ಕನ್ನಡಪ್ರಭ ವಾರ್ತೆ ಕೊಡೇಕಲ್
ತಾಯಿಗಿಂತ ಮೀಗಿಲಾದ ದೈವ ಪ್ರಪಂಚದಲ್ಲೇ ಇಲ್ಲ, ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾರುಣ್ಯದ ಪ್ರತಿರೂಪವೇ ತಾಯಿ ಎಂದು ದೇವಾಪೂರದ ಜಡಿ ಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಕೊಡೇಕಲ್ ಗ್ರಾಮದಲ್ಲಿ ಜರುಗಿದ ಮಾಜಿ ಸಚಿವರಾದ ನರಸಿಂಹನಾಯಕ (ರಾಜೂಗೌಡ) ತಾಯಿ ದಿ. ತಿಮ್ಮಮ್ಮ ಶಂಭನಗೌಡರ 4ನೇ ವರ್ಷದ ಪುಣ್ಯಸ್ಮರಣೆ ಹಾಗೂ ತಂದೆಯವರಾದ ದಿ. ಶಂಭನಗೌಡ ಪಾಟೀಲ್‌ರ 2ನೇ ವರ್ಷದ ಪುಣ್ಯಸ್ಮರಣೆ ಕಾರ‍್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಭೂಮಿಗಿಂತಲೂ ತಾಯಿ ಮಿಗಿಲಾದವಳು, ತಾಯಿ ಪ್ರೀತಿಸದ ವ್ಯಕ್ತಿ ದೇವರಿಗೂ ಬೇಡವಾಗುತ್ತಾನೆ ಎಂದು ಹೇಳಿದರು. ಶಾಸಕ ನರಸಿಂಹನಾಯಕರು ತೋರಿಕೆಗಾಗಿ ತಂದೆ-ತಾಯಿ ಮೂರ್ತಿ ನಿರ್ಮಿಸಿಲ್ಲ. ತಾಯಿ ಮಹತ್ವ, ಕರುಣೆ, ಮಮತೆ ತಂದೆ ಆದರ್ಶ ಏನೆಂಬುದನ್ನು ಸ್ವತಃ ಅನುಭವಿಸಿ, ಅದರ ಮಹತ್ವ ತಿಳಿಸಲು ಈ ಶಿಲಾಮೂರ್ತಿಗಳನ್ನು ನಿರ್ಮಿಸಿದ್ದಾರೆ ಎಂದರು.ಹಿರೂರು ಅನ್ನದಾನೇಶ್ವರ ಮಠದ ಶ್ರೀಜಯಸಿದ್ದೇಶ್ವರ ಶಿವಾಚಾರ‍್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಾವು ತಂದೆ-ತಾಯಿ ಗೌರವಿಸಬೇಕು ಎಂದರು. ಮಾಜಿ ಸಚಿವ ನರಸಿಂಹನಾಯಕ ಮಾತನಾಡಿ, ಇಂದು ನಾನು ಮತ್ತು ನನ್ನ ಸಹೋದರ ನನ್ನ ತಂದೆ-ತಾಯಿ ಪ್ರೀತಿ ಕಳೆದುಕೊಂಡಿದ್ದೇವೆ. ಆದರೆ, ಕ್ಷೇತ್ರದ ಎಲ್ಲ ತಂದೆ-ತಾಯಂದಿರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಭಾವುಕರಾಗಿ ಹೇಳಿದರು.
125 ಜನ ತಂದೆ-ತಾಯಂದಿರ ಪಾದಪೂಜೆ:ಇದಕ್ಕೂ ಪೂರ್ವದಲ್ಲಿ ಮಾತೃವಂದನಾ ಕಾರ‍್ಯಕ್ರಮದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ 111 ಜನ ತಂದೆ-ತಾಯಂದಿರಿಗೆ ಅವರ ಮಕ್ಕಳು ಪಾದಪೂಜೆ ನೇರವೇರಿಸಿದ್ದು ವಿಶೇಷವಾಗಿತ್ತು.
ಸ್ಥಳೀಯ ಬಸವ ಪೀಠಾಧಿಪತಿ ವೃಷಬೇಂದ್ರ ಅಪ್ಪನವರ ಸಾನ್ನಿಧ್ಯದಲ್ಲಿ ಜರುಗಿದ ಕಾರ‍್ಯಕ್ರಮದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಲಶೆಟ್ಟಿಹಾಳ ಗ್ರಾಮದ ವಿರಕ್ತಮಠದ ಸಿದ್ದಲಿಂಗ ಶಾಸ್ತ್ರಿ, ಶಂಕರಲಿಂಗ ಮಹಾರಾಜರು, ನೀಲಕಂಠಸ್ವಾಮಿ ವಿರಕ್ತಮಠ, ವೀರಸಂಗಯ್ಯಸ್ವಾಮಿ ಕೊಡೇಕಲ್ ಮಠ, ಶಾಮಸುಂದರ ಜೋಶಿ, ದಾವಲಮಲಿಕ ಮುತ್ಯಾ ಹಾಗೂ ರಾಜಾ ಜಿತೇಂದ್ರ ನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ರಾಜಾ ಕುಶಾಲ ನಾಯಕ ಜಹಾಗೀರದಾರ, ರಾಜಾ ಹನುಮಪ್ಪ ನಾಯಕ ತಾತಾ, ರಘುನಾಥಗೌಡ ಪಾಟೀಲ್, ಡಾ.ಎಸ್ಪಿ ದಯಾನಂದ, ಹನುಮಂತ ನಾಯಕ, ಮಣಿಕಂಠ ನಾಯಕ, ಕಾರ್ತಿಕ ನಾಯಕ, ಶಂಕರ ನಾಯಕ, ಶ್ರೀನಿವಾಸನಾಯಕ, ರಂಗನಾಥದೊರಿ, ಬಸನಗೌಡ ಯಡಿಯಾಪೂರ, ಗದ್ದೆಪ್ಪ ಪೂಜಾರಿ, ಬಸನಗೌಡ ಅಳ್ಳಿಕೋಟಿ, ಸುರೇಶ ಸಜ್ಜನ್, ಎಚ್.ಸಿ. ಪಾಟೀಲ್ ಇತರರಿದ್ದರು. ಬಸವರಾಜ ಭದ್ರಗೊಳ ನಿರೂಪಿಸಿದರು. ಕ್ಷೀರಲಿಂಗಯ್ಯ ಹಿರೇಮಠ ವಂದಿಸಿದರು.