ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ: ಸಚಿವ ಕೆ.ಜೆ. ಜಾರ್ಜ್‌

KannadaprabhaNewsNetwork | Published : Nov 2, 2023 1:02 AM

ಸಾರಾಂಶ

ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ: ಸಚಿವ ಕೆ.ಜೆ. ಜಾರ್ಜ್‌
ಚಿಕ್ಕಮಗಳೂರು; ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ. ಯಾರೋ ಏನೋ ಹೇಳಿದರೆ ಅದಲ್ಲ ರಾಜಕಾರಣ. ಚುನಾವಣೆ ಫಲಿತಾಂಶ ಏನಿದೆ, ಅದು ರಾಜಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಹಾಗೂ ವೇಣುಗೋಪಾಲ್ ಸಭೆ ನಡೆಸುತ್ತಿದ್ದು, ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಭೆ ಮಾಡುವುದು ಸರ್ವೇ ಸಾಮಾನ್ಯ. ಅದು ನಿರಂತರ ಪ್ರಕ್ರಿಯೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಲು ಮುಕ್ತ ಅವಕಾಶವಿದೆ. ತೀರ್ಮಾನವನ್ನು ಸಿಎಂ, ಡಿಸಿಎಂ, ಹೈ ಕಮಾಂಡ್ ತೆಗೆದುಕೊಳ್ಳುತ್ತದೆ. ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ. ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಏನಾಯಿತೋ ಅದೇ ರಾಜಕಾರಣ ಎಂದು ಬೆಳಗಾವಿ ರಾಜಕೀಯಕ್ಕೆ ಟಾಂಗ್ ಕೊಟ್ಟರು. ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ಸಿನ ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳಲು ಅವಕಾಶವಿದೆ. ತೀರ್ಮಾನ ದೊಡ್ಡವರಿಗೆ ಬಿಟ್ಟದ್ದು. ಇನ್ನು ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಏನೂ ನಡೆಯಲ್ಲ. ಕಾನೂನಿಗೆ ಎಲ್ಲರೂ ಒಂದೇ. ಯಾರೇ ಯಾವುದೇ ರೀತಿಯ ತೊಂದರೆ ಮಾಡಿದರೂ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

Share this article