ಮಹಾನವಮಿ ಸಂಭ್ರಮದ ಶುಭಾಶಯ ವಿನಿಮಯ । ದುರ್ಗಮ್ಮ, ಪೂಜಮ್ಮಗೆ ಶಮಿ ಪೂಜೆಕನ್ನಡಪ್ರಭ ವಾರ್ತೆ ತುಮಕೂರು
ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎ.ನರಸಿಂಹಮೂರ್ತಿ ಮಾತನಾಡಿ, ನಾಡಹಬ್ಬ ದಸರಾ, ಮಹಾನವಮಿ ಸಂಭ್ರಮದ ಶುಭಾಶಯಗಳು ಕೋರುವುದು. ಮೊದಲ ಬಾರಿಗೆ ಜಿಲ್ಲಾಡಳಿತ ತುಮಕೂರು ದಸರಾ ಆಚರಣೆ ಮಾಡಿ ಸರ್ವ ಜನಾಂಗದ ಕುಲದೇವರುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿದೆ ಎಂದರು.
ಪ್ರತಿಯೊಂದು ನಾಡಹಬ್ಬಗಳ ಹಿಂದೆ ಒಂದೊಂದು ಇತಿಹಾಸವಿರುತ್ತದೆ, ಅದೇ ರೀತಿ ಮಹಾನವಮಿಗೂ ಒಂದು ಇತಿಹಾಸವಿದೆ. ಸಾಮ್ರಾಟ ಅಶೋಕನು ಕಳಿಂಗ ಯುದ್ದ ಗೆದ್ದ ಹುಮ್ಮಸ್ಸಿನಲ್ಲಿ ವಿಜಯೋತ್ಸವ ಆಚರಿಸುತ್ತ ತಿರುಗಾಡುವ ಸಂದರ್ಭದಲ್ಲಿ ಅನೇಕ ತಾಯಂದಿರು ಮಗನನ್ನು, ಮಹಿಳೆಯರು ಗಂಡನನ್ನು, ಸಹೋದರರನ್ನು ಕಳೆದುಕೊಂಡು ರೋದಿಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆರಾಜ ಸಾಮ್ರಾಟ್ ಅಶೋಕ ಒಬ್ಬ ತಾಯಿಯನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ದುಃಖದ ಕಡಲಲ್ಲಿ ಮುಳುಗಿದ ತಾಯಿ ಇಷ್ಟೊಂದು ಸಾವು ನೋವು ಶೋಕಕ್ಕೆ ಕಾರಣನಾದ ನೀನು ಹೇಗೆ ಸಾಮ್ರಾಟನಾಗಲು ಸಾಧ್ಯ ಎಂದು ಶೋಕ ಮತ್ತು ಅಶೋಕ ಪದದ ಅರ್ಥ ಹೇಳುತ್ತಾಳೆ. ಆಗ ಮನನೊಂದ ಸಾಮ್ರಾಟ್ ಅಶೋಕ ಪಶ್ಚಾತ್ತಾಪ ಪಡುತ್ತಾನೆ ಎಂದರು.
ತುಮಕೂರು ದಸರಾ ಸಮಿತಿ ಸದಸ್ಯರು ಮತ್ತು ಜನಾಂಗದ ಮುಖಂಡರಾದ ವಾಲೆಚಂದ್ರಯ್ಯ, ಸಂಜೀವಯ್ಯ, ದೇವರಾಜ್, ಅನಂತಕುಮಾರ್, ಸೋಮಶೇಖರ್, ನಾಗರಾಜ್, ಕುಮಾರ್, ಮಂಜುನಾಥ್ ಕುಳವಾಡಿ ಮನೆತನದವರು 4 ದೇವಸ್ಥಾನದ ಪೂಜಾರಿಗಳು ಮುಖಂಡರು ಹಾಗೂ ಎನ್.ಆರ್ ಕಾಲೋನಿಯ ನಾಗರೀಕರು ಭಾಗವಹಿಸಿದ್ದರು.