ಡಾ.ಚಂದ್ರಶೇಖರ ಅವರು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ವೈದ್ಯಕೀಯ ಕ್ಷೇತ್ರದಲಿರುವ ಪ್ರತಿಯೊಬ್ಬ ವೈದ್ಯರು ನಿರಂತರ ಅಧ್ಯಯನ ಮತ್ತು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಸಮಾಜಕ್ಕೆ ಮಾದರಿ ವೈದ್ಯರಾಗಲು ಸಾಧ್ಯ ಎಂದರು.ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಡಾ.ಆನಂದ್, ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್‌ಡಾ. ಅಶೋಕ್ ಮೆಹತಾ ಪರಿಕ್ಷಾಂಗ ನಿಯಂತ್ರಕ ಡಾ.ಜಿ. ಗುರುಶಂಕರ್, ಪ್ರಾಂಶುಪಾಲ ಡಾ. ಸಾಣಿಕೊಪ್ಪ, ಡಾ. ಪ್ರವೀಣ್‌ಕುಡುವಾ, ಉಪ ಪ್ರಾಂಶುಪಾಲ ಡಾ,ಪ್ರಭಾಕರ್ ಸೇರಿದಂತೆ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸಾಹೇ ಕುಲಾಧಿಪತಿಗಳು ವೈದ್ಯಕೀಯ ಸಮವಸ್ತ್ರ‘ವೈಟ್‌ಕೋಟ್’ ಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರು ನೂತನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕಕ್ರಮ ಜರುಗಿದವು.