ಕಸಾಪಗೆ ಅಧಿಕಾರಿಗಳ ಸ್ಪರ್ಧೆ ಬೇಡ ಎಂಬ ವಾದದಲ್ಲಿ ಹುರುಳಿಲ್ಲ: ಡಾ.ಸಿ.ಸೋಮಶೇಖರ್

KannadaprabhaNewsNetwork |  
Published : Oct 02, 2026, 01:15 AM IST
 | Kannada Prabha

ಸಾರಾಂಶ

ವಿದ್ಯಾರ್ಥಿ ದಿಸೆಯಿಂದಲೂ ಕನ್ನಡವನ್ನು ಒಪ್ಪಿಕೊಂಡು, ಅಪ್ಪಿಕೊಂಡವನು, ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ಕೇಂದ್ರ ಸೇವೆಗೆ ಆಯ್ಕೆಯಾಗಿ, ತದನಂತರ ರಾಜ್ಯದ ಕೆ.ಎ.ಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿ, ಅಧಿಕಾರಿಯಾಗಿ ಕೆಲಸ ಮಾಡಿದ ಎಲ್ಲ ಕಡೆಯೂ ಕನ್ನಡ ಭಾಷೆ, ನಾಡು, ನುಡಿಗೆ ನನ್ನ ಕೈಲಾದ ಸಹಾಯ, ಸಹಕಾರ ನೀಡುತ್ತಲೇ ಬಂದಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿ, ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ, ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಹಿರಿಯರ ಒತ್ತಾಸೆಯ ಮೇರೆಗೆ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾರರು ಅವಕಾಶ ಕಲ್ಪಿಸುವಂತೆ ಡಾ.ಸಿ.ಸೋಮಶೇಖರ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ. ಅದನ್ನು ಸ್ಥಾಪಿಸಿದವರು ಕೂಡ ಓರ್ವ ಅಧಿಕಾರಿ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಹಾಗಾಗಿ ಕಸಾಪಕ್ಕೆ ಅಧಿಕಾರಿಗಳು ಸ್ಪರ್ಧಿಸುವುದು ಬೇಡ ಎಂಬ ವಾದದಲ್ಲಿ ಯಾವುದೇ ಹುರುಳು ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷ ಆಡಳಿತಗಾರರೆನಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಕಸಾಪಕ್ಕೆ ಆಜೀವ ಸದಸ್ಯರೆಲ್ಲರೂ ಸ್ಪರ್ಧಿಸಲು ಅವಕಾಶವಿದೆ. ಹಾಗಾಗಿ ನಿವೃತ್ತ ಅಧಿಕಾರಿಗಳು ಬೇಡ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿ ದಿಸೆಯಿಂದಲೂ ಕನ್ನಡವನ್ನು ಒಪ್ಪಿಕೊಂಡು, ಅಪ್ಪಿಕೊಂಡವನು, ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ಕೇಂದ್ರ ಸೇವೆಗೆ ಆಯ್ಕೆಯಾಗಿ, ತದನಂತರ ರಾಜ್ಯದ ಕೆ.ಎ.ಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿ, ಅಧಿಕಾರಿಯಾಗಿ ಕೆಲಸ ಮಾಡಿದ ಎಲ್ಲ ಕಡೆಯೂ ಕನ್ನಡ ಭಾಷೆ, ನಾಡು, ನುಡಿಗೆ ನನ್ನ ಕೈಲಾದ ಸಹಾಯ, ಸಹಕಾರ ನೀಡುತ್ತಲೇ ಬಂದಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿ, ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ, ಗಡಿನಾಡಿನ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಹಿರಿಯರ ಒತ್ತಾಸೆಯ ಮೇರೆಗೆ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾರರು ಅವಕಾಶ ಕಲ್ಪಿಸುವಂತೆ ಡಾ.ಸಿ.ಸೋಮಶೇಖರ್ ಮನವಿ ಮಾಡಿದರು.

ಏಕಕಾಲದಲ್ಲಿ ಅಧಿಕಾರಿಯಾಗಿ, ಸಾಹಿತಿಯಾಗಿ, ಲೇಖಕನಾಗಿ ನನ್ನ ಕೈಲಾದಷ್ಟು ತಾಯಿ ಭುವನೇಶ್ವರಿಯ ಸೇವೆ ಮಾಡಿದ್ದೇನೆ. ಸಂಸ್ಕೃತಿ ಮತ್ತು ಪ್ರಗತಿ ಆಡಳಿತ ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಚನಗಳಲ್ಲಿ ಸಾಮಾಜಿಕ ಪರಿಕಲ್ಪನೆ ಎಂಬ ಪ್ರಬಂಧಕ್ಕೆ ಹಂಪಿ ವಿವಿಯಿಂದ ಡೀ ಲೀಟ್ ಪದವಿ ಹಾಗೂ ಕರ್ನಾಟಕ ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದೇನೆ. ಚಿಂತನ ಚಿಲುಮೆ, ಚಿಂತನ ಕಿರಣ, ಮಾತೆಂಬುದು ಜ್ಯೋತಿರ್ಲಿಂಗ, ಅರಿವೇ ಗುರು ನನ್ನ ಲೇಖನಿಯಿಂದ ಮೂಡಿ ಬಂದ ಕೃತಿಗಳು, ಕಸಾಪವನ್ನು ಕನ್ನಡಿಗರ ಸ್ವಾಭಿಮಾನದ ಸಂಸ್ಥೆಯಾಗಿ ರೂಪಿಸುವುದು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಕಲೆಗಳು ರಕ್ಷಣೆಯ ಜೊತೆಗೆ, ನಿಂತು ಹೋಗಿರುವ ಹಲವು ಚಟುವಟಿಕೆಗಳನ್ನು ಪುನರಾರಂಭಿಸುವ ಆಶಯ ಹೊಂದಿದ್ದು, ಕಸಾಪ ಆಜೀವ ಸದಸ್ಯರು ನನಗೆ ಮತ ನೀಡಬೇಕೆಂದು ಡಾ.ಸಿ.ಸೋಮಶೇಖರ್ ಕೋರಿದರು.

ಕಲಾಶ್ರೀ ಡಾ.ಲಕ್ಷ್ಮ ಣ್‌ದಾಸ್ ಅವರು, ಡಾ.ಸಿ.ಸೋಮಶೇಖರ್ ಮತ್ತು ತುಮಕೂರಿಗೂ ಅವಿನಾಭಾವ ಸಂಬಂಧ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕಾಲದಿಂದಲೂ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಜಿಲ್ಲಾಧಿಕಾರಿಯಾಗಿ ಅತಿ ಹೆಚ್ಚು ದಿನ ಕೆಲಸ ಮಾಡಿದ್ದಾರೆ.ಅವರು ತುಮಕೂರಿನ ಮಗನಿದ್ದಂತೆ, ಹಾಗಾಗಿ ಸಾಹಿತ್ಯಾಸಕ್ತರು ಅವರನ್ನು ಬೆಂಬಲಿಸಬೇಕೆಂದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್, ಸಂಶೋಧಕ ಹಾಗೂ ನಿವೃತ್ತ ಉಪನ್ಯಾಸಕ ಡಾ.ಡಿ.ಎನ್.ಯೋಗೀಶ್ವರಪ್ಪ, ಹಿರಿಯರಾದ ಡಾ.ಪದ್ಮಪ್ರಸಾದ್, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ರಾಕ್‌ಲೈನ್ ರವಿಕುಮಾರ್, ಡಾ.ಲೀಲಾವತಿ, ಡಾ.ಎಂ.ಜಿ.ಸಿದ್ದರಾಮಯ್ಯ, ನೌಕರರ ಸಂಘದ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಅವರು ಡಾ.ಸಿ.ಸೋಮಶೇಖರ್ ಅವರನ್ನು ಬೆಂಬಲಿಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಎಂ.ವಿ.ಬಸವರಾಜು,ಡಿ.ಎಂ.ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ