ಕರುಣೆಯಿಲ್ಲದ ಸರ್ಕಾರದಿಂದ ಯಾವುದೇ ನಿರೀಕ್ಷೆಯಿಲ್ಲ

KannadaprabhaNewsNetwork | Published : Sep 25, 2024 12:45 AM

ಸಾರಾಂಶ

ತಳ ಹಂತದಿಂದ ಜೆಡಿಎಸ್‌ ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಳ ಹಂತದಿಂದ ಜೆಡಿಎಸ್‌ ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯನ್ಮುಖರಾಗುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಲೂಕು ಜಾತ್ಯತೀತ ಜನತಾದಳ ಘಟಕದ ವತಿಯಿಂದ ಸೋಮವಾರ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೂತ್‌ ಮಟ್ಟದ ಸಮಿತಿಗಳ ರಚನೆ ಹಾಗೂ ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಜೆಡಿಎಸ್‌ ಸದೃಢವಾಗಿ ಕಟ್ಟಲು ಕಾರ್ಯಕರ್ತರು ಸಜ್ಜಾಗಬೇಕು. ಬೂತ್‌ ಮಟ್ಟದಲ್ಲಿ ಜೆಡಿಎಸ್‌ನ ಹೆಚ್ಚಿನ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆಗಬೇಕು. ಪಾವಗಡ ನಗರ ಸೇರಿದಂತೆ ತಾಲೂಕಿನ ಎಲ್ಲಾ ಹೋಬಳಿಗಳಿಂದ 5 ಘಟಕಗಳನ್ನಾಗಿ ವಿಂಗಡಿಸಿ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸುವ ಪ್ರವಾಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಯಾವುದೇ ಯೋಜನೆಗಳನ್ನು ಕಾರ್ಯಗತ ಮಾಡಿರುವುದಿಲ್ಲ.ರೈತರಿಗೆ ಹಾಗೂ ಜನಸಾಮಾನ್ಯರಿಗೆ ಯೋಜನೆ ರೂಪಿಸುವಲ್ಲಿ ಬರೀ ಸುಳ್ಳು ಅಶ್ವಾಷನೆ ನೀಡುತ್ತಿದೆ. ಇಲ್ಲಿನ ಸ್ಥಳೀಯ ಶಾಸಕರು ದ್ವೇಷ ರಾಜಕಾರಣ ಮಾಡುತ್ತಿದ್ದು ಸರಿ ತಪ್ಪು ಯೋಚಿಸದೇ ಅಧಿಕಾರಿಗಳು ಅದಕ್ಕೆ ಸೊಪ್ಪು ಹಾಕುತ್ತಿದ್ದಾರೆಂದು ಆರೋಪ ಮಾಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ.ಅಂಜನಪ್ಪ ಮಾತನಾಡಿ ರೈತ ಹಾಗೂ ಜನಪರ ಕಲ್ಯಾಣ ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಇತ್ತೀಚೆಗೆ ತಾಲೂಕಿನ ವೈ.ಎನ್‌.ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ದರೊಬ್ಬರು ಸಾವನ್ನಪ್ಪಿದ್ದು 10ಕಿಮೀ ದೂರದ ಸ್ವಗ್ರಾಮಕ್ಕೆ ಶವ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದೇ ಮೃತರ ಮಕ್ಕಳು ಪರಿತಪ್ಪಿಸಿದ್ದಾರೆ. ಇಂತಹ ಕರುಣೆಯಿಲ್ಲದ ಸರ್ಕಾರದಿಂದ ನಾವು ಏನು ನಿರೀಕ್ಷಿಸಲು ಸಾಧ್ಯವಿದೆ ಎಂದು ಗಂಭೀರ ಆರೋಪ ಮಾಡಿದರು.

ಸ್ಥಳೀಯ ಆಡಳಿತ ವ್ಯವಸ್ಥೆಯ ವೈಪಲ್ಯಗಳ ಕುರಿತು ಮಾತನಾಡಿದ ಆರ್‌.ಸಿ.ಅಂಜಿನಪ್ಪ,ಕಳೆದ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತ ಜೆಡಿಎಸ್‌ಗೆ ಲಭಿಸಿದ್ದು ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ ಸದೃಢವಾಗಿದೆ ಎಂದರು. ಸದಸ್ಯತ್ವ ಅಭಿಯಾನದ ಹಿನ್ನಲೆಯಲ್ಲಿ ಪಂಚಾಯಿತಿ ಹಾಗೂ ಹೋಬಳಿವಾರು ಪ್ರವಾಸವನ್ನು ಕೈಗೊಳ್ಳಲಿದ್ದು ಸದಸ್ಯರನ್ನು ಗುರುತಿಸುವ ಕಾರ್ಯವನ್ನು ಹೋಬಳಿ ಮಟ್ಟದ ಕೇಂದ್ರ ಸ್ಥಾನಗಳಲ್ಲಿನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಳಗೊಂಡಂತೆ ಸಮಾವೇಶ ನಡೆಸಲಾಗುವುದಾಗಿ ತಿಳಿಸಿದರು.

ರಾಷ್ಟ್ರೀಯ ಪಾರ್ಲಿಮೆಂಟರಿ ಸದಸ್ಯರಾದ ಎನ್.ತಿಮ್ಮಾ ರೆಡ್ಡಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ , ರಾಜಶೇಖರಪ್ಪ, ಬಲರಾಮರೆಡ್ಡಿ , ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್‌, ಗೋವಿಂದಬಾಬು, ಅಕ್ಕಲಪ್ಪನಾಯ್ಡು, ಚೆನ್ನಮಲ್ಲಯ್ಯ, ಭೀಮನ ಕುಂಟೆ ಸತ್ಯಪ್ಪ, ಕೆಂಚಗಾನಹಳ್ಳಿ ಗೋವಿಂದಪ್ಪ, ಕೋಟಗುಡ್ಡ ಅಂಜಯ್ಯ, ಲಿಂಗದಹಳ್ಳಿ ಸಣ್ಣಾರೆಡ್ಡಿ, ತಿಮ್ಮರಾಜು, ಹೊಸಕೋಟೆ ಸತ್ಯನಾರಾಯಣ್‌, ಯುನಸ್, ಗಂಗಾಧರ ನಾಯ್ಡು,ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ, ಶಕುಂತಲಾ ಬಾಯಿ ಇತರರಿದ್ದರು.

Share this article