ಧಾರವಾಡ:
ಇಲ್ಲಿಯ ಶ್ರೀರಾಮ ಎಚ್‌ಪಿ ಗ್ಯಾಸ್ ಏಜನ್ಸಿಗೆ ಮಂಗಳವಾರ ಭೇಟಿ ನೀಡಿದ ಅವರು, ಗ್ಯಾಸ್ ಏಜೆನ್ಸಿಯ ಮಾಲೀಕರನ್ನು ಉದ್ದೇಶಿಸಿ ಗ್ಯಾಸ್ ಸಿಲಿಂಡರ್ ವಿತರಣೆ ಮತ್ತು ಹಂಚಿಕೆ ಕುರಿತು ವಿಚಾರಿಸಿದರು. ತುಂಬಿದ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ವಿತರಣೆಯಲ್ಲೂ ತೊಂದರೆ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 16,822 ಗೃಹಬಳಕೆ ಸಿಲಿಂಡರ್ ದಾಸ್ತಾನಿದ್ದು ನಿತ್ಯ 10 ಸಾವಿರ ವಿತರಿಸಲಾಗುತ್ತಿದೆ ಎಂದರು.
ಗೃಹಬಳಕೆ ಸಿಲಿಂಡರ್ ವಾಣಿಜ್ಯ ಬಳಕೆಗೆ, ಅನಧಿಕೃತ ಸಂಗ್ರಹಣೆ ಮಾಡಿದರೆ ಅಂತಹವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿ, ಮೊದಲು ಸಾಮಾನ್ಯವಾಗಿ ಪ್ರತಿ ಗ್ಯಾಸ್ ಸಿಲಿಂಡರ್ ಏಜನ್ಸಿ ವಿತರಕರಿಂದ ನಿತ್ಯ ಸರಾಸರಿ 400ರಿಂದ 450 ಸಿಲಿಂಡರ್ ವಿತರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣವು 350ರಿಂದ 360 ವಿತರಿಸಲಾಗುತ್ತಿದೆ. ಈ ಹಿನ್ನೆಲೆ, ಗ್ಯಾಸ್ ಬುಕ್ ಮಾಡಿದ ನಂತರ ವಿತರಣೆಗೆ ಐದಾರು ದಿನ ವಿಳಂಬವಾಗಿದೆ ಎಂದು ತಿಳಿಸಿದರು.ಈ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಶ್ರೀರಾಮ ಏಜನ್ಸಿಯ ಮಾಲೀಕ ಆನಂದ ಇದ್ದರು.