ಜಮಖಂಡಿ ತಾಲೂಕಿನಲ್ಲಿ ಹಿಂದೂ-ಮುಸ್ಲಿಮರು ಮೊದಲಿನಿಂದಲೂ ಸೋದರತ್ವದಿಂದ ಬದುಕುತ್ತಿದ್ದಾರೆ. ಇಲ್ಲಿ ಜಾತಿ ವೈಷಮ್ಯಕ್ಕೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಕಮೀಟಿಯ ನೂತನ ಅಧ್ಯಕ್ಷ ಡಾ. ತೌಫೀಕ್ ಪಾರ್ಥನಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನಲ್ಲಿ ಹಿಂದೂ-ಮುಸ್ಲಿಮರು ಮೊದಲಿನಿಂದಲೂ ಸೋದರತ್ವದಿಂದ ಬದುಕುತ್ತಿದ್ದಾರೆ. ಇಲ್ಲಿ ಜಾತಿ ವೈಷಮ್ಯಕ್ಕೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಕಮೀಟಿಯ ನೂತನ ಅಧ್ಯಕ್ಷ ಡಾ. ತೌಫೀಕ್ ಪಾರ್ಥನಳ್ಳಿ ಹೇಳಿದರು.
ನಗರದ ಪ್ರಮುಖ ಮುಖಂಡರಾದ ಹಾಜಿ ಬಾಬುಸಾಬ ಸಗರ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಅಂಜುಮನ್ ಕಮೀಟಿಯ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಕಾರ್ಯಾಧ್ಯಕ್ಷ ನಜೀರ್ ಕಂಗನೊಳ್ಳಿ, ಸಮಾಜದ ಅಭಿವೃದ್ಧಿ ಹಾಗೂ ಶಾಂತಿ ಕಾಪಾಡುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ಇದೇ ವೇಳೆ ಉಪಾಧ್ಯಕ್ಷರಾದ ರಿಯಾಜ ಅವಟಿ, ಅಲ್ತಾಪ ಭಾಗವಾನ ಅವರನ್ನು ಸನ್ಮಾನಿಸಲಾಯಿತು. ಸಗರ ಕುಟುಂಬದ ಸದಸ್ಯರು ನೂತನ ಪದಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.