ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪಟ್ಟಣದ ಸಿಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಚಿಕ್ಕೋಡಿ ಹನುಮಮಾಲಾಧಾರಿಗಳ 9ನೇ ವರ್ಷದ ಹನುಮ ಮಾಲಾ ಅಭಿಯಾನ ಪ್ರಯುಕ್ತ ಬುಧವಾರ ಆಯೋಜಿಸಿದ ಸಂಕೀರ್ತನ ಶೋಭಾಯಾತ್ರೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿ ದೇಶಾಭಿಮಾನ ಉಳಿಸಿ, ಬೆಳೆಸುವ ಕೆಲಸವನ್ನು ಆರ್.ಎಸ್.ಎಸ್ ಮಾಡುತ್ತಿದೆ. ಮಾಲಾಧಿಕಾರಿಗಳು ಶಿಸ್ತಿನಿಂದ ಮಾಲೆಯನ್ನು ಧರಿಸಿಕೊಂಡು ಆಂಜನೆಯನ ದರ್ಶನ ಪಡೆದುಕೊಂಡು ಪಾವನರಾಗಬೇಕು ಎಂದು ತಿಳಿಸಿದರು.ಸಮಾರಂಭದಲ್ಲಿ ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು, ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಆರ್.ಕೆ.ಬಾಗಿ, ಸಂಪರ್ಕ ಪ್ರಮುಖ ವೇಂಕಟೇಶ ದೇಶಪಾಂಡೆ, ವಿಶ್ವಹಿಂದೂ ಪರಿಷತ್ ವಿಭಾಗ ಸಹಮಂತ್ರಿ ವಿಠ್ಠಲಜೀ, ವಿಭಾಗ ಸಹಕಾರ್ಯವಾಹ ಸಂಜಯ ಅಡಕೆ, ಬಾಹುಬಲಿ ನಸಲಾಪೂರೆ, ಮಹೇಶ ಭಾತೆ, ಮಲ್ಲಿಕಾರ್ಜುನ ಕವಟಗಿಮಠ, ಬಸವಪ್ರಸಾದ ಜೊಲ್ಲೆ, ವಿಶ್ವನಾಥ ಕಾಮಗೌಡ, ಸತೀಶ ಅಪ್ಪಾಜಿಗೋಳ, ಸಿದ್ದಪ್ಪ ಡಂಗೇರ, ಸಂಜಯ ಕವಟಗಿಮಠ ಉಪಸ್ಥಿತರಿದ್ದರು.