ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಹಾಕದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ

KannadaprabhaNewsNetwork |  
Published : Oct 11, 2025, 12:02 AM IST
36 | Kannada Prabha

ಸಾರಾಂಶ

ಶಿವರಾಮಕಾರಂತರ ವ್ಯಕ್ತಿತ್ವ ಬಹುಬಗೆಯದು. ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಹಾಕದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ ಎಂಬ ನುಡಿ ಪ್ರಸಿದ್ಧವಾಗಿದೆ, ಕಾರಂತರು ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಒಳ್ಳೆಯ ಪ್ರಭುತ್ವವವನ್ನು ಹೊಂದಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ವಿಜಯವಿಠಲ ವಿದ್ಯಾಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಶಿವರಾಮ ಕಾರಂತರ ಜನ್ಮದಿನವನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೊಸಗನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ ಕೋಟ ಶಿವರಾಮ ಕಾರಂತರು, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಸಾಧನೆ ಮಾಡಿದ್ದಾರೆ. ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸ ಸಾಹಿತ್ಯ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತರೂಪಕ, ಪ್ರಬಂಧ, ಗ್ರಂಥ ಸಂಪಾದನೆ, ಪತ್ರಿಕೋದ್ಯಮ, ನಿಘಂಟು ರಚನೆ, ವಿಶ್ವಕೋಶ, ಮಕ್ಕಳ ಸಾಹಿತ್ಯ, ಚಲನಚಿತ್ರ ಶಿಕ್ಷಣ, ಕಲೆ ಹಾಗೂ ಯಕ್ಷಗಾನ - ಹೀಗೆ ಎಲ್ಲರೂ ಗಮನಿಸುವಂತಹ ವೈವಿಧ್ಯಪೂರ್ಣ, ಸತ್ವಪೂರ್ಣ, ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು.

ಶಿವರಾಮಕಾರಂತರ ವ್ಯಕ್ತಿತ್ವ ಬಹುಬಗೆಯದು. ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಕೈಹಾಕದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ ಎಂಬ ನುಡಿ ಪ್ರಸಿದ್ಧವಾಗಿದೆ, ಕಾರಂತರು ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಒಳ್ಳೆಯ ಪ್ರಭುತ್ವವವನ್ನು ಹೊಂದಿದ್ದರು. ತಮ್ಮ ಬರವಣಿಗೆಯ ಮೊದಲ ಕೃತಿಯಾಗಿ ರಾಷ್ಟ್ರಗೀತ ಸುಧಾಕರ ಎಂಬ ಕವನ ಸಂಕಲನ, ವಿಚಿತ್ರಕೂಟ ಇವರ ಮೊದಲ ಕಾದಂಬರಿ. ಇವರ ಕಾದಂಬರಿಗಳು ಸಮಾಜದ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಇವರ ಮರಳಿ ಮಣ್ಣಿಗೆ ಎಂಬ ಕಾದಂಬರಿ ಪ್ರಸಿದ್ಧವಾಗಿದೆ. ಮೂರು ತಲೆ ಮಾರುಗಳ ಗ್ರಾಮೀಣ ಚಿತ್ರಣವಿರುವ ಇದು ಇಂಗ್ಲಿಷ್, ಹಿಂದಿ, ತಮಿಳು ಭಾಷೆಗೆ ಅನುವಾದವಾಗಿದೆ ಎಂದರು.

ಇವರ ಮೂಕಜ್ಜಿಯ ಕನಸುಗಳು ನಮ್ಮ ನಾಡಿನ ಧಾರ್ಮಿಕ ಕಲ್ಪನೆಗಳ ನಾಲ್ಕೈದು ಸಾವಿರ ಇತಿಹಾಸಗಳನ್ನು ಹೇಳಲು ಹೊಸ ತಂತ್ರದಿಂದ ಮೂಡಿಬಂದ ಕಾದಂಬರಿ. ಈ ಕೃತಿಗೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವು ಪ್ರಯೋಗಗಳನ್ನು ನಡೆಸಿ ಪ್ರಾಥಮಿಕ ತರಗತಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಬರೆದಿದ್ದಾರೆ. ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ತಮ್ಮಆತ್ಮಕಥೆಯನ್ನು ಬರೆದಿದ್ದಾರೆ. ಪರಿಸರ, ನಾಗರಿಕತೆ ಮುಂತಾದ ವಿಷಯಗಳಿಂದ ವಿಶ್ವಕೋಶದವರೆಗೆ ಕೆಲಸ ಮಾಡಿದಅವರದೇಒಂದುಜಗತ್ತು. ವಿಜ್ಞಾನ ಪ್ರಪಂಚದ ಸಂಪುಟಗಳು ಇದಕ್ಕೆ ಸಾಕ್ಷಿ ಎಂದರು.

ಕನ್ನಡ ಶಿಕ್ಷಕರಾದ ವಿನಯ್, ಅಮರನಾಥ್, ನಾಗರೇಖಾ, ಆರತಿ, ಉಪನ್ಯಾಸಕರಾದ ಎಸ್.ಎಸ್. ರಮೇಶ್ ಮತ್ತು ಬಿ.ಜಿ. ದಿವ್ಯಶ್ರೀ ಇದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ