ಗೊಡಚಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಅಗತ್ಯವಿದೆ: ಮಹಾದೇವಪ್ಪ ಯಾದವಾಡ

KannadaprabhaNewsNetwork |  
Published : Dec 22, 2024, 01:32 AM IST
ಲಕ್ಷದೀಪೋತ್ಸವಕ್ಕೆ ಮಾಜಿ ಶಾಸಕ ಮಹಾದೇವಪ್ಪ ಯಾದವಡ ಚಾಲನೆ ನೀಡಿದರು. | Kannada Prabha

ಸಾರಾಂಶ

ಉತ್ತರ ಕನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಗೊಡಚಿ ವೀರಭದ್ರೇಶ್ವರ ಕ್ಷೇತ್ರ ಐತಿಹಾಸಿಕ ಕ್ಷೇತ್ರವಾಗಿದ್ದು, ಭಕ್ತರು ಹಾಗೂ ಧರ್ಮದರ್ಶಿಗಳು ಸೇರಿಕೊಂಡು ಕ್ಷೇತ್ರವನ್ನು ಇನ್ನಷ್ಟು ಅಭವೃದ್ಧಿ ಪಡಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡುವ ಅಗತ್ಯವಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಉತ್ತರ ಕನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಗೊಡಚಿ ವೀರಭದ್ರೇಶ್ವರ ಕ್ಷೇತ್ರ ಐತಿಹಾಸಿಕ ಕ್ಷೇತ್ರವಾಗಿದ್ದು, ಭಕ್ತರು ಹಾಗೂ ಧರ್ಮದರ್ಶಿಗಳು ಸೇರಿಕೊಂಡು ಕ್ಷೇತ್ರವನ್ನು ಇನ್ನಷ್ಟು ಅಭವೃದ್ಧಿ ಪಡಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡುವ ಅಗತ್ಯವಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳದರು.

ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಾರೋಪ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋಡಚಿ ವೀರಭದ್ರಶ್ವರ ಪೌರಾಣಿಕ ಪುರುಷನಾಗಿದ್ದು, ಈ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಾರೆ. ಈಗಾಗಲೇ ವಸತಿ, ಕುಡಿಯುವ ನೀರು ಮತ್ತು ನಿತ್ಯ ಮಹಾಪ್ರಸಾದ ವ್ಯವಸ್ಥೆ ಇದ್ದು, ಮನ್ನಷ್ಟು ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿ ಧರ್ಮಕ್ಷೇತ್ರವನ್ನಾಗಿ ಮಾಡುವ ಅಗತ್ಯವಿದೆ. ಪ್ರತಿವರ್ಷ ನಡೆಯುವ ರಥೋತ್ಸವ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಮಯದಲ್ಲಿ ಸ್ವಚ್ಛತೆ ಸೇರಿದಂತೆ ಜನರ ಅನುಕೂಲಕ್ಕೆ ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಸಿಪಿಐ ಐ. ಆರ್. ಪಟ್ಟಣಶೆಟ್ಟಿ ಮಾತನಾಡಿ, ಧರ್ಮಕ್ಷೇತ್ರವಾಗಿರುವ ಗೊಡಚಿ ಕ್ಷೇತ್ರದಲ್ಲಿ ಜಾತ್ರಾ ಸಮಯದಲ್ಲಿ ಆಗಮಿಸುವ ಲಕ್ಷಾಂತರ ಭಕ್ತರಿಗೆ ಯಾವದೇ ತೊಂದರೆಯಾಗದಂತೆ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಗ್ರಾಮ ಪಂಚಾಯತಿಯವರು ಉತ್ತಮ ವ್ಯವಸ್ಥೆ ಮಾಡುತ್ತಿರುವುದು ಮೆಚ್ಚುವಂತದ್ದು, ಈ ಕ್ಷೇತ್ರ ಭಕ್ತರ ಹಾಗೂ ಸುತ್ತಲಿನ ಗ್ರಾಮಸ್ಥರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮುಪ್ಪಯ್ಯಸ್ವಾಮೀಜಿ ಮಾತನಾಡಿ, ದೀಪದಿಂದ ದೀಪ ಹಚ್ಚುವ ಲಕ್ಷದೀಪೋತ್ಸವ ಕಾರ್ಯಕ್ರಮ ದೀಪ ಕತ್ತಲನ್ನು ಕಳೆಯುವಂತೆ ಭಕ್ತರ ಜೀವನದಲ್ಲಿ ಬರುವ ಕಷ್ಟಗಳನ್ನು ಭದ್ರಕಾಳಿಮಾತಾ ಮತ್ತು ವೀರಭದ್ರ ದೇವರು ದೂರ ಮಾಡಲಿ ಎಂದು ಆಶೀರ್ವಚನ ನೀಡಿದರು.

ದೇವಸ್ಥಾನದ ಧರ್ಮದರ್ಶಿ ಶ್ರಿಮಂತ ಸಂಗ್ರಾಮರಾಜ ಉದಯಸಿಂಹ ಶಿಂದೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರೇಶ ಸ್ವಾಮಿಗಳು, ಧರ್ಮದರ್ಶಿಗಳಾದ ವಸುಂದರಾರಾಜೆ ಶಿಂದೆ, ಮೀನಾಕ್ಷಿ ಸಾವಂತ, ನದಿನಿದೇವಿ ಶಿಂದೆ, ಅಮೃತಾ ಶಿಂದೆ, ಶ್ರೀಮಂತ ಸಂಜಯಸಿಂಹ ಶಿಂದೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡ್ರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು