
ಅಂತರಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಡಿ. ಗೊಲ್ಲರಹಟ್ಟಿಯಲ್ಲಿ ಬೇಸಿಗೂ ಮುನ್ನವೇ ಬವಣೆ
ಅಂತರಘಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಡಿ. ಗೊಲ್ಲರಹಟ್ಟಿ (ಸಿ.ದಾಸರಹಳ್ಳಿ ಗೊಲ್ಲರಹಟ್ಟಿ) ಗ್ರಾಮದ ಮನೆಗಳಿಗೆ ಕಳೆದ 7-8 ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಊರ ಹೊರಭಾಗದ ಕೊಳವೆಬಾವಿಗಳಿಂದ ನೀರು ತರುವ ಅನಿವಾರ್ಯತೆ ಎದುರಾಗಿದೆ.ಗ್ರಾಮದಲ್ಲಿ ಕುಡಿಯುವ ನೀರಿಗೆ ಆಧಾರವಾಗಿರುವವೆರಡು ಕೊಳವೆಬಾವಿಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿತ್ತು. ಆದರೆ ಮಳೆಗಾಲದಲ್ಲಿ ನಿರೀಕ್ಷಿತ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದು ಈ ಕೊಳವೆಬಾವಿಗಳಲ್ಲಿ ನೀರಿನ ಸೆಲೆ ಕಡಿಮೆಯಾಗಿದೆ. ಪಂಪ್ ಚಾಲನೆ ಮಾಡಿದರೂ ಪೈಪ್‌ಗಳ ಮೂಲಕ ಮನೆಗಳಿಗೆ ತಲುಪುವಷ್ಟು ನೀರು ದೊರೆಯುತ್ತಿಲ್ಲ. ಹೀಗಾಗಿ ಕೊಳವೆಬಾವಿ ಬಳಿಗೆ ತೆರಳಿ ನೀರು ತಂದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಅದೂ ವಿದ್ಯುತ್ ಇದ್ದಾಗ ಮಾತ್ರ ನೀರು ಸಿಗುವುದರಿಂದ ಗ್ರಾಮಸ್ಥರು ವಿದ್ಯುತ್ ಬರುವುದನ್ನೇ ಕಾಯುವಂತಾಗಿದೆ. ಕೆಲ ಮಹಿಳೆಯರು ಖಾಸಗಿ ಕೊಳವೆಬಾವಿಗಳಿಂದಲೂ ನೀರು ಹೊತ್ತು ತರುತ್ತಿದ್ದಾರೆ. ಮನೆಗಳಿಗೆ ನೀರು ಪೂರೈಕೆಯಾಗದೆ ದಿನ ನಿತ್ಯದ ಬಳಕೆಗೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಟಾಸ್ಕ್‌ಫೋರ್ಸ್ ನಿರ್ದೇಶನದಂತೆ ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಎರಡು ಕೊಳವೆಬಾವಿಗಳನ್ನು ಕೊರೆಯಿಸ ಲಾಗಿತ್ತು. ಆದರೆ ಅವುಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಲಭ್ಯವಾಗದೆ ಪ್ರಯತ್ನ ವಿಫಲವಾಗಿತ್ತು. ನಂತರ ಅಲ್ಪಸ್ವಲ್ಪ ಮಳೆಯಾದಾಗ ಹಳೆ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕೊಂಚ ಹೆಚ್ಚಾಗಿತ್ತಾದರೂ, ಇದೀಗ ಮತ್ತೆ ಕಡಿಮೆಯಾಗಿದೆ.ಈ ಹಿನ್ನೆಲೆಯಲ್ಲಿ ಅಂತರಘಟ್ಟೆ ಕೆರೆ ಸಮೀಪದ ವಿದ್ಯಾನಗರದಲ್ಲಿ ನೀರಿನ ಲಭ್ಯತೆ ಇರುವ ಸ್ಥಳ ಗುರುತಿಸಿ ಹೊಸ ಕೊಳವೆ ಬಾವಿ ಕೊರೆದು, ಅಲ್ಲಿಂದ ಪೈಪ್‌ಲೈನ್ ಮೂಲಕ ಸಿ.ಡಿ.ಗೊಲ್ಲರಹಟ್ಟಿಗೆ ನೀರು ಪೂರೈಸುವ ಪ್ರಸ್ತಾವನೆ ಟಾಸ್ಕ್‌ಫೋರ್ಸ್‌ಗೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕೊಳವೆಬಾವಿ ಕೊರೆಸುವ ನಿರೀಕ್ಷೆಯಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಗಂಗಾಧರ್ ತಿಳಿಸಿದ್ದಾರೆ.ತುರ್ತು ಕ್ರಮಕ್ಕೆ ಒತ್ತಾಯ: ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಕೊಳವೆಬಾವಿ ಬಳಿಗೆ ತೆರಳಿ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಈ ಪರಿಸ್ಥಿತಿ ಎದುರಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕ ಗ್ರಾಮಸ್ಥರಲ್ಲಿದೆ. ಕೂಡಲೇ ಹೊಸ ಕೊಳವೆಬಾವಿ ಕೊರೆಸಿ ಪೈಪ್‌ಲೈನ್ ಮೂಲಕ ಮನೆಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ....ಕೋಟ್...ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ಲಭ್ಯವಿರುವ ನೀರನ್ನು ಪೂರೈಸ ಲಾಗುತ್ತಿದೆ. ವಿದ್ಯಾನಗರ ಬಳಿ ಹೊಸ ಕೊಳವೆಬಾವಿ ಕೊರೆದು ಪೈಪ್‌ಲೈನ್ ಅಳವಡಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು.
- ಸಿ.ಆರ್.ಪ್ರವೀಣ್ ಇಒ, ಕಡೂರು ತಾಲೂಕು ಪಂಚಾಯಿತಿ....ಕೋಟ್...
- ಹಾಲೇಶ್ , ಗ್ರಾಮಸ್ಥರು, ಸಿ.ಡಿ.ಗೊಲ್ಲರಹಟ್ಟಿ