ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಂಘದ ಬಟವಾಡೆಗೆ ಕೋಚಿಮುಲ್ ನಿಂದ ಸರಿಯಾದ ಸಮಯಕ್ಕೆ ಹಣ ಬರೆದ ಕಾರಣ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಇತರರಿಂದ ಹಣವನ್ನು ಪಡೆದು ಸದಸ್ಯರಿಗೆ ಹಾಲು ಉತ್ಪಾದಕರಿಗೆ ಬಟವಾಡೆಯನ್ನು ಮಾಡಲಾಗುತ್ತಿದೆ. ಆಡಳಿತ ಮಂಡಳಿಯ ಸದಸ್ಯರ ಅನುಮತಿ ಪಡೆದು ಬಟವಾಡೆ ಮಾಡಲು ಕೆಲವರಿಂದ ಹಣವನ್ನು ಪಡೆದು ಮತ್ತೆ ವಾಪಸ್ಸು ಮಾಡಿದ್ದನ್ನು ಕಂಡು ರೈತ ಸಂಘಟನೆ ಅವರು ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಆದರೆ ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಬದಲಾಗಿ ತುಂಬಾ ಚೆನ್ನಾಗಿ ಸಂಘ ನಡೆದುಕೊಂಡು ಹೋಗುತ್ತಿದೆ ಎಂದರು.
ಸಂಘದ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಸಂಘದಲ್ಲಿ ಎಲ್ಲಾ ಆಡಳಿತ ಮಂಡಳಿಯ ಸದಸ್ಯರ ಅನುಮತಿಯಂತೆ ಸಂಘದ ಎಲ್ಲಾ ವ್ಯವಹಾರವನ್ನು ನಡೆಸಲಾಗುತ್ತಿದೆ. ಸಂಘದ ಸಭೆಯಲ್ಲಿ ಈ ಹಿಂದೆ ಚರ್ಚಿಸಿ ತೀರ್ಮಾನ ಕೈಗೊಂಡ ಆಧಾರದ ಮೇಲೆ ಸಂಘದ ಬಟವಾಡಕ್ಕೆ ಕೆಲವರಿಂದ ಹಣವನ್ನು ಪಡೆದು ಮರಳಿ ವಾಪಸ್ಸು ಪಡೆಯಲಾಗಿದೆ. ಆದರೆ ಇದನ್ನು ನೋಡಿ ರೈತ ಸಂಘದ ಮುಖಂಡ ರಾಮೇಗೌಡ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿ ಸುಮಾರು ₹50,000 ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.ಈ ವೇಳೆ ಸಂಘದ ನಿರ್ದೇಶಕರಾದ ನಾಗರಾಜಯ್ಯ, ರಂಜಿತ್ ಕುಮಾರ್ ಸುರೇಶ್ ಇದ್ದರು.