ನೌಕರರ ಪಿಎಫ್‌ ಪಾವತಿಸಲೂ ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳಲ್ಲಿ ಹಣವಿಲ್ಲ!

KannadaprabhaNewsNetwork |  
Published : Nov 26, 2024, 12:47 AM ISTUpdated : Nov 26, 2024, 10:18 AM IST
KSRTC

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವ ಪರಿಸ್ಥಿತಿಯಿದೆ. ಕಳೆದ ಹಲವು ತಿಂಗಳಿನಿಂದ ನೌಕರರ ಭವಿಷ್ಯ ನಿಧಿ ಪಾವತಿಸುವಲ್ಲೂ ನಿಗಮಗಳು ವಿಫಲವಾಗಿದ್ದು, ಅದಕ್ಕಾಗಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

  ಬೆಂಗಳೂರು : ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವ ಪರಿಸ್ಥಿತಿಯಿದೆ. ಕಳೆದ ಹಲವು ತಿಂಗಳಿನಿಂದ ನೌಕರರ ಭವಿಷ್ಯ ನಿಧಿ ಪಾವತಿಸುವಲ್ಲೂ ನಿಗಮಗಳು ವಿಫಲವಾಗಿದ್ದು, ಅದಕ್ಕಾಗಿ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಭವಿಷ್ಯ ನಿಧಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸುವುದು ಹಾಗೂ ಉದ್ಯೋಗದಾತರು ಅದಕ್ಕೆ ಸಮಾನವಾದ ಮೊತ್ತವನ್ನು ನೌಕರರ ಭವಿಷ್ಯ ನಿಧಿ ಖಾತೆಗೆ ಪಾವತಿಸಬೇಕಿದೆ. ಆದರೆ, ನೌಕರರ ವೇತನದಿಂದ ಕಡಿತಗೊಳಿಸಿದ ಮತ್ತು ತಮ್ಮ ಪಾಲವನ್ನು ಭವಿಷ್ಯ ನಿಧಿ ನ್ಯಾಸಕ್ಕೆ ಪಾವತಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ವಿಫಲವಾಗಿವೆ. ಒಟ್ಟಾರೆ ನಾಲ್ಕೂ ನಿಗಮಗಳು ಭವಿಷ್ಯ ನಿಧಿ ನ್ಯಾಸಕ್ಕೆ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬ ಬಡ್ಡಿ ಸೇರಿದಂತೆ 2024ರ ಅಕ್ಟೋಬರ್‌ವರೆಗೆ 2,792.61 ಕೋಟಿ ರು. ಪಾವತಿಸುವುದು ಬಾಕಿ ಉಳಿದಿದೆ. ಈ ಮೊತ್ತ ಪಾವತಿಸಲು ತಮಗೇ ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕೋರಿವೆ.

523.52 ಕೋಟಿ ರು. ಬಡ್ಡಿ ಪಾವತಿಸಬೇಕು:

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲೆಕ್ಕದಂತೆ ಒಟ್ಟು 2,269.09 ಕೋಟಿ ರು. ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ಹೀಗೆ ನಿಗದಿತ ಸಮಯದಲ್ಲಿ ಭವಿಷ್ಯ ನಿಧಿ ಪಾವತಿಸದೆ ವಿಳಂಬ ಮಾಡಿದ್ದಕ್ಕಾಗಿ 523.52 ಕೋಟಿ ರು. ಹೆಚ್ಚುವರಿ ಬಡ್ಡಿ ರೂಪದಲ್ಲಿ ಪಾವತಿಸಬೇಕಿದೆ. ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2021ರ ಸೆಪ್ಟೆಂಬರ್‌ನಿಂದ 2024ರ ಅಕ್ಟೋಬರ್‌ವರೆಗೆ ಸತತ 3 ವರ್ಷಗಳ ಕಾಲ ಭವಿಷ್ಯ ನಿಧಿ ಮೊತ್ತ ಪಾವತಿಸಿಲ್ಲ. ಹೀಗಾಗಿ 821.48 ಕೋಟಿ ರು. ಭವಿಷ್ಯ ನಿಧಿ ಬಾಕಿಗೆ 232.9 ಕೋಟಿ ರು. ವಿಳಂಬ ಬಡ್ಡಿ ಪಾವತಿಸಬೇಕಾಗಿದೆ.

ಇತರ ವೆಚ್ಚಕ್ಕೆ ಭವಿಷ್ಯ ನಿಧಿ ಹಣ ಬಳಕೆ:

ಭವಿಷ್ಯ ನಿಧಿ ಮೊತ್ತ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ಸರ್ಕಾರಕ್ಕೆ ಪತ್ರದ ಮೂಲಕ ಕೋರಿದ್ದಾರೆ. ಈ ಪತ್ರದಲ್ಲಿ ಕೊರೋನಾ ಅವಧಿಯಲ್ಲಿ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿವೆ. ಅದರ ಜತೆಗೆ ತೈಲ ಬೆಲೆ, ವೇತನ ಹೆಚ್ಚಳದಿಂದಾಗಿ ನಿಗಮಗಳ ವೆಚ್ಚ ಹೆಚ್ಚಳವಾಗುವಂತಾಗಿದೆ. ಅದರ ಪರಿಣಾಮ ನೌಕರರ ಮತ್ತು ನಿಗಮಗಳ ವಂತಿಗೆಯ ಭವಿಷ್ಯ ನಿಧಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಭವಿಷ್ಯ ನಿಧಿ ಆಯುಕ್ತರ ಆಕ್ಷೇಪ:

ಹಲವು ತಿಂಗಳಿನಿಂದ ಭವಿಷ್ಯ ನಿಧಿ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭವಿಷ್ಯ ನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾರಿಗೆ ನಿಗಮಗಳಿಗೆ ನೀಡಲಾಗಿರುವ ಭವಿಷ್ಯ ನಿಧಿ ವಿನಾಯಿತಿಯನ್ನು ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗಾದಲ್ಲಿ ಸಾರಿಗೆ ನಿಗಮಗಳು ಬಿಕ್ಕಟ್ಟಿಗೆ ಸಿಲುಕಲಿದ್ದು, ಸಾರಿಗೆ ನೌಕರರಿಗೂ ಸಮಸ್ಯೆ ಎದುರಾಗಲಿದೆ ಎಂದು ಅನ್ಬುಕುಮಾರ್‌ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಮೊತ್ತ 2,269.09 ಕೋಟಿ ರು. ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಅದಕ್ಕಾಗಿ ಇದೀಗ ಸರ್ಕಾರಗಳ ಆಡಳಿತ ಮಂಡಳಿಗಳ ಎಡವಟ್ಟಿನ ನಿರ್ಧಾರದಿಂದಾಗಿ ಕಳೆದೊಂದು ವರ್ಷದಿಂದ ನೌಕರರ ಭವಿಷ್ಯ ನಿಧಿ ಮೊತ್ತ ಪಾವತಿಸದೆ ವಿಳಂಬ ಬಡ್ಡಿ ಸೇರಿದಂತೆ 2,792.61 ಕೋಟಿ ರು. ಬಾಕಿ ಉಳಿಸಿಕೊಂಡಿದೆ

ಭವಿಷ್ಯ ನಿಧಿ ಮೊತ್ತ ಬಾಕಿ ವಿವರ (ಕೋಟಿ ರು.ಗಳಲ್ಲಿ)

ನಿಗಮಬಾಕಿ ಅವಧಿಬಾಕಿ ಮೊತ್ತಬಡ್ಡಿಒಟ್ಟು

ಕೆಎಸ್ಸಾರ್ಟಿಸಿ2023ರ ಮಾ.ನಿಂದ 2024 ಸೆ.683.52209.53893.05

ಬಿಎಂಟಿಸಿ2023 ಜ.ಯಿಂದ 2024 ಸೆ.649.7665.13714.89

ವಾಕರಾಸಾನಿ2021 ಸೆ.ನಿಂದ 2024 ಸೆ.821.48253.921,054.40

ಕಕರಾಸಾನಿ2024 ಏ.ನಿಂದ 2024 ಸೆ.114.3315.94130.27

ಒಟ್ಟು----523.322,269.092,792.61

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ