ಕನ್ನಡಪ್ರಭ ವಾರ್ತೆ ಶಿರಾವೈದ್ಯರು ದೇವರ ಸಮಾನ ಎಂದು ಹೇಳುವ ನಾವು ಅವರ ಜೀವವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದೇವೆ. ಜನರ ಆರೋಗ್ಯವನ್ನು ಕಾಪಾಡುವ ಒಬ್ಬ ವೈದ್ಯಕೀಯ ವಿದ್ಯಾರ್ಥಿನಿಯನ್ನೇ ಈ ರೀತಿ ಅಮಾನುಷವಾಗಿ ಹತ್ಯೆ ಮಾಡಿರುವುದು ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ಅವರು ನಗರದಲ್ಲಿ ಶಿರಾ ವೈದ್ಯಕೀಯ ಸಂಘ ಹಾಗೂ ಬಿಜೆಪಿ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಕೊಲ್ಕತ್ತಾದ ಆರ್.ಜಿ.ಕಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯ.ಮಾನವೀಯತೆ ಇರುವ ಯಾರೂ ಸಹ ಇಂದಹ ಹೇಯ ಕೃತ್ಯ ಮಾಡುವುದಿಲ್ಲ. ಹತ್ಯೆಯಾದ ವಿದ್ಯಾರ್ಥಿನಿಯ ಪೋಷಕರು ನ್ಯಾಯ ಕೇಳಲು ಹೋದಾಗ ಅಲ್ಲಿನ ಪೊಲೀಸರು 3 ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ವಿದ್ಯಾರ್ಥಿನಿಯ ಶವವನ್ನು ತೋರಿಸದೆ, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆ ಕಾಲೇಜಿನ ಪ್ರಾಂಶುಪಾಲ ಹೇಳಿದ್ದಾರೆ. ಇದರ ಹಿಂದೆ ಯಾವುದೋ ಪಿತೂರಿ ಇದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್, ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ. ಶ್ರೀನಾಥ್, ಡಾ. ಡಿ.ಎಂ ಗೌಡ, ಡಾ.ವಿನಯ್, ಡಾ.ರಾಮಕೃಷ್ಣ, ಡಾ.ಅಬ್ಜಲ್ ಉರ್ ರೆಹಮಾನ್, ಡಾ.ಭಾರತಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಚಿಕ್ಕಣ್ಣ, ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಪ್ರಧಾನ ಕಾರ್ಯದರ್ಶಿಗಳಾದ ಕದಿರೇಹಳ್ಳಿ ಮೂರ್ತಿ, ರಂಗನಾಥ್ ಹಾಗೂ ನರಸಿಂಹರಾಜು, ಮಾಜಿ ಅಧ್ಯಕ್ಷರಾದ ರಂಗಸ್ವಾಮಿ, ಅಂತಪುರ ಮಂಜುನಾಥ್, ಹೇಮಲತಾ, ಶೋಭಾ, ತಿಮ್ಮರಾಜಮ್ಮ, ಕವಿತಾ,ಶಕುಂತಲಮ್ಮ, ಮುಖಂಡರಾದ ಗುಮ್ಮನಹಳ್ಳಿ ಈರಣ್ಣ, ರಾಘವೇಂದ್ರ, ಕೊಟ್ಟ ಶ್ರೀನಿವಾಸ್ ಗೌಡ, ತಾವರೆಕೆರೆ ಗ್ರಾ.ಪಂ ಸದಸ್ಯರಾದ ಸ್ನೇಹಪ್ರಿಯ ಶಿವು, ಮುದ್ದರಂಗನಹಳ್ಳಿ ಗ್ರಾ.ಪಂ ಸದಸ್ಯರಾದ ಎಂ. ಶಿವಲಿಂಗಯ್ಯ, ಕೊಟ್ಟ ಗ್ರಾ.ಪಂ ಸದಸ್ಯರಾದ ರಾಜಣ್ಣ, ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗ್ರಾ.ಪಂ ಸದಸ್ಯರಾದ ಗೌಡಪ್ಪ, ಗೋಪಿಕುಂಟೆ ಕುಮಾರ ಮಾಷ್ಟ್ರು, ಪುಷ್ವರಾಧ್ಯ, ಮಾಲತೇಶ್, ಕೆ.ಕೆ ಪಾಳ್ಯ ರವಿಕುಮಾರ್, ಕೋಟೆ ನಾಗರಾಜ್, ಸೈಯದ್ ಬಾಬ, ಪೈಂಟರ್ ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.