ಕೊಡೇಕಲ್: ಸಮೀಪದ ರಾಯನಪಾಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ, ರಾಜಶೇಖರ ಹೊಳಿಕಟ್ಟಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಕೊಡೇಕಲ್‌ನ ನೀಲಾಂಬಿಕ ಕಲ್ಯಾಣ ಮಂಟಪದಲ್ಲಿ ಶಾಲಾಮಂಡಳಿ, ಶಿಕ್ಷಕವೃಂದದವರು ಹಾಗೂ ರಾಯನಪಾಳೆ ಮತ್ತು ಕೊಡೇಕಲ್‌ನ ನಾಗರಿಕ ಬಂಧುಗಳಿಂದ ಹೊಳಿಕಟ್ಟಿ ದಂಪತಿಗೆ ಸನ್ಮಾನಿಸಿ ಗೌರವಿಸಿದರು.
ಶಿಕ್ಷಕ ರಾಜಶೇಖರ ಹೊಳಿಕಟ್ಟಿ ತಮ್ಮ ಸೇವಾ ಅವಧಿಯಲ್ಲಿ ಶಾಲಾ ಎಲ್ಲ ಸಿಬ್ಬಂದಿಯೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರೀತಿ ಪ್ರೇಮದಿಂದ ಬೆರೆತು ಒಳ್ಳೆ ವಿದ್ಯೆ ನೀಡಿ ಮಾದರಿ ವಿದ್ಯಾರ್ಥಿಗಳನ್ನು ನಿರ್ಮಿಸಿ ಶಾಲೆಯ ಕೀರ್ತಿ ತರುವುದಕ್ಕೆ ಅನುವು ಮಾಡಿಕೊಟ್ಟಂತಹ ಅವರಿಗೆ ಅನಂತ ಕೃತಜ್ಞತೆಯನ್ನು ಸಲ್ಲಿಸುತ್ತೆನೆಂದರು.
ರಾಜನಕೋಳೂರಿನ ಸಿ.ಆರ್.ಸಿ ರಮೇಶ ಮಾತನಾಡಿ, ಪ್ರತಿಯೊಬ್ಬ ತಂದೆ-ತಾಯಿಗೆ ಮಕ್ಕಳು ಯೋಗ್ಯನಾಗಬೇಕೆಂಬ ಅಭಿಲಾಷೆ ಇರುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ತರಲಿ ಎಂಬ ಉದ್ದೇಶ ಅವರದ್ದಾಗಿರುತ್ತದೆ. ಆದರೆ, ಶಿಕ್ಷಣ ನೀಡುವ ಶಿಕ್ಷಕರಲ್ಲಿ ಒಳ್ಳೆಯ ಚಾರಿತ್ರ್ಯವಂತರನ್ನಾಗಿ ಮಕ್ಕಳನ್ನು ನಿರ್ಮಾಣ ಮಾಡಬೇಕೆಂಬ ಅಪೇಕ್ಷೆ ಅಲ್ಲದೆ ಅವರ ಸತತ ಪ್ರಯತ್ನವು ಆಗಿರುತ್ತದೆ ಎಂದರು.ಕೊಡೇಕಲ್ ವಲಯದ ಶಿಕ್ಷಕರು ಹಾಗೂ ರಾಯನಪಾಳೆ ಮತ್ತು ಕೊಡೇಕಲ್‌ನ ಗ್ರಾಮಸ್ಥರು ಸೇರಿದಂತೆ ಗಣ್ಯರಿದ್ದರು.